ವಯಸ್ಸು 29, ಬರೋಬ್ಬರಿ‌ 60 ಕೋಟಿ ರೂ ವಹಿವಾಟು ..!

Date:

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಹುಟ್ಟಿದ ಇವರ ಹೆಸರು ದೀಪಾಲಿ. ಇವರಿಗೆ ವಯಸ್ಸು ಕೇವಲ 29 ವರ್ಷ. ಓದಿದ್ದು ಪಿಯುಸಿ ಅಷ್ಟೇ. ಆದರೆ, ಮಾಡಿದ್ದು ಕೇವಲ ಒಂದು ವರ್ಷದಲ್ಲಿ 60 ಕೋಟಿ ರೂಪಾಯಿ. ಇನ್ನು ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರೋ ಮೊದಲ ಭಾರತೀಯ ಮಹಿಳೆ ಅನ್ನೋ ಹೆಮ್ಮೆ ಕೂಡ ಇವರದ್ದು.

ಎಲ್ಲರ ತಂದೆಯಂತೆ ಇವರ ತಂದೆಯೂ ಕೂಡ ದೀಪಾಲಿಯನ್ನು ಮುದ್ದಾಗಿ ಸಾಕುವುದರ ಜೊತೆಗೆ ಚೆನ್ನಾಗಿ ಓದಿಸುತ್ತಿದ್ದರು. ಹಾಗಾಗಿ ತಾನು ಚೆನ್ನಾಗಿ ಓದಿ ಮುಂದೆ ಉನ್ನತ ಹುದ್ದೆಗೆ ಏರಬೇಕು ಅಂದುಕೊಂಡಿದ್ದರು ದೀಪಾಲಿ. ಆದರೆ ನಾನೊಂದು ಬಯಸಿದರೆ ದೈವವೊಂದು ಬಗೆದೀತು ಎಂಬಂತೆ ಇವರ ಬದುಕಿನಲ್ಲಿ ಏರಿಳಿತ ಎದುರಾಯಿತು.
ಇನ್ನು ದೀಪಾಲಿಯವರು ಪಿಯುಸಿ ಓದುತ್ತಿದ್ದ ಸಮಯದಲ್ಲಿ ಅವರ ತಂದೆಯ ಬ್ಯುಸಿನೆಸ್ ತೀವ್ರ ನಷ್ಟಕ್ಕೆ ಸಿಲುಕಿತ್ತು. ತನ್ನನ್ನು ಓದಿಸುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಸಿಲುಕಿದ ತಂದೆಯನ್ನು ಕಂಡು, ದೀಪಾಲಿ ಓದುವುದನ್ನೇ ನಿಲ್ಲಸಿದ್ರು. ಆಗ ತಿಂಡಿ ತಯಾರು ಮಾಡಿ ಮಾರುವುದು ಸೇರಿದಂತೆ ಇತ್ಯಾದಿ ಕೆಲಸ ಆರಂಭಿಸಿದ್ದರು. ಅಷ್ಟೇ ಅಲ್ಲ, ಹಾಸ್ಟೆಲ್​ಗೆ ಅಡುಗೆ ಮಾಡಿಕೊಡುವಂತಹ ಕೆಲಸ ಮಾಡಿ ಬಂದ ದುಡ್ಡಿನಲ್ಲಿ ಮನೆಯ ನಿರ್ವಹಣೆ ಕೂಡ ಮಾಡುತ್ತಿದ್ದರು.
ಆದರೂ ನೋಡಿ, ದೀಪಾಲಿಯವರು ಪ್ರತಿನಿತ್ಯ ಕಷ್ಟಪಟ್ಟು ಎಲ್ಲ ಕೆಲಸಗಳನ್ನು ಮಾಡಿತ್ತಿದ್ರು. ಹಾಗಿದ್ರೂ ಕೂಡ ಅವರ ಕೈಯಲ್ಲಿ ಒಂದು ರೂಪಾಯ್​ ನಿಲ್ಲುತ್ತಿರಲಿಲ್ಲ. ಆಗ ದೀಪಾಲಿಯವರು ಕೆಲಸ ಹುಡುಕಿಕೊಂಡು ಇಂದೋರ್​ಗೆ ಹೋಗುತ್ತಾರೆ. ಅಲ್ಲಿ ಒಂದು ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲೇ ಕೆಲಸ ಮಾಡುತ್ತಿರುವ ಸಮಯದಲ್ಲಿ, ಅವರಿಗೆ ಒಂದು ಪ್ಲಾನ್ ಹೊಳೆಯುತ್ತದೆ.
ದೀಪಾಲಿಯವರಿಗೆ ಹೊಳೆದ ಆ ಪ್ಲಾನ್ ಏನೆಂದರೆ, ಪ್ರತೀ ದಿನ ಮಾರುಕಟ್ಟೆಯ ವ್ಯವಹಾರಗಳನ್ನು ನೋಡುತ್ತಿದ್ದ ದೀಪಾಲಿಯವರಿಗೆ ನಾನ್ಯಾಕೆ ಮಧ್ಯವರ್ತಿ ಅಂದರೆ ಬ್ರೋಕರ್ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅನ್ನಿಸುತ್ತದೆ. ಅದರಂತೆ ಕಮೋಡಿಟಿ ಮತ್ತು ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರು ಹಚ್ಚಿಕೊಳ್ಳುತ್ತಾರೆ.


ಬರೀ ಗಂಡಸರೇ ಮಾಡುತ್ತಿದ್ದ ಈ ಟ್ರೇಡಿಂಗ್ ಕೆಲಸವನ್ನು ದೀಪಾಲಿಯವರು ಶುರು ಮಾಡಿದಾಗ ಎಲ್ಲರೂ ಗೇಲಿ ಮಾಡಲು ಪ್ರಾರಂಭಿಸುತ್ತಾರೆ. ಆದರೆ ಇದ್ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದೇ ಪಟ್ಟು ಬಿಡದ ಅವರು ದಿನೇ ದಿನೇ ತಾನು ಅಂದುಕೊಂಡಿದ್ದನ್ನು ಸಾಧಿಸುತ್ತ ಮುಂದೆ ಬರುತ್ತಾರೆ. ಆಗ ಅವರು ‘Deepali Commodity Business’ ಶುರು ಮಾಡುತ್ತಾರೆ. ಆಗ ದೀಪಾಲಿಯವರ ಯಶಸ್ಸಿನ ದಿಕ್ಕೇ ಬದಲಾಗುತ್ತದೆ.
ಇನ್ನು ದೀಪಾಲಿಯವರು ‘ Deepali Commodity Business’ ಎಂದು ತನ್ನದೇ ಆದ ಟ್ರೇಡಿಂಗ್ ಫಾರ್ಮ್ ಪ್ರಾರಂಭಿಸುತ್ತಾರೆ. ಆಗ ಬರೀ ಒಂದೇ ವರ್ಷದಲ್ಲಿ 29 ವರ್ಷದ ದೀಪಾಲಿಯವರು ಬರೋಬರಿ 60ಕೋಟಿ ವ್ಯಾಪಾರವನ್ನು ಮಾಡಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. ಹಾಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎನಿಸಿಕೊಳ್ಳುತ್ತಾರೆ. ಈಗ ಪುಲ್ ಟೈಮ್ ಟ್ರೇಡಿಂಗ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಏನೇ ಹೇಳಿ ಕೇವಲ ಪಿಯುಸಿ ಓದಿದ್ದರೂ, ಛಲ ಬಿಡದೇ ಮುನ್ನುಗ್ಗಿದ ದೀಪಾಲಿಯವರು ಈಗ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ತಾಳ್ಮೆ ಮತ್ತು ಬುದ್ಧಿವಂತಿಕೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...