ಚೇತನ್ ಮಹಾಜನ್. ಇಡೀ ಪ್ರಪಂಚದಾದ್ಯಂತ ಲೇಖಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ಸದ್ಯ ಚೇತನ್ ಎಚ್ಸಿಎಲ್ ಲರ್ನಿಂಗ್ನಲ್ಲಿ ಸಿಇಓ ಆಗಿದ್ದಾರೆ. ಆದ್ರೆ 2012ರ ಸಮಯದಲ್ಲಿ ಎವರ್ಆನ್ ಕಂಪನಿಯಲ್ಲಿ ಡಿವಿಜನಲ್ ಹೆಡ್ ಆಗಿದ್ರು ಚೇತನ್ ಮಹಾಜನ್.
ಚೇತನ್ ಮಹಾಜನ್ ಮುಂದಾಳತ್ವದಲ್ಲೇ ಜಾರ್ಖಂಡ್ನ ಬೊಕಾರೋದಲ್ಲಿ ಐಐಟಿ ಪ್ರವೇಶಕ್ಕೆ ಟಾಪರ್ಸ್ ಎಂಬ ಸ್ಫರ್ಧೆಯೊಂದನ್ನು ನಡೆಸಲಾಗ್ತಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದ. ಆತನ ಪೋಷಕರು ಕಟ್ಟಿದ್ದ ಶುಲ್ಕ ವಾಪಸ್ ಕೊಡುವಂತೆ ಪಟ್ಟು ಹಿಡಿದ್ರು. ಆದ್ರೆ ಹಿರಿಯ ಅಧಿಕಾರಿಗಳ ಸಮ್ಮತಿಯಿಲ್ಲದೆ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ ಅಂತಾ ಚೇತನ್ ಹೇಳಿದ್ರು.
ಆಗ ರೊಚ್ಚಿಗೆದ್ದ ಪೋಷಕರು ಗದ್ದಲ ಎಬ್ಬಿಸಿದ್ರು. ಚೇತನ್ ಅವ್ರನ್ನು ಪೊಲೀಸರಿಗೆ ಒಪ್ಪಿಸಿದ್ರು. 200 ವಿದ್ಯಾಥಿಗಳು ಕೊಟ್ಟ ದೂರಿನ ಅನ್ವಯ ಚೇತನ್ ವಿರುದ್ಧ ಎಫ್ಐಆರ್ ದಾಖಲಾಯ್ತು. ಚೇತನ್ ಮಹಾಜನ್ರನ್ನ ಬಂಧಿಸಿದ ಪೊಲೀಸರು ಬೊಕಾರೋ ಜೈಲಿಗೆ ಹಾಕಿದ್ರು.
ನಿಜಕ್ಕೂ ಆಗ ಚೇತನ್ ಅದೃಷ್ಟವೇ ಸರಿ ಇರಲಿಲ್ಲ. ರಜಾ ದಿನಗಳಾಗಿದ್ರಿಂದ ಚೇತನ್ಗೆ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಸುಮಾರು ಒಂದು ತಿಂಗಳು ಚೇತನ್ ಜೈಲಿನಲ್ಲೇ ಬಂಧಿಯಾಗಿದ್ರು. ಜೈಲಿನಲ್ಲಿ ಬೇಸರ ಕಳೆಯಲು ತಮಗಾದ ಅನುಭವಗಳನ್ನೆಲ್ಲ ಚೇತನ್ ಬರೆದಿಡ್ತಾ ಇದ್ರು. ಅದೇ ‘ಬ್ಯಾಡ್ ಬಾಯ್ಸ್ ಆಫ್ ಬೊಕಾರೋ ಜೈಲ್’ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಸ್ತಕ.
ಜೈಲಿನಲ್ಲಿ ಕಳೆದ ಒಂದು ತಿಂಗಳು ಚೇತನ್ ಮಹಾಜನ್ರಿಗೆ ಭಯಂಕರ ಅನುಭವವನ್ನೇ ಮಾಡಿಸಿತ್ತು. ಜೈಲಿನ ಕಠಿಣ ನಿಯಮಗಳು ಒಂದ್ಕಡೆಯಾದ್ರೆ ಅಲ್ಲಿನ ಚಿತ್ರವಿಚಿತ್ರ ಕೈದಿಗಳನ್ನು ನೋಡಿ ಚೇತನ್ ಆಶ್ಚರ್ಯಪಟ್ಟಿದ್ರು. ಕೊಲೆ, ದರೋಡೆ, ವಂಚನೆ ಹೀಗೆ ವಿವಿಧ ಅಪರಾಧ ಮಾಡಿ ಜೈಲು ಸೇರಿದ ಅವರನ್ನೆಲ್ಲಾ ನೋಡಿ ಚೇತನ್, ಜೀವನದಲ್ಲಿ ಹೊಸ ಪಾಠವನ್ನೇ ಕಲಿತ್ರು. ಅಲ್ಲಿ ತಾವು ಕಲಿತ ಪಾಠವನ್ನ ಚೇತನ್ ಹೇಳಿಕೊಂಡಿದ್ದಾರೆ.
ಯಾವುದೋ ಒಂದು ದೃಷ್ಟಿಕೋನವನ್ನಿಟ್ಕೊಂಡು ಜನರನ್ನು ಅಳೆಯೋದಲ್ಲ, ಬರೀ ದಾಖಲೆಗಳನ್ನಾಧರಿಸಿ ನಿರ್ಧಾರ ತೆಗೆದುಕೊಳ್ಳೋದು ತಪ್ಪು ಎನ್ನುತ್ತಾರೆ ಚೇತನ್. ಜೈಲು ವಾಸದ ಅನುಭವದ ಬಳಿಕ ಚೇತನ್ ಮನಸ್ಸು ಮತ್ತಷ್ಟು ಗಟ್ಟಿಯಾಗಿದೆಯಂತೆ. ಯಾವುದೇ ಹಿಂಜರಿಕೆಯಿಲ್ಲದೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಈಗ ಅವರಲ್ಲಿದೆ. ಕೆಲಸ ಕಳೆದುಕೊಳ್ಳೋದೇ ನಿಮ್ಮ ಜೀವನದ ಕೆಟ್ಟ ಘಳಿಗೆ ಎಂದುಕೊಳ್ಬೇಡಿ ಅನ್ನೋದು ಅವರ ಸಲಹೆ.
ಪ್ರಕರಣವೊಂದರಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿರುವವರಿಗೆ ಯಾರೂ ಸುಲಭವಾಗಿ ಉದ್ಯೋಗ ಕೊಡುವುದಿಲ್ಲ. ಅದೃಷ್ಟವಶಾತ್ 2013ರಲ್ಲಿ ವಂಚನೆ ಪ್ರಕರಣದಿಂದ ಚೇತನ್ ಮಹಾನ್ ಖುಲಾಸೆಗೊಂಡ್ರು. ತಕ್ಷಣ ಎಚ್ಸಿಲ್ ಸಂಸ್ಥೆಯನ್ನು ಸೇರಿಕೊಂಡ್ರು. ಆಗ ಜೈಲಿಗೆ ಹೋಗಿ ಬಂದಾಗಿನಿಂದ ಕೆಲವರು ಅವರನ್ನು ತೀರಾ ವಿಚಿತ್ರವಾಗಿ ನೋಡುತ್ತಿದ್ರು. ಆದರೆ ಅವರ ಕಣ್ಣಲ್ಲಿ ಕಣ್ಣಿಡಲು ಬಹುತೇಕ ಎಲ್ಲರೂ ಹಿಂಜರಿಯುತ್ತಿದ್ದರು.
ಏನೇ ಹೇಳಿ, ಕೆಲವೊಮ್ಮೆ ತಪ್ಪು ಮಾಡಿದ್ದರೂ ಶಿಕ್ಷೆ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಆ ವೇಳೆಯಲ್ಲಿ ಯಾರೂ ಎದೆಗುಂದಬಾರದು. ಸೋಲೇ ಗೆಲುವಿನ ಮೆಟ್ಟಿಲೆಂದು ಮುನ್ನಗ್ಗಿದರೆ ಮುಂದೆ ದೊಡ್ಡ ಯಶಸ್ಸು ನಿಶ್ಚಿತ ಎನ್ನುವುದು ಅವರ ವಾದ. ಇದನ್ನು ನಾವು ಕೂಡ ಒಪ್ಪಲೇ ಬೇಕು ಅಲ್ಲವೇ?
ಜೈಲುವಾಸ ಅನುಭವಿಸಿದ್ದ ಅವರು ಹೆಸರಾಂತ ರೈಟರ್ ಆಗಿದ್ದು ಹೇಗೆ?
Date: