ಧೋನಿ ಫ್ಯಾನ್ ವರ್ಲ್ಡ್ ಫೇಮಸ್ ಆಗಿದ್ದೇಗೆ? ಎಲ್ಲರಂತಲ್ಲ ಈ ಕನ್ನಡದ ಅಭಿಮಾನಿ ..!

Date:

ಇವರು ಕ್ರಿಕೆಟ್ ಆಡಿಲ್ಲ, ಆದರೂ ಕ್ರಿಕೆಟ್ ಜಗತ್ತಿಗೆ ಪರಿಚಿತ..!

ಕ್ರಿಕೆಟ್ ಜಗತ್ತು ಅದ್ಭುತ ಕ್ರಿಕೆಟಿಗರನ್ನು ಕಂಡಂತೆಯೇ ಅತ್ಯದ್ಭುತ ಕ್ರಿಕೆಟ್ ಪ್ರೇಮಿಗಳನ್ನು, ಅಭಿಮಾನಿಗಳನ್ನೂ ಕಂಡಿದೆ…! ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ವಿಶ್ವದ ನಾನಾ ದೇಶಗಳಲ್ಲಿ ತನ್ನದೇ ಆದ ಅಸ್ಥಿತ್ವವವನ್ನು ಕಂಡುಕೊಳ್ಳುವಲ್ಲಿ ಯಶ ಕಂಡಿದೆ ಅಂದ್ರೆ, ಅಲ್ಲಿ ಅಭಿಮಾನಿಗಳ ಪಾತ್ರ ತುಂಬಾನೇ ಇದೆ..!
ಕ್ರಿಕೆಟ್ ಜಗ ಕಂಡ ಅಭಿಮಾನಿಗಳಲ್ಲಿ ಇಲ್ಲೊಬ್ಬ ಎಲ್ಲರಿಗಿಂತ ಭಿನ್ನ ಅಭಿಮಾನಿ ಇದ್ದಾರೆ..! ಹೆಸರು, ಪ್ರಣವ್ ಜೈನ್.

Dhoni_autograph_large1
ಬೆಂಗಳೂರಿನವನಾದ ಪ್ರಣವ್ ಜೈನ್ ಕ್ರಿಕೆಟ್ ನ ಶ್ರೇಷ್ಠ ಅಭಿಮಾನಿಯಾಗಿದ್ದು ಮಹೇಂದ್ರ ಸಿಂಗ್ ಧೋನಿ ಆಟ ನೋಡಿ..! ಅದು 2007 ಧೋನಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದ ಸಮಯವದು..! ಧೋನಿ ಆಟಕ್ಕೆ ಮರುಳಾದವರಲ್ಲಿ ಪ್ರಣವ್ ಕೂಡ ಒಬ್ಬರು..! ಧೋನಿಯನ್ನು ಆರಾಧಿಸುತ್ತಾ ಹತ್ತನೇ ವಯಸ್ಸಿಂದಲೇ ಕ್ರಿಕೆಟಿಗರ ಸಹಿ ಸಂಗ್ರಹ ಮಾಡೋ ಹವ್ಯಾಸ ಬೆಳೆಸಿ ಕೊಂಡಿದ್ದಾರೆ..! ಇಂದು ಪ್ರಣವ್ ಬಳಿ ಸಾವಿರಕ್ಕೂ ಹೆಚ್ಚು ಕ್ರಿಕೆಟಿಗರ ಸಹಿ ಇದೆಯಂತೆ..! 2007ರಿಂದ ಇಲ್ಲಿಯವರೆಗೆ, 8 ವರ್ಷಗಳ ಅವಧಿಯಲ್ಲಿ ಪ್ರಣವ್ ಬಹಳಷ್ಟು ಬಾರಿ ಧೊನಿಯನ್ನು ಭೇಟಿ ಆಗಿದ್ದಾರೆ..! ಧೋನಿ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರಣವ್ಗೆ ಮಾತಿಗೆ ಸಿಗ್ತಾರೆ..! ಫೋಟೋ ಕ್ಲಿಕ್ಕಿಸ್ತಾರೆ..! ಧೋನಿ ಸಿಕ್ಕಾಗೆಲ್ಲಾ ಅವರಿಗೆ ಹೊಸ ಹೊಸ ರೀತಿಯ ಗಿಫ್ಟ್ ಕೊಡೋದನ್ನು ಮಾತ್ರ ಪ್ರಣವ್ ಮರೆಯಲ್ಲ..! ಈಗೀಗ ಪ್ರಣವ್ ಧೋನಿಗೆ ಎಷ್ಟೊಂದು ಹತ್ತಿರವಾಗಿ ಬಿಟ್ಟಿದ್ದಾರೆಂದರೆ, ಧೋನಿಯೇ ಪ್ರಣವ್ ಹೆಸರಿಡಿದು ಕೂಗಿ ಕರೀತಾರೆ..! ಮೊನ್ನೆ ಮೊನ್ನೆ ಧೋನಿಯೊಮ್ಮೆ ಬೆಂಗಳೂರಿಗೆ ಬಂದಾಗ ಪ್ರಣವ್ನ ಕ್ರಿಕೆಟ್ ಕಲೆಕ್ಷನ್ ನೋಡಿ ಆಶ್ಚರ್ಯಚಕಿತರಾದ್ರಂತೆ..! ನಂತರ ಪ್ರಣವ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ್ರಂತೆ..!

dhoni_ticket_large
ಭಾರತದಲ್ಲಿ ಇಲ್ಲಿತನಕ ಟೆಸ್ಟ್ ಆಡಿದ 285 ಕ್ರಿಕೆಟಿಗರ ಪೈಕಿ 145ಕ್ಕಿಂತ ಹೆಚ್ಚಿನ ಕ್ರಿಕೆಟಿಗರ ಆಟೋಗ್ರಾಫ್ ಇವರ ಬಳಿ ಇದೆ..!

ಒಟ್ಟಾರೆಯಾಗಿ 1000ಕ್ಕಿಂತ ಹೆಚ್ಚಿನ ಆಟೋಗ್ರಾಫ್ ಇದೆ..!20 ದೊಡ್ಡ ಬ್ಯಾಟ್ ಗಳ ಮೇಲೆ ಆಯಾ ದೇಶದ ಆಟಗಾರರು ಸಹಿ ಮಾಡಿದ್ದಾರೆ..! 500 ಸಣ್ಣ ಬ್ಯಾಟ್ ಗಳ ಮೇಲೆ ಒಬ್ಬೊಬ್ಬ ಕ್ರಿಕೆಟಿಗರ ಸಹಿ ಇದೆ..! ರಾಹುಲ್ ದ್ರಾವಿಡ್, ಧೋನಿ, ಪೀಟರ್ಸನ್, ಯುವರಾಜ್. ಮೆಗ್ರಾತ್, ನಾಸೀರ್ ಹುಸೇನ್ , ಗ್ರೇಮ್ ಸ್ಮಿತ್, ಗಿಲ್ಕ್ರಿಸ್ಟ್, ಗ್ರೇಮ್ ಸ್ವಾನ್ ಮತ್ತು ಕ್ರಿಸ್ ಗೇಲ್ ಸೇರಿದಂತೆ ಅನೇಕ ಕ್ರಿಕೆಟಿಗರ ಸಹಿ ಇವರಲ್ಲಿದೆ. 60ಕ್ಕೂ ಹೆಚ್ಚು ಕ್ರಿಕೆಟಿಗರ ಜರ್ಸಿ ಇದೆ..! 500ಕ್ಕೂ ಅಧಿಕ ಕ್ರಿಕೆಟಿಗರ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ..! ಅನಿಲ್ ಕುಂಬ್ಳೆ. ವಿವಿ ಎಸ್ ಲಕ್ಷ್ಮಣ್ ಕೂಡ ಕರೆದು ಮಾತಾಡ್ತಾರೆ..! ಫಾರೂಕ್ ಇಂಜಿನಿಯರ್, ಇಎಎಸ್ ಪ್ರಸನ್ನ , ಬಿ.ಎಸ್ ಚಂದ್ರಶೇಖರ ಮತ್ತು ಬಿಶನ್ ಸಿಂಗ್ ಬೇಡಿ ಕೂಡ ಇವರಿಗೆ ಆಪ್ತರು..!
ವಿಶ್ವದಲ್ಲಿ ಎಲ್ಲೇ ಕ್ರಿಕೆಟ್ ನಡೆಯಲಿ, ಬೇಕಾದ ಕ್ರಿಕೆಟ್ ವಸ್ತುಗಳನ್ನ ಪಡೆಯುವ ನೆಟ್ವರ್ಕ್ ಇವರಿಗಿದೆ..! ನಾನಾ ಕಡೆಗಳಲ್ಲಿ ಕ್ರಿಕೆಟ್ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವವವರ ಪರಿಚಯ ಇವರಿಗಿದೆ..! 2011ರ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್, ಧೋನಿಯ ಕೊನೆಯ ಟೆಸ್ಟ್ ಮ್ಯಾಚ್ನ ಟಿಕೆಟ್ ಸೇರಿದಂತೆ, ಕ್ರಿಕೆಟಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುಗಳನ್ನಿವರು ಸಂಗ್ರಹಿಸಿದ್ದಾರೆ..!
ಇವರು ಕ್ರಿಕೆಟ್ ಸಂಬಂಧಿಸಿದ ವಸ್ತುಗಳ ಸಂಗ್ರಹಕ್ಕಾಗಿ ಬರೊಬ್ಬರಿ 15 ಲಕ್ಷ ರೂಪಾಯಿಗಳನ್ನು ಇಲ್ಲಿತನಕಿ ಖರ್ಚು ಮಾಡಿದ್ದಾರೆ..!
ಇವರು ಹೀಗೆ ಮುಂದುವರೆದರೆ ಗಿನ್ನಿಸ್ ದಾಖಲೆಯಲ್ಲೂ ಮುಂದೊಂದು ದಿನ ಹೆಸರು ಬರೆಸಿಕೊಳ್ಳುತ್ತಾರೆ..!
ಕ್ರಿಕೆಟ್ ಆಡದೇ ಇದ್ದರೂ ಇವರಿಂದು ಕ್ರಿಕೆಟ್ ಲೋಕಕ್ಕೆ ಪರಿಚಯ..! ಕ್ರಿಕೆಟ್ ದಿಗ್ಗಜರಿಗೆ ಆಪ್ತ..! ಕನ್ನಡದ ಈ ಕ್ರಿಕೆಟ್ ಅಭಿಮಾನಿ ಗೆ ಶುಭವಾಗಲಿ

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...