ಕ್ವಿಯಾನ್ ಹಾಂಗ್ಯಾನ್. ಚೀನಾ ರಾಜಧಾನಿ ಬೀಜಿಂಗ್ನ ಹುಡುಗಿ. ನಾಲ್ಕು ವರ್ಷದವಳಿದ್ದಾಗ ನಡೆದ ಅಪಘಾತ ಆಕೆಯ ಎರಡು ಕಾಲುಗಳನ್ನು ಕಳೆದುಕೊಳ್ಳುವಂತಾಯಿತು. ಬಾಸ್ಕೆಟ್ ಬಾಲ್ ಎಂದರೆ ಪಂಚ ಪ್ರಾಣವಾಗಿದ್ದ ಈಕೆ ಇನ್ನೆಂದಿಗೂ ಆ ಆಟ ಆಡಲು ಸಾಧ್ಯವಾದಂತಹ ಸ್ಥಿತಿಗೆ ತಂದಿತ್ತು ನಡೆದ ಭೀಕರ ಅಪಘಾತ.
ಕಾಲು ಕಳೆದುಕೊಂಡು ಮೂಲೆಗುಂಪಾದ ಮಗುವಿಗೆ ಜಗತ್ತೇ ಶೂನ್ಯವಾಗಿತ್ತು. ಮೊಮ್ಮಗಳ ಕಷ್ಟ ನೋಡಲು ಆಗದ ತಾತ, ಬ್ಯಾಸ್ಕೆಟ್ ಬಾಲ್ ಅನ್ನು ಅರ್ಧಭಾಗ ಕತ್ತರಿಸಿ ಕೆಳಗಿನ ಭಾಗಕ್ಕೆ ಜೋಡಿಸಿದ. ಕೈಗಳನ್ನು ನೆಲಕ್ಕೆ ಊರಿಕೊಂಡು ಸುಸ್ತಾದಾಗ ಬಾಸ್ಕೆಟ್ಬಾಲ್ನ್ನು ಆಸರೆಯಾಗಿಟ್ಟುಕೊಂಡು ಕುಳಿತುಕೊಳ್ಳುವಂತೆ ತರಬೇತಿ ನೀಡುವಲ್ಲಿ ಯಶಸ್ವಿಯೂ ಆದ.
ಚೀನಾದಲ್ಲಿ ಕ್ವಿಯಾನ್ಗೆ ಸಿಕ್ಕ ಪ್ರಚಾರ ಅಷ್ಟಿಷ್ಟಲ್ಲ. ದೇಶ ವಿದೇಶಗಳಿಂದ ಹಣಕಾಸಿನ ನೆರವಿನ ಪೂರವೇ ಹರಿದು ಬಂದಿತು. 2007ರಲ್ಲಿ ಆಕೆಗೆ 11 ವರ್ಷವಿದ್ದಾಗ ಬೀಜಿಂಗ್ನ ಪುನರ್ವಸತಿ ಕೇಂದ್ರದಲ್ಲಿ ಮೊದಲ ಬಾರಿಗೆ ಆಕೆಗೆ ಕೃತಕ ಕಾಲುಗಳನ್ನು ಅಳವಡಿಸಲಾಯಿತು.
ಕ್ವಿಯಾನ್ ಯಶೋಗಾಧೆ ಇಷ್ಟಕ್ಕೆ ಮುಗಿಯುವುದಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ಛಲ, ಹಠ ಇತ್ತು. ಇಡಿ ವಿಶ್ವಕ್ಕೆ ತನ್ನ ಹೆಸರು ಪ್ರಚುರವಾಗಬೇಕೆಂಬ ಮಹದಾಸೆ ಇತ್ತು. ವಿಕಲಾಂಗರು ಈಜುವುದನ್ನು ಕೇಳಿದ್ದ ಕ್ವಿಯಾನ್ ತಾನು ಏಕೆ ಈಜು ಕಲಿಯಬಾರದು ಅನಿಸಿದ್ದೇ ತಡ ವಿಶೇಷ ತರಬೇತಿ ಪಡೆದಳು.
ಮೊದ ಮೊದಲು ಈಜು ಕಷ್ಟವಾದರೂ ನಂತರದ ಸಮಯದಲ್ಲಿ ಕಠಿಣ ಶ್ರದ್ಧೆ, ಪರಿಶ್ರಮದಿಂದ ಈಜುವುದನ್ನು ಕರಗತ ಮಾಡಿಕೊಂಡಳು. ಈಜುವುದನ್ನು ಪ್ರೀತಿಸತೊಡಗಿದಾಗ ಎಲ್ಲವೂ ಸುಲಭವಾಯಿತು. ಸ್ಥಳೀಯ ಮಟ್ಟದಲ್ಲಿ ವಿಕಲಾಂಗರಿಗಾಗಿ ನಡೆದ ಈಜು ಸ್ಪರ್ಧೆಗಳಲ್ಲಿ ಹಂತ ಹಂತವಾಗಿ ಪದಕಗಳನ್ನು ಪಡೆದಳು.
ಇದು ಅಂತರ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾಯಿತು. 2012ರಲ್ಲಿ ಲಂಡಲ್ನಲ್ಲಿ ನಡೆದ ಅಂತರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದಾಗ ವಿಶ್ವವೇ ಬೆರಗಾಗಿ ಹೋಯಿತು.
ಚೀನಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜತೆಗೆ ಎರಡು ಬೆಳ್ಳಿ ಪದಕಗಳನ್ನು ಪಡೆದ ಕ್ವಿಯಾನ್ ಮತ್ತೆ ಸದ್ದು ಮಾಡಿದಳು. ಇಂದು ಕ್ವಿಯಾನ್ ಚೀನಾ ದೇಶದ ಜನರ ಮನೆಮಗಳಾಗಿದ್ದಾಳೆ.
ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!
ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ
“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ
ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..!
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!
ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!
ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್ ಸುದೀಪ್ ಅಲ್ಲ ..! ಮತ್ಯಾರು?
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!
ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?
ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!
ಮಾಲೀಕರಿಲ್ಲದ ಅಂಗಡಿಯಲ್ಲಿ ಗ್ರಾಹಕರೇ ವ್ಯಾಪಾರಿ …ಬೇಕಾಗಿದ್ದು ತಗೋಳಿ ದುಡ್ ಹಾಕಿ ಹೋಗಿ ..!
ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!
ರಿಲೀಸ್ ಗೂ ಮುನ್ನವೇ ರಜನಿಕಾಂತ್ 2.0 , ಪ್ರಭಾಸ್ ‘ಬಾಹುಬಲಿ’ ರೆಕಾರ್ಡ್ ಬ್ರೇಕ್ ಮಾಡಿದ ಯಶ್ ‘ಕೆಜಿಎಫ್- 2’ …!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!