ಕರುನಾಡ ಪ್ರಸಿದ್ಧ ಶಿವಮಂದಿರಗಳು … ನೀವೊಮ್ಮೆ ಭೇಟಿ ನೀಡಿ ..

Date:

 ಗೋಕರ್ಣ ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ : ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿದೆ. ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.
ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು : ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

ಹೂಲಿಯ ಪಂಚಲಿಂಗೇಶ್ವರ, ಬೆಳಗಾವಿ : ಇತಿಹಾಸ ಮತ್ತು ಪುರಾಣ ಶಾಸ್ತ್ರಗಳಲ್ಲಿ ವರ್ಣಿತವಾದ ನೂರೊಂದು ದೇವಾಲಯಗಳು ನೂರೊಂದು ಬಾವಿಗಳನ್ನು ಹೊಂದಿದ ಗ್ರಾಮ ಹೂಲಿ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಐತಿಹಾಸಿಕ ಸ್ಥಳ. ಇದನ್ನು ಬದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ. ಪ್ರಮುಖ ಸಾಂಸ್ಕೃತಿಕ ನೆಲೆಯಾಗಿ, ಸಾವಿರ ಪಂಡಿತರಿಂದ ಶೋಭಿಸಿದ ಅಗ್ರಹಾರವಾಗಿದ್ದ ಹೂಲಿಯ ದೇವಾಲಯಗಳಿಂದ ಪೋಷಣೆಯಿಲ್ಲದೇ ಸೊರಗುತ್ತಿವೆ. ಇಲ್ಲಿನ ಪಂಚಲಿಂಗೇಶ್ವರ ದೇವಾಲಯ ಸುಪ್ರಸಿದ್ಧ.
ಕವಳೇಶ್ವರ, ದಾಂಡೇಲಿ : ದಟ್ಟಡವಿಯ ನಡುವೆ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿನ ಕವಳೇಶ್ವರ ದರ್ಶನಕ್ಕೆ ವರ್ಷದಲ್ಲಿ ಒಂದು ದಿನ ಮಾತ್ರ ಬೆಳಗ್ಗೆ 5ರಿಂದ ಅವಕಾಶ ನೀಡಲಾಗುತ್ತದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಕಾರವಾರದಿಂದ 50 ಸಾವಿರಕ್ಕೂ ಅಧಿಕ ಜನ ಆಗಮಿತ್ತಾರೆ.
ಗುಹೆಯ ಒಳಗೆ ಜಟಾಧಾರಿಯಂತಿರುವ ಕವಳೇಶ್ವರ ಲಿಂಗ ಬೆಳೆಯುತ್ತಿದೆ ಎಂಬ ನಂಬುಗೆ ಭಕ್ತರದ್ದು. ಕ್ಯಾಲ್ಸಿಯಂ ಕಾರ್ಬೆನೈಟ್​ಯುುಕ್ತ ನೀರು ಗುಹೆಯಲ್ಲಿ ನಿರಂತರವಾಗಿ ತೊಟ್ಟಿಕ್ಕುವುದರಿಂದ ಸುಣ್ಣದ ಕಲ್ಲಿನ ಹೆಪ್ಪು ಕಂಬಗಳು ನಿರ್ವಣವಾಗಿವೆ. ಅವುಗಳಲ್ಲಿ ಒಂದು ಶಿವಲಿಂಗದ ಆಕಾರದಲ್ಲಿದೆ. ಲಿಂಗದ ಮೇಲೆ ನೀರು ನಿರಂತರವಾಗಿ ಬೀಳುವುದರಿಂದ ಕಂಬ ಬೆಳೆದಂತೆ ಎನಿಸುತ್ತದೆ ಎಂಬುದು ಭೂಗರ್ಭ ಶಾಸ್ತ್ರಜ್ಞರ ವಿಶ್ಲೇಷಣೆ.
ದಟ್ಟಾರಣ್ಯದಲ್ಲಿ ತಪಸ್ಸು ಮಾಡುತ್ತಿರುವ ಕಪಿಲ ಮುನಿಗೆ ಕವಳಾಸುರ ಎಂಬ ರಾಕ್ಷಸ ತೊಂದರೆ ನೀಡುತ್ತಿದ್ದ. ಮುನಿ ಶಿವನಲ್ಲಿ ತಪಸ್ಸು ಮಾಡಿ ಕವಳಾಸುರನಿಂದ ರಕ್ಷಣೆ ಕೋರುತ್ತಾನೆ. ಆಗ ಪ್ರತ್ಯಕ್ಷನಾದ ಶಿವ ಗುಹೆಯೊಳಗೆ ಕವಳಾಸುರನನ್ನು ಸುಟ್ಟು ಭಸ್ಮ ಮಾಡಿ ಅದೇ ಭಸ್ಮವನ್ನು ತನ್ನ ಮೈಗೆ ಮೆತ್ತಿಕೊಂಡು ಕವಳೇಶ್ವರನಾದ ಎಂಬ ಕಥೆಯನ್ನು ಇಲ್ಲಿನ ಭಕ್ತರು ಹೇಳುತ್ತಾರೆ.
ಕುಂದಾಪುರ ಕುಂದೇಶ್ವೆ, ಕುಂದಾಪುರ : ಕುಂದಾಪುರದ ಕುಂದೇಶ್ವೆ ದೇವಾಲಯ ಕೂಡ ರಾಜ್ಯದ ಸುಪ್ರಸಿದ್ಧ ಜನಪ್ರಿಯ ಶಿವ ದೇವಾಲಯಗಳಲ್ಲಿ ಒಂದು. ಕುಂದೇಶ್ವರ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುತ್ತಾನೆ. ಬೇಡಿ ಬಂದವರ ಕಷ್ಟಗಳನ್ನು ಹೋಗಲಾಡಿಸುತ್ತಾನೆ ಎನ್ನುವ ನಂಬಿಕೆ ಇದೆ.
ಈ ದೇವಾಲಯಗಳಲ್ಲದೆ ಬೆಳಗಾವಿಯ ಪಂಚಲಿಂಗೇಶ್ವರ ದೇವಾಲಯ, ದಕ್ಷಿಣ ಕಾಶಿ ಕ್ಷೇತ್ರ ಸವದತ್ತಿಯ ಸೊಗಲು, ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಕಾಡುಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಶಿವ ದೇವಾಲಯಗಳು ರಾಜ್ಯದಲ್ಲಿವೆ.

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...