ಆ ಊರಲ್ಲಿ 47 ಕುಟುಂಬ, 47 ಮಂದಿ ಐಎಎಸ್..
ಈ ಒಂದು ಪುಟ್ಟ ಗ್ರಾಮ ಮಧೋಪಟ್ಟಿ, ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿ. ಆದರೆ ನಮ್ಮ ದೇಶದ ಭವಿಷ್ಯದ ಮಹತ್ವದ ಕೊಡುಗೆ ನೀಡುತ್ತಿದೆ. ಸುಮಾರು 75 ಕುಟುಂಬಗಳು ಹೊಂದಿರುವ ಈ ಗ್ರಾಮ ಭಾರತದ ಆಡಳಿತ ಸೇವೆಗೆ ಬರೋಬ್ಬರಿ 47 ಐಎಎಸ್ ಅಧಿಕಾರಿಗಳನ್ನು ನೀಡಿದೆ.
ಉತ್ತರಪ್ರದೇಶದ ಜಾನ್ಪೂರ್ ಜಿಲ್ಲೆಯ ಮಧೋಪಟ್ಟಿ ಊರಿನ ವಿಶೇಷತೆ ಏನೆಂದರೆ ಇಲ್ಲಿಯವರೆಗೆ ಆ ಗ್ರಾಮದಲ್ಲಿ 47 ಜನ IAS ಅಧಿಕಾರಿಗಳಾಗಿದ್ದಾರೆ. ಮುಸ್ತಫಾ ಹುಸೇನ್ ಎಂಬ ವ್ಯಕ್ತಿ ಆ ಗ್ರಾಮದ ಮೊದಲ ಐಎಎಸ್ ಅಧಿಕಾರಿ. ಅವರು 1914 ರಲ್ಲಿ ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದರು. ನಂತರ ಇಂದೂ ಪ್ರಕಾಶ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದರು. ಅಲ್ಲಿಂದ ಊರಿನ ವಿದ್ಯಾವಂತರೆಲ್ಲ ಅವರ ದಾರಿಯಲ್ಲಿ ಸಾಗುತ್ತಿದ್ದಾರೆ.
ಹಾಗೆ ಪ್ರಾರಂಭವಾಗಿ ಇಂದು ಆ ಗ್ರಾಮ 47 ಜನ ಐಎಎಸ್ ಅಧಿಕಾರಿಗಳನ್ನು ದೇಶಕ್ಕೆ ನೀಡಿದೆ. ಅಷ್ಟೇ ಅಲ್ಲ ಆ ಗ್ರಾಮದವರು ಉನ್ನತ ಶಿಕ್ಷಣ ಪಡೆದು ಇಸ್ರೋ, ಬಾಬಾ ಆಟಮಿಕ್ ರಿಸರ್ಚ್, ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಉನ್ನತ ಪದವಿಯಲ್ಲಿದ್ದಾರೆ.
ಇತ್ತೀಚಿನ ಮತ್ತೊಂದು ದಾಖಲೆಗೆ ಮಧೋಪಟ್ಟಿ ಆ ಊರು ಕಾರಣವಾಗಿದೆ. ಅದೇನೆಂದರೆ ನಾಲ್ಕು ಜನ ಸಹೋದರರಾದ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್, ಶಶಿಕಾಂತ್ ಸಿಂಗ್ ಕೂಡ ಐಎಎಸ್ ಅಧಿಕಾರಿಗಳಾಗಿದ್ದಾರೆ.
ಆ ಊರಿನ ವಿದ್ಯಾರ್ಥಿಗಳೆಲ್ಲ ಹತ್ತನೆಯ ತರಗತಿಯಿಂದಲ್ಲೇ ಐಎಎಸ್ ಗುರಿಯಾಗಿಸಿಕೊಂಡು ಪುಸ್ತಕಗಳು, ಗೈಡ್’ಗಳನ್ನು ಓದುತ್ತಾರೆ ಎಂದು ಆ ಊರಿನ ಶಿಕ್ಷಕರಾದ ಅರವಿಂದ್ ಕುಮಾರ್’ರವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿಗಳು ಹಿಂದಿ ಮಾಧ್ಯಮದಲ್ಲಿ ಓದುತ್ತಿದ್ದರೂ ಐಎಎಸ್’ಗಾಗಿ ಇಂಗ್ಲಿಷ್ ಕಡೆಗೂ ಹೆಚ್ಚಿನ ಗಮನವಹಿತ್ತಾರೆ ಎಂದು ಅವರು ಹೇಳುತ್ತಾರೆ.
ಏನೇ ಹೇಳಿ, ಉತ್ತರಪ್ರದೇಶದ ಘಜಿಪುರಕ್ಕೆ “ಆರ್ಮಿ ವಿಲೇಜ್” ಎಂಬ ಹೆಸರು ಬಂದಂತೆ ಮಧೋಪಟ್ಟಿ ಗ್ರಾಮಕ್ಕೆ “ಐಎಎಸ್ ಅಧಿಕಾರಿಗಳ ವಿಲೇಜ್” ಎಂಬ ಹೆಸರು ಬಂದಿದೆ.
ಭಾರತೀಯ ಮೂಲದ ‘ಧ್ರುವತಾರೆ’ ವಿಶ್ವಕ್ಕೆ ಸ್ಫೂರ್ತಿಯ ಸೆಲೆ..!
ವೃದ್ಧರನ್ನು ತಂದೆ-ತಾಯಿಯಂತೆ ಕಾಣುವ ಈ ಡಾಕ್ಟರ್ ಬಡವರ ದೇವರು!
ಭಾರತದ ‘ಪಬ್ ಕ್ಯಾಪಿಟಲ್’ ಯಾವ್ದು ಗೊತ್ತಾ..?
ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!
ಇದು ನೀವೆಲ್ಲೂ ಕೇಳಿರದ ನಾವಿಕನ ಯಶೋಗಾಥೆ.. ಓದ್ಲೇಬೇಕು!
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಜಗತ್ತು ಕಂಡ ಕ್ರೂರಿಗೂ ಲವ್ ಆಗಿತ್ತು ..! ಹಿಟ್ಲರ್ ನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಅವಳ ಮನಸ್ಸಲ್ಲಿ ಪ್ರೀತಿ ಇದೆಯಾ? ಐದು ಸುಳುಹುಗಳನ್ನು ಓದಿ, ಥಟ್ ಅಂತ ತಿಳಿದುಕೊಳ್ಳಿ!
ಮಹಾಭಾರತ, ಮಾಲ್ಗುಡಿ ಡೇಸ್ – ಕನ್ನಡ ಕಿರುತೆರೆ ವೀಕ್ಷಕರಿಗೆ ಡಬಲ್ ಧಮಾಕಾ?
ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?
ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?
ಬಿಟ್ಟು ಹೋಗದಿರು ಗೆಳತಿ ಹಳೆಯ ನೆನಪುಗಳ ಉಳಿಸಿ.
ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!
ಮುಗಿಯದ ಸ್ನೇಹ : ಗ್ಯಾಂಗ್ ಆಫ್ ತ್ರೀ ಗರ್ಲ್ಸ್
ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಛಲಗಾತಿ!
ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!