ಮಹಾತ್ಮಾ ಗಾಂಧೀಜಿಯವರ ಬಗ್ಗೆ ನಿಮಗೆಷ್ಟು ಗೊತ್ತು..?
ಇಂದಿಗೂ ಎಷ್ಟೋ ಜನರಿಗೆ ಮಾದರಿ ಎನಿಸಿರುವ ನಾಯಕ ನಮ್ಮ ಮಹಾತ್ಮಾ ಗಾಂಧೀಜಿ. ಇದ್ದಷ್ಟು ದಿನ ಬೇರೆಯವರಿಗೆ ಮಾದರಿಯಾಗಿ ಬಾಳಿದ ಕೀರ್ತಿ ಅವರದ್ದು. ಬರಾಕ್ ಒಬಾಮಾರಂತಹ ನಾಯಕರೂ ಕೂಡಾ ಮಹಾತ್ಮಾ ಗಾಂಧೀಜಿ ಅಭಿಮಾನಿಗಳು ಎಂದರೆ ಅಚ್ಚರಿಯಿಲ್ಲ. ಆದರೆ ಗಾಂಧೀಜಿಯವರ ಬಗ್ಗೆ ತಿಳಿಯದ ಹತ್ತಾರು ಸಂಗತಿಗಳಿವೆ. ಅವು ಯಾವುವೆಂದರೆ..
1. ನೊಬೆಲ್ ಪ್ರಶಸ್ತಿಗೆ 5 ಬಾರಿ ನಾಮನಿರ್ದೇಶನ
ಮಹತ್ಮಾ ಗಾಂಧೀಜಿಯವರು ತಾವು ಮಾಡಿದ ಸಾಧನೆಗಾಗಿ ಸುಮಾರು 15 ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದರು. ಆದರೆ ಒಮ್ಮೆಯೂ ಕೂಡಾ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಲಿಲ್ಲ.
2. ಪ್ರತಿದಿನ 11 ಮೈಲಿ ನಡೆಯುತ್ತಿದ್ದರಂತೆ..!
ಮಹಾತ್ಮಾ ಗಾಂಧೀಜಿಯವರು ಪ್ರತಿ ದಿನ ಸುಮಾರು 11 ಮೈಲಿ ನಡೆಯುತ್ತಿದ್ದರು. ಅದೂ ಸುಮಾರು ಸುದೀರ್ಘ 40 ವರ್ಷಗಳ ಕಾಲ. ಇದು ಎರಡು ಬಾರಿ ವಿಶ್ವವನ್ನೇ ಸುತ್ತಿದ್ದಕ್ಕೆ ಸಮ.
3. ಇಂಗ್ಲೆಂಡ್ ನಿಂದ ಸ್ಟಾಂಪ್ ಬಿಡುಗಡೆ
ಭಾರತದಿಂದ ಆಂಗ್ಲರನ್ನು ಹೊಡೆದೋಡಿಸಿದ ಮಹಾತ್ಮಾ ಗಾಂಧೀಜಿಯವರ ನೆನಪಿಗಾಗಿ 1969ರಲ್ಲಿ ಇಂಗ್ಲೇಂಡ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಿತ್ತು.
4. ಹಿಟ್ಲರ್ ಗೆ ಪತ್ರ ಬರೆದಿದ್ದರು..!
23.7.1939ರಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಗೆ ಮಹಾತ್ಮ ಗಾಂಧೀಜಿ ಪತ್ರವೊಂದನ್ನು ಬರೆದಿದ್ದರು. ಅಲ್ಲದೇ ಟಾಲ್ ಸ್ಟಾಯ್, ಐನ್ ಸ್ಟೀನ್ ಗೆ ಪತ್ರ ಬರೆದಿದ್ದರು. ಅಲ್ಲದೇ ಆ ಪತ್ರದ ಪ್ರತಿಗಳು ಇಂದಿಗೂ ಸುರಕ್ಷಿತವಾಗಿವೆ.
5. ಕಾಂಗ್ರೆಸ್ ಸೊರಗುತ್ತಿದೆ ಎಂದಿದ್ದರು
ಮಹಾತ್ಮಾ ಗಾಂಧೀಜಿ ಸಾಯುವ ಮುನ್ನ ಕಾಂಗ್ರೆಸ್ ಏಕೋ ಸೊರಗುತ್ತಿದೆ ಎಂಬ ಭಾವನೆ ಅವರ ಮನದಲ್ಲಿ ಮೂಡಿತ್ತು. ಅಲ್ಲದೇ ಅದನ್ನು ಬಹಿರಂಗವಾಗಿ ಹೇಳಿದ್ದರು.
6. ಗಾಂಧೀಜಿ ಆದರ್ಶ ಪಾಲಿಸಿದ ಜಾಬ್ಸ್
ಆ್ಯಪಲ್ ನ ಸ್ಥಾಪಕ ಸ್ಟೀವ್ ಜಾಬ್ಸ್ ಮಹಾತ್ಮ ಗಾಂಧೀಜಿಯವರ ಅಭಿಮಾನಿಯಾಗಿದ್ದರು. ಆದ್ದರಿಂದ ಗಾಂಧೀಜಿಯವರು ಬಳಸುತ್ತಿದ್ದ ಮಾದರಿಯ ಕನ್ನಡಕವನ್ನೇ ಅವರೂ ಬಳಸುತ್ತಿದ್ರು.
7. ಐರಿಶ್ ಮಿಶ್ರಿತ ಇಂಗ್ಲೀಷ್ ಮಾತನಾಡುತ್ತಿದ್ದರು
ಮಹಾತ್ಮಾ ಗಾಂಧೀಜಿಯವರು ಇಂಗ್ಲೀಷ್ ಮಾತನಾಡಲು ಆರಂಬಿಸಿದರೆ ಅದರಲ್ಲಿ ಐರಿಶ್ ಭಾಷೆಯೂ ಮಿಶ್ರಿತವಾಗಿರುತ್ತಿತ್ತು. ಏಕೆಂದರೆ ಗಾಂಧೀಜಿಯವರ ಮೊದಲ ಇಂಗ್ಲೀಷ್ ಶಿಕ್ಷಕ ಐರ್ಲೆಂಡ್ಗೆ ಸೇರಿದವರಾಗಿದ್ದರು.
8.ವಿವಿಧ ದೇಶಗಳ 48 ರಸ್ತೆಗಳಿಗೆ ಗಾಂಧೀಜಿ ಹೆಸರು
ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಭಾರತದ ಸುಮಾರು 53 ಪ್ರಮುಖ ರಸ್ತೆಗಳಿಗೆ ಇಡಲಾಗಿದೆ. ಅಲ್ಲದೇ ವಿವಿಧ ದೇಶಗಳ 48 ರಸ್ತೆಗಳಿಗೂ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಇಡಲಾಗಿದೆ.
9. ಫುಟ್ ಬಾಲ್ ಕ್ಲಬ್ ಗಳಿಗೆ ಸಹಾಯ
ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾಗೆ ತೆರಳಿದ್ದಾಗ ಮೂರು ಫುಟ್ಬಾಲ್ ಕ್ಲಬ್ ಗಳಿಗೆ ಸಹಾಯ ಮಾಡಿದ್ದರು. ಪ್ರಿಟೋರಿಯಾ, ಡರ್ಬನ್, ಜೋಹಾನ್ಸ್ ಬರ್ಗ್ ಗಳೇ ಆ ಫುಟ್ಬಾಲ್ ಕ್ಲಬ್ ಗಳಾಗಿದ್ದವು. ವಿಶೇಷವೆಂದರೆ ಅವುಗಳಿಗೆ ಪ್ಯಾಸ್ಸಿವ್ ರೆಸಿಸ್ಟರ್ಸ್ ಸಾಕರ್ ಕ್ಲಬ್ ಎಂಬ ಒಂದೇ ಹೆಸರನ್ನಿಟ್ಟಿದ್ದರು.
10. 8 ಕಿಲೋ ಮೀಟರ್ವರೆಗೆ ಶವಯಾತ್ರೆ ನಡೆದಿತ್ತು
ಮಹಾತ್ಮಾ ಗಾಂಧೀಜಿಯವರ ಶವಯಾತ್ರಯು ಸುಮಾರು 8 ಕಿಲೋಮೀಟರ್ವರೆಗೆ ನಡೆದಿತ್ತು. ಆ ವೇಳೆ ಅಪಾರ ಪ್ರಮಾಣದ ಜನರು ಪಾಲ್ಗೊಂಡಿದ್ದರು