ಅವರು 24 HIV ಮಕ್ಕಳ ತಂದೆ

Date:

 

ರಾಜಿಬ್ ಥಾಮಸ್ 24 ಮಕ್ಕಳ ತಂದೆ, ಈ ಪೈಕಿ 22 ಎಚ್ ಐ ವಿ ಪೀಡಿತ ಮಕ್ಕಳನ್ನು ಅವರು ದತ್ತು ತೆಗೆದುಕೊಂಡಿದ್ದಾರೆ. ಈ ಮಕ್ಕಳೆಲ್ಲ ಅವರನ್ನು ಪ್ರೀತಿಯಿಂದ ಪಾಪಾ ರೆಜಿ ಎಂದೇ ಕರೆಯುತ್ತಾರೆ. ಈ 22 ಮಕ್ಕಳನ್ನೂ ಅವರು ತಮ್ಮ ಸ್ವಂತ ಮಕ್ಕಳಂತೆಯೇ ಸಾಕಿ ಸಲಹುತ್ತಿದ್ದಾರೆ.
ಮಾರಕ ಖಾಯಿಲೆ ಎಚ್ ಐ ವಿ ಈ ಪುಟಾಣಿಗಳನ್ನು ಆವರಿಸಿಕೊಂಡಿದೆ. ಅನಾಥರಾಗಿದ್ದ ಈ ಮಕ್ಕಳಿಗೆ ರಾಜಿಬ್ ಥಾಮಸ್ ಆಸರೆಯಾಗಿದ್ದಾರೆ. ದಶಕದ ಹಿಂದೆ ಇವರನ್ನೆಲ್ಲ ದತ್ತು ಪಡೆದು ಸಲಹುತ್ತಿದ್ದಾರೆ.
ಒಮ್ಮೆ ರಾಜಿಬ್ ಅವರು ಮುಂಬೈನ ಡಿವೈ ಪಾಟೀಲ್ ಆಸ್ಪತ್ರೆಯ ಎದುರಿನಿಂದ ಹಾದು ಹೋಗುತ್ತಿದ್ದರಂತೆ. ಬಾಲಕಿಯೊಬ್ಳು ಹೊರಗೆ ಮಲಗಿದ್ಲು, ಎಷ್ಟು ದುರ್ಬಲಳಾಗಿದ್ದಳೆಂದ್ರೆ ಮೂಳೆಗಳೆಲ್ಲಾ ಕಾಣುತ್ತಿದ್ವು. ಎಚ್ಐವಿ ಪೀಡಿತೆಯಾಗಿದ್ದ ಬಾಲಕಿ ಹೆತ್ತವರನ್ನು ಕಳೆದುಕೊಂಡಿದ್ಲು. ಈ ಘಟನೆ ಥಾಮಸ್ ಅವರನ್ನು ಬದಲಾಯಿಸಿತ್ತು..


ಮುಂಬೈನ ಎಚ್ಐವಿ ಸ್ಪೆಷಲಿಸ್ಟ್ ದಿವ್ಯಾ ಮಿಥಾಲೆ ಅವರನ್ನು ಭೇಟಿ ಮಾಡಿದ ಥಾಮಸ್, ಮಕ್ಕಳನ್ನೆಲ್ಲ ದತ್ತು ಪಡೆಯಲು ಸಹಾಯ ಕೇಳಿದ್ರು. ಅವರ ನೆರವಿನಿಂದ ಎಚ್ ಐ ವಿ ಪೀಡಿತ ಇಬ್ಬರು ಮಕ್ಕಳನ್ನು ಮೊದಲು ಥಾಮಸ್ ದತ್ತು ಪಡೆದ್ರು. ಆ ಸಮಯದಲ್ಲಿ ಮುಂಬೈನಲ್ಲಿ ವಾಸವಾಗಿದ್ದ ಥಾಮಸ್ ಅವರಿಗೆ ಇಬ್ಬರು ಸ್ವಂತ ಮಕ್ಕಳು ಸಹ ಇದ್ರು. ಚಿಕ್ಕ ಮನೆಯಲ್ಲಿ ನಾಲ್ಕು ಮಕ್ಕಳಿಗೆ ಜಾಗ ಮಾಡಿಕೊಡೋದು ಕಷ್ಟವಾಗಿತ್ತು.

ಕೊನೆಗೆ 2009ರಲ್ಲಿ ಥಾಮಸ್ ‘ಬ್ಲೆಸ್ ಫೌಂಡೇಶನ್’ ಸ್ಥಾಪಿಸಿದ್ರು. 2009ರಲ್ಲಿ ನವಿ ಮುಂಬೈನಲ್ಲಿ ಚಿಕ್ಕ ಮನೆಯೊಂದನ್ನು ಬಾಡಿಗೆ ಪಡೆದ್ರು. ದತ್ತು ಪಡೆದ ಇಬ್ಬರು ಮಕ್ಕಳು ಹಾಗೂ ಮತ್ತಿಬ್ಬರು ತಮ್ಮ ಮಕ್ಕಳ ಜವಾಬ್ಧಾರಿ ಹೆಗಲೇರಿತ್ತು. ತುಂಬಾ ಕಷ್ಟದ ದಿನಗಳವು. ಒಂದೇ ಮ್ಯಾಟ್ರೆಸ್ ಮೇಲೆ ನಾಲ್ಕು ಮಕ್ಕಳೂ ಮಲಗಬೇಕಾದ ಸ್ಥಿತಿ ಇತ್ತು.
ನೋಡಿ, ಥಾಮಸ್ ಅವರ ಕುಟುಂಬಕ್ಕೆ ದಿನಕಳೆದಂತೆ ಜನರು ಹಾಸಿಗೆ, ಆಹಾರ ಧಾನ್ಯ, ಹಣವನ್ನೆಲ್ಲ ದಾನವಾಗಿ ಕೊಡಲಾರಂಭಿಸಿದ್ರು ಬರಬರುತ್ತಾ ಅವರ ಕುಟುಂಬ ಕೂಡ 4ರಿಂದ 24 ಸದಸ್ಯರನ್ನೊಳಗೊಂಡು ವಿಸ್ತರಿಸಿತ್ತು. ತಮ್ಮ ಸ್ವಂತ ಮಕ್ಕಳು ಹಾಗೂ ಉಳಿದ 22 ಎಚ್ಐವಿ ಪೀಡಿತರ ಮಧ್ಯೆ ಥಾಮಸ್ ಮತ್ತವರ ಪತ್ನಿ ಯಾವುದೇ ಬೇಧಭಾವ ಮಾಡಿಲ್ಲ.

ಪತ್ನಿ ಮಿನಿ ಕೂಡ ಥಾಮಸ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಸ್ತಾರೆ. ಎಚ್ಐವಿ ಬಗ್ಗೆ ಅರಿವಿದ್ದಿದ್ದರಿಂದ ತಮಗೂ ಆ ಖಾಯಿಲೆ ಬರಬಹುದು ಎಂಬ ಭಯವೆಲ್ಲ ಥಾಮಸ್ ಅವರಲ್ಲಿಲ್ಲ. ತಮ್ಮ ಮಕ್ಕಳಿಗೂ ಅದರ ಬಗ್ಗೆ ಥಾಮಸ್ ತಿಳಿಹೇಳಿದ್ದಾರೆ.
ಥಾಮಸ್ 24 ಮಕ್ಕಳ ಪ್ರೀತಿಯ ತಂದೆ, ಅವರದ್ದು ಸುಖಿ ಕುಟುಂಬ. ಪ್ರೀತಿಯೇ ಅವರ ಬದುಕಿಗೆ ಆಧಾರ. ತಾವು ವಿಶೇಷವಾದುದ್ದನ್ನೇನೋ ಮಾಡುತ್ತಿದ್ದೇನೆ ಎಂಬ ಭಾವನೆ ಅವರಲ್ಲಿಲ್ಲ. ಎಚ್ಐವಿ ಪಾಸಿಟಿವ್ ಎಂದಾಕ್ಷಣ ಅವರ ಬದುಕು ಅಲ್ಲಿಗೇ ಮುಗಿಯಿತು ಎಂದರ್ಥವಲ್ಲ. ಸಾಮಾನ್ಯ ಮನುಷ್ಯ ಬದುಕಿದಷ್ಟೇ ದಿನ ಅವರು ಕೂಡ ಜೀವಿಸಬಹುದು. ಪ್ರೀತಿ ಹಾಗೂ ಕಾಳಜಿ ಇದ್ರೆ ಯಾವುದೂ ಅಸಾಧ್ಯವಲ್ಲ ಎನ್ನುವುದು ಅವರ ನಿಲುವು.
ಥಾಮಸ್ ನಿಜಕ್ಕೂ ಒಬ್ಬ ಅನನ್ಯ ವ್ಯಕ್ತಿ, ಅತ್ಯುತ್ತಮ ತಂದೆ. ಸಮಾಜಕ್ಕೆ ಏನಾದ್ರೂ ಕೊಡುಗೆ ಕೊಡಬೇಕೆಂಬ ಉದ್ದೇಶ ಹೊಂದಿರುವವರಿಗೆ ಥಾಮಸ್ ಮಾದರಿಯಾಗ್ತಾರೆ ಅಲ್ಲವೇ..!?

Share post:

Subscribe

spot_imgspot_img

Popular

More like this
Related

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್ ಸೂಚನೆ

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್...

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ ವಿಜಯಪುರ:- SBI...

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...