ಉತ್ತರಾಖಾಂಡ್ ಅರಣ್ಯ ಪ್ರದೇಶದಲ್ಲಿ ಹತ್ತಿಕೊಂಡಿರುವ ಬೆಂಕಿ ಸದ್ಯಕ್ಕಂತೂ ನಿಲ್ಲುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಪೌರಿ, ಟೆಹ್ರಿ ಮತ್ತು ನೈನಿತಾಲ್ ಸೇರಿಂದತೆ 7 ಜಿಲ್ಲೆಗಳಲ್ಲಿ ಆವರಿಸಿರುವ ಬೆಂಕಿಯ ರುದ್ರನರ್ತನ ಮುಂದುವೆರದಿದೆ. ಬೆಂಕಿ ನಂದಿಸಲು NDRF ಪಡೆ ಸೇರಿದಂತೆ 6 ಸಾವಿರಕ್ಕೂ ಅಧಿಕ ಮಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದುವರೆಗೆ 3000ಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ.
ಉತ್ತರಾಖಾಂಡ್‌ನ ಅರಣ್ಯ ಪ್ರದೇಶಗಳಲ್ಲಿ ಕಳೆದ 89 ದಿನಗಳಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ಭಾರೀ ವಿನಾಶಕ್ಕೆ ಕಾರಣವಾಗಿದ್ದು ಬೆಂಕಿ ನಂದಿಸಲು NDRF ತಂಡ ಸೇರಿದಂತೆ 6 ಸಾವಿರಕ್ಕೂ ಅಧಿಕ ಮಂದಿ ರಾತ್ರಿ-ಹಗಲೂ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೇನಾ ಹೆಲಿಕಾಪ್ಟರ್‌ಗಳಿಂದ ಬೆಂಕಿ ಹತ್ತಿರುವ ಪ್ರದೇಶಗಳಿಗೆ ನೀರು ಹಾಯಿಸುತ್ತಿದ್ರೂ, ಬೆಂಕಿಯ ಕೆನ್ನಾಲಿಗೆ ಹತೋಟಿಗೆ ಬಾರದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಇದುವೆರೆಗೆ 3000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಪರಿಸರ ನಾಶವಾಗಿವೆ. ಬೆಂಕಿ ನಂದಿಸಲು ಕಳೆದ ಕೆಲ ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆಯಾದರೂ, ಪೌರಿ, ಟೆಹ್ರಿ ಮತ್ತು ನೈನಿತಾಲ್ ಸೇರಿದಂತೆ 7 ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ.
ಇನ್ನು ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಕಾಡ್ಗಿಚ್ಚಿನ ಕುರಿತಾಗಿ ಸ್ಯಾಟ್‌ಲ್ಯಾಟ್ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಕಾಡ್ಗಿಚ್ಚು ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ. ಕನಿಷ್ಠ 200 ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಕ್ರಿಯವಾಗಿದ್ದು, ಕೂಡಲೇ ನಿಯಂತ್ರಿಸದೇ ಹೋದರೆ ಕಾಡ್ಗಿಚ್ಚು ಇಡೀ ಉತ್ತರ ಭಾರತಕ್ಕೆ ಹಬ್ಬುವ ಅಪಾಯವಿದೆ ಎಂದು ಹೇಳಿದೆ.
ಈ ಭೀಕರ ಕಾಡ್ಗಿಚ್ಚಿನ ಹಿಂದೆ ಉತ್ತರಾಖಂಡದ ಮರಗಳ್ಳ ಮಾಫಿಯಾದ ಕೈವಾಡದ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಮರಗಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಕಳ್ಳರೇ ಅರಣ್ಯದ ಒಂದು ಭಾಗಕ್ಕೆ ಬೆಂಕಿ ಹಚ್ಚಿ ಸಿಬ್ಬಂದಿಗಳ ಗಮನ ಕಾಡ್ಗಿಚ್ಚಿನ ಮೇಲೆ ಬರುವಂತೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ರಾಜ್ಯದ ಅರಣ್ಯಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಅಗ್ನಿ ವಿಪತ್ತಿನಲ್ಲಿ ಸಿಲುಕಿದ ರಾಜ್ಯ ಎಂದು ಘೋಷಿಸುವಂತೆ ಉತ್ತರಾಖಾಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಆಗ್ರಹಿಸಿದ್ದಾರೆ.
- ಶ್ರೀ
POPULAR STORIES :
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!