ಏನೂ ಇಲ್ಲದಿದ್ದವರು ಏನೇನೋ ಆದರು ..! ಈ 10 ಮಂದಿ ಸಾಧನೆಗೆ ಸಲಾಂ ..!

Date:

ಏನೂ ಇಲ್ಲದಿದ್ದವರು ಏನೇನೋ ಆದರು ..! ಈ 10 ಮಂದಿ ಸಾಧನೆಗೆ ಸಲಾಂ ..!

ಸೆಲೆಬ್ರಿಟಿಗಳೆಂದರೆ ಹೆಚ್ಚಾಗಿ ತನ್ನ ಕ್ಷೇತ್ರದ ಹಿನ್ನೆಲೆಯಿಂದಲೇ ಬಂದಿರುತ್ತಾರೆ. ಇನ್ನೂ ಕೆಲವರು ಹೆತ್ತವರ ಹೆಸರು ಹೇಳಿಕೊಂಡು ಎತ್ತರಕ್ಕೆ ಬೆಳೆದಿರುತ್ತಾರೆ. ಆದರೆ ಕೆಲವರು ಮಾತ್ರ ಕಷ್ಟದಲ್ಲೇ ಬೆಳೆದು ಎತ್ತರಕ್ಕೆ ಏರಿರುತ್ತಾರೆ. ಅದರಲ್ಲೂ ಈ ಕೆಳಗಿನ 10 ಜನರ ಸ್ಟೋರಿ ಕೇಳಿದ ಮೇಲೆ ನಿಮಗೆ ಆ ಮಾತು ನಿಜ ಎನ್ನಿಸುತ್ತದೆ.

1. ಕಣ್ಣಿಲ್ಲದವಳು ಇತಿಹಾಸ ಸೃಷ್ಠಿಸಿದಳು..!

1

ಆಕೆಗೆ ಕಣ್ಣಿಲ್ಲ. ತನ್ನ ಪರಿಸ್ಥಿತಿಯನ್ನು ಕಂಡು ಮರಗುವ ಮನಸ್ಸೂ ಆಕೆಗಿರಲಿಲ್ಲ. ಆದ್ದರಿಂದ ಐ.ಎಫ್.ಎಸ್ (ಇಂಡಿಯನ್ ಫಾರಿನ್ ಸರ್ವಿಸ್) ಇತಿಹಾಸದಲ್ಲೇ ಮೊದಲ ಬಾರಿಗೆ 100 ಪರ್ಸೆಂಟ್ ಅಂಕ ಪಡೆದ ಸಾಧನೆ ಮಾಡಿದ್ದಾಳೆ. ಯೆಸ್.. ಕಣ್ಣೇ ಕಾಣದ ಬೆನೋ ಝೆಫಿನ್ ಎಂಬ ಯುವತಿ ಈ ಸಾಧನೆ ಮಾಡಿ ಇಡೀ ಭಾರತವನ್ನೇ ಅಚ್ಚರಿಯ ಕಡಲಲ್ಲಿ ತೇಲಿಸಿದ್ದಾಳೆ. ಇಷ್ಟಕ್ಕೂ ಈಕೆ ಪರೀಕ್ಷೆ ಬರೆದಿದ್ದು ಬ್ರೈಲ್ ಲಿಪಿ ಬಳಸಿ..!

2. ಕೈಕಾಲು ಇಲ್ಲದವನ ಸಾಧನೆ ಕಂಡಿರಾ..?

2

ಆತನ ಹೆಸರು ರಾಜಾ ಮಹೇಂದ್ರ ಪ್ರತಾಪ್ ಅಂತ. 5ನೇ ವಯಸ್ಸಿನಲ್ಲೇ ಕೈಕಾಲುಗಳೆರಡನ್ನೂ ಕಳೆದುಕೊಂಡಿದ್ದ. ಆದರೆ ಛಲವನ್ನಲ್ಲ ಎಂಬುದನ್ನು ಇಂದು ಆತ ಮಾಡಿತೋರಿಸಿದ್ದಾನೆ. ಕೈ ಬೆರಳುಗಳಿಲ್ಲದೆಯೇ ಎಂ.ಬಿ.ಎ ಪರೀಕ್ಷೆ ಪಾಸಾದ ಈತ ಇಂದು ಅಹ್ಮದಾಬಾದ್ ನ ಓ.ಎನ್.ಜಿ.ಸಿ.ಯಲ್ಲಿ ಫೈನಾನ್ಸ್ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ..!

3. ಸ್ಫೂರ್ತಿ ಸೆಲೆ ಅಕ್ಕೈ

3

ಆಕೆ ಅಕ್ಕೈ ಪದ್ಮಸಾಲಿ.. ಆಗಿನ್ನು ವಯಸ್ಸು 12. ತನ್ನನ್ನು ಹಿಜಡಾ ಎಂದು ಕರೆಯುತ್ತಿದ್ದ ಜನರನ್ನು ಕಂಡು ರೋಸಿ ಹೋಗಿದ್ದ ಆಕೆ, ಆತ್ಮಹತ್ಯೆಗೂ ಯತ್ನಿಸಿದಳು. ಅದು ಫಲಿಸಲಿಲ್ಲ. ಆದರೆ ಇಂದು ಆಕೆಯ ಮಾತುಗಳನ್ನು ಕೇಳಲು ದೇಶ-ವಿದೇಶಗಳಿಂದ ಆಹ್ವಾನ ಬರುತ್ತಿವೆ. ಹಿಜಡಾ ಎಂದವರೇ ಪ್ರೀತಿಯಿಂದ ಅಕ್ಕೈ ಎನ್ನುತ್ತಿದ್ದಾರೆ. ಇಷ್ಟಕ್ಕೂ ಅಕ್ಕೈನ ಮಾತುಗಳಿಂದ ಪ್ರೇರೇಪಿತವಾಗಿದ್ದ ಜಪಾನಿಗರು 2014ರಲ್ಲಿ ಆಕೆಯನ್ನು ಟೋಕಿಯೋದಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಬಾರ್ ಅಸೋಷಿಯೇಷನ್ ನಲ್ಲಿ ಮಾತನಾಡಲು ಆಹ್ವಾನಿಸಿತ್ತು ಎಂದರೆ ಅಕ್ಕೈನ ಮಾತುಗಳಿಗೆ ಎಂಥಾ ಬೆಲೆಯಿದೆ ಎಂಬುದು ಅರ್ಥವಾಗುತ್ತದೆ.

4. ಬಲು ಎತ್ತರಕ್ಕೇರಿದ ಕುಳ್ಳಿ

Poonam-Shroti

ಆಕೆ ನೋಡಲು ತುಂಬಾ ಕುಳ್ಳಗಿದ್ದಾಳೆ. ಆದರೆ ಎಂಬಿಎ ಪದವಿ ಮುಗಿಸಿ ಒಂದು ದೊಡ್ಡ ಸೊಸೈಟಿಯಲ್ಲಿ ಉದ್ಯೋಗ ಮಾಡುತ್ತಿದ್ದಾಳೆ. ಅದರಲ್ಲೂ 6 ವರ್ಷಗಳ ಆಕೆಯ ಸಾಧನೆಯನ್ನು ಗುರುತಿಸಿ ಆ ಸಂಸ್ಥೆಯು ಕೆಲಸ ನೀಡಿದೆ ಎಂದರೆ ಆಕೆ ಎಷ್ಟೊಂದು ಬುದ್ದಿಶಾಲಿ ಎಂಬುದು ಅರ್ಥವಾಗುತ್ತದೆ. ಇಷ್ಟಕ್ಕೂ ಆಕೆಯ ಹೆಸರು ಪೂನಮ್ ಶ್ರೋತಿ ಅಂತ.

5. ಬಾಲ್ಯ ವಿವಾಹ ಕಂಡಲ್ಲಿ ಹಾಜರಾಗ್ತಾಳೆ ರೋಶ್ನಿ..!

6

ಆಕೆಗೆ ಕೇವಲ 14ನೇ ವರ್ಷಕ್ಕೆ ಮದುವೆ ಮಾಡಲಾಯಿತು. ಬಾಲ್ಯ ವಿವಾಹದಿಂದ ಆಕೆ ಸಂಕಷ್ಟವನ್ನೂ ಅನುಭವಿಸಿದಳು. ಗಂಡ ಎನಿಸಿಕೊಂಡವನ ಕಿರುಕುಳ ಕಂಡು, ತನ್ನಂತೆ ಬೇರೆ ಹುಡುಗಿಯರು ಸಂಕಷ್ಟ ಅನುಭವಿಸಬಾರದು ಎಂಬ ನಿಧರ್ಾರಕ್ಕೆ ಬಂದಿದ್ದಾಳೆ ರೋಶ್ನಿ ಭೈರ್ವಾ ಅನ್ನೋ ಯುವತಿ. ಆದ್ದರಿಂದ ತನ್ನ ಊರಿನಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯುತ್ತಿದ್ದರೂ ಕೂಡಾ ಅಲ್ಲಿಗೆ ರೋಶ್ನಿ ಹಾಜರಾಗುತ್ತಾಳೆ. ಬಾಲ್ಯ ವಿವಾಹವನ್ನೂ ತಡೆಯುತ್ತಾಳೆ. ಅಲ್ಲದೇ ಹುಡುಗಿಯರಿಗೆ ವಿದ್ಯಾಭ್ಯಾನ ನೀಡುವಂತೆ ಒತ್ತಿ ಹೇಳುತ್ತಾಳೆ. ಸ್ವತಃ ರೋಶ್ನಿಯೂ ಕೂಡಾ ಬಿಎ ಪದವಿ ಪಡೆದಿದ್ದಾಳೆ.

6. ರೈತನ ಮಗ ಚಾರಿತ್ರಿಕ ದಾಖಲೆ ಸೃಷ್ಟಿಸಿದ..!

8

ಶ್ರೀಮಂತರ ಕ್ರೀಡೆ ಎಂದು ಕರೆಯಲ್ಪಡುವ ಆಟಗಳಲ್ಲಿ ಗಾಲ್ಫ್ ಗೂ ಒಂದು ಸ್ಥಾನವಿದೆ. ಆದರೆ ಕರ್ನಾಟಕದ ರೈತನ ಮಗ ಚಿಕ್ಕರಂಗಪ್ಪ ಕೇವಲ 11ನೇ ವಯಸ್ಸಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದ್ದ. ಗಾಲ್ಫ್ ಲೋಕದ ಗಮನವನ್ನು ತನ್ನೆಡೆಗೆ ಸೆಳೆದಿದ್ದ. ಇಷ್ಟಕ್ಕೂ ಆತ ಗಾಲ್ಫ್ ಅಭ್ಯಾಸ ಆರಂಭಿಸಿದ್ದು ತನ್ನ ತಂದೆ ಕೆಲಸ ಮಾಡುತ್ತಿದ್ದ ಯಜಮಾನನ ಬಳಿ..! ಅಲ್ಲಿಂದಲೇ ಆರಂಭವಾದ ಗಾಲ್ಫ್ ಜರ್ನಿ ಇಂದಿಗೂ ನಿರಾತಂಕವಾಗಿ ಮುಂದುವರೆದಿದೆ.

7. ಬೋಡೋ ಉಗ್ರರೊಂದಿಗೆ ಕಾದಾಡುವ ಲೇಡಿ ಐಪಿಎಸ್..!

SANJUKTA PARASHAR(IPS Officer, Dedicated Career Woman, Wife and Mother)
ಅಸ್ಸಾಂನಲ್ಲಿ ಬೋಡೋ ಉಗ್ರರ ಹಾವಳಿ ಸದಾ ಹೆಚ್ಚಾಗಿರುತ್ತದೆ. ಅಂತಹ ಪ್ರದೇಶದಲ್ಲಿ ಸಂಜುಕ್ತಾ ಪರಾಶರ್ ಎಂಬ ಐಪಿಎಸ್ ಒಬ್ಬರು ಧಿಟ್ಟತನದಿಂದ ಹೋರಾಡುತ್ತಿದ್ದಾರೆ. ಅಲ್ಲದೇ ರಾತ್ರಿ ಪಾಳಿ ಕೆಲಸವನ್ನೂ ಮಾಡುವ ಮೂಲಕ ಉಗ್ರರ ಹೋರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ವಿಶೇಷವೆಂದರೆ ಸಂಜುಕ್ತಾರವರು ಯು.ಪಿ.ಎಸ್.ಸಿಯಲ್ಲಿ 87ನೇ ರ್ಯಾಂಕ್ ಪಡೆದಿದ್ದಾರೆ. ಅಲ್ಲದೇ ಜವಾಹರಲಾಲ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿಯನ್ನೂ ಪಡೆದಿದ್ದಾರೆ.

8. ಎರಡು ಸೋಲುಗಳೇ ಗೆಲುವಿನ ಸೋಪಾನವಾದವು..!

12

ಆತನ ಹೆಸರು ಸಂದೀಪ್ ಮಹೇಶ್ವರಿ ಅಂತ. ಓದು ತಲೆಗೆ ಹತ್ತಲೇ ಇಲ್ಲ. ಸತತ ಮೂರು ವರ್ಷ ಪರೀಕ್ಷೆಯಲ್ಲಿ ಈತ ದುಮ್ಕಿ ಹೊಡೆದ. ಆಗ ಓದು ಬೇಡವೆನಿಸಿ ಸ್ನೇಹಿತರೊಂದಿಗೆ ಸೇರಿ ಒಂದು ಬಿಸಿನೆಸ್ ಆರಂಭಿಸಿದ. ಆದರೆ ಅದು ಅಟ್ಟರ್ ಫ್ಲಾಪ್ ಆಯಿತು. ಆರು ತಿಂಗಳ ಬಳಿಕ ಕನ್ಸಲ್ಟಿಂಗ್ ಸಂಸ್ಥೆ ಆರಂಭಿಸಿದ. ಅದೂ ಫ್ಲಾಪ್ ಲಿಸ್ಟ್ಗೆ ಸೇರಿತು. ಆದರೂ ಸಂದೀಪ್ ಸೋಲೊಪ್ಪಿಕೊಳ್ಳಲಿಲ್ಲ. ಬದಲಿಗೆ ಇಮೇಜಸ್ಬಜಾರ್.ಕಾಂ ಎಂಬ ವೆಬ್ ಸೈಟ್ ಸ್ಥಾಪಿಸಿದ. ಆದರೆ ಈ ಬಾರಿ ಸಂದೀಪ್ ಸೋಲಲಿಲ್ಲ. ಅಚ್ಚರಿ ಎಂದರೆ ಆ ವೆಬ್ ಸೈಟ್ ಇಂದು ವರ್ಷಕ್ಕೆ ಬರೋಬ್ಬರಿ 10 ಕೋಟಿ ವ್ಯಾಪಾರ ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು.

9. ಪ್ರೀತಿ ಬಲಿಪಡೆದ ಬೆಟ್ಟವನ್ನೇ ಕಡಿದ ವೀರ

4

ದಶರಥ್ ಮಾಂಝಿ. ಬಿಹಾರದ ಬಡಪಾಯಿ ಕಾರ್ಮಿಕ. ಒಂದು ಕಾಲದಲ್ಲಿ ತನ್ನ ಪತ್ನಿ ಫಲ್ಗುಣಿ ದೇವಿ ನೀರು ಹೊತ್ತು ಬೆಟ್ಟದಿಂದ ಇಳಿಯುತ್ತಿದ್ದಾಗ ಅಕಸ್ಮಾತಾಗಿ ಕಾಲು ಜಾರಿ ಬಿದ್ದು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದಳು. ಫಲ್ಗುಣಿ ದೇವಿಯನ್ನು ಕಂಡು ಯಾರೋ ಒಬ್ಬರು ಮಾಂಝಿಗೆ ಸುದ್ದಿ ಮುಟ್ಟಿಸಿದರು. ಆದರೆ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಸಬೇಕೆಂದರೆ ಸುಮಾರು 70 ಕಿಲೋ ಮೀಟರ್ ಸುತ್ತುವರೆದು ಹೋಗುವುದು ಅನಿವಾರ್ಯವಾಗಿತ್ತು. ಆದ್ದರಿಂದ ಮಾಂಝಿ 70 ಕಿಲೋ ಮೀಟರ್ ಬೆಟ್ಟವನ್ನು ಸುತ್ತವರೆದು ಫಲ್ಗುಣಿ ದೇವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ವೈದ್ಯರಿಂದ ಬಂದ ಉತ್ತರ `ನಿನ್ನ ಪತ್ನಿ ಬದುಕಿಲ್ಲ’ ಎಂಬುದಾಗಿತ್ತು. ಇದರಿಂದ ತೀವ್ರವಾಗಿ ನೊಂದ ಮಾಂಝಿ, ತನ್ನ ಪತ್ನಿಗಾದ ಸ್ಥಿತಿ ಯಾರಿಗೂ ಬರಬಾರದು ಎಂದು ನಿರ್ಧರಿಸಿದ. ಬೃಹತ್ ಬೆಟ್ಟವನ್ನು ಕಡಿದು ರಸ್ತೆ ನಿರ್ಮಿಸಲು ಮುಂದಾದ. ಪ್ರಾರಂಭದಲ್ಲಿ ಮಾಂಝಿ ಸಾಹಸ ಕಂಡು ಊರಿನವರು ನಕ್ಕಿದ್ದರು. ಆದರೆ ದಿನಗಳೆದಂತೆ ಮಾಂಝಿಯು ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸಿದ್ದ. ನೂರಾರು ಜನರಿಗೆ ದಾರಿ ಒದಗಿಸಿದ್ದ. ಅಂದು ತೆಗಳಿದ್ದವರೇ ಹೊಗಳುವಂತೆ ಮಾಡಿದ. ಇಷ್ಟಕ್ಕೂ ಬೆಟ್ಟ ಕಡಿಯಲು ಮಾಂಝಿ 22 ವರ್ಷ ಶ್ರಮಿಸಿದ್ದ ಎಂದರೆ ನಂಬಲಸಾಧ್ಯ ಅಲ್ಲವೇ..? ಆದ್ದರಿಂದ ಮಾಂಝಿ ಸಾಹಸವನ್ನು ಕಂಡು ಸರ್ಕಾರವೇ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

10. ಯಾರಿಗೂ ಬೇಡವಾದಾತನ ಬೆಲೆ ಈಗ ಹೇಗಿದೆ ಗೊತ್ತಾ..?

15

ಆತ ಕಷ್ಟಪಟ್ಟು ಮೇಲೆದ್ದು ಬಂದ. ಪ್ರಾರಂಭದಲ್ಲಿ ನಿರ್ದೇಶಕ, ನಿರ್ಮಾಪಕರು ನೀನು ನೋಡಲು ಚೆನ್ನಾಗಿಲ್ಲ, ಕಲರ್ ಇಲ್ಲ, ಹೈಟ್ ಇಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದರು. ಆದರೆ ಚಿತ್ರದಲ್ಲಿ ನಟಿಸುವ ಆಸೆಯನ್ನು ಮಾತ್ರ ಬಿಟ್ಟಿರಲಿಲ್ಲ. ಇಂದು ಅದೇ ನಿರ್ಮಾಪಕರು, ನಿರ್ದೇಶಕರು ಆತನ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸಹ ಇವರ ಜೊತೆ ನಟಿಸುವ ಆಸೆ ಇದೆ ಎಂದಿದ್ದಾರಂತೆ, ಇಷ್ಟಕ್ಕೂ ಆತ ಬೇರೆ ಯಾರೂ ಅಲ್ಲ. ಬಾಲಿವುಡ್ ನ ಬಹುಬೇಡಿಕೆಯ ನಟ ನವಾಜುದ್ದಿನ್ ಸಿದ್ದಿಕಿ. ಯೆಸ್.. ಇಂದು ನವಾಜುದ್ದಿನ್ ಸಿದ್ದಿಕಿ ನಟನೆಯನ್ನು ಕಂಡು ಬರ್ಲಿನ್ ಫಿಲ್ಮ್ ಫೆಸ್ಟಿವಲ್, ರೋಜರ್ ಎಬರ್ಟ್ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ನಾಲ್ಕೈದು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಇನ್ನೂ ಕೆಲ ಚಿತ್ರಗಳು ಚಿತ್ರೀಕರಣಗೊಳ್ಳುತ್ತಿವೆ. ಇಷ್ಟು ಸಾಕಲ್ಲವೇ ನವಾಜುದ್ದೀನ್ ಸಿದ್ದಿಕಿ ಬಗ್ಗೆ..?

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...