ತಂಗಿ `ನಿರ್ಭಯ'ಗೆ ಪರಿಪೂರ್ಣ ನ್ಯಾಯ ಸಿಕ್ಕಿಲ್ಲ..! ಎಚ್ಚರ..!! ಜನರು ರೊಚ್ಚಿಗೇಳಬಹುದು..!?

Date:

raaa2012, ಡಿಸೆಂಬರ್ 16. ಬೇರೆ ಬೇರೆ ದಿಕ್ಕಿನಲ್ಲಿ ಬೇರೆ ಬೇರೆ ಲೋಕದಲ್ಲಿ ಅಪರಾಧಗಳು ನಡೆಯುತ್ತಲೇ ಇತ್ತು. ಜಗತ್ತು ರೊಟೀನ್ ಆಗುವುದೇ ಹಾಗೆ. ರಾತ್ರಿ ಕಳೆದು ಬೆಳಕು ಮೂಡುವಷ್ಟರಲ್ಲಿ ಹೊಸತೊಂದು ಕ್ರೈಂ ಸೃಷ್ಟಿಯಾಗುತ್ತದೆ. ಮೊದಲೇ ಹೇಳಿದಂತೆ ಇವೆಲ್ಲ ರೊಟಿನ್ ಆಗಿರುವುದರಿಂದ ಕೆಲವೊಂದು ಸದ್ದು ಮಾಡುತ್ತದೆ. ಕೆಲವೊಂದು ಸುದ್ಧಿಯಾಗದೇ ಸಾಯುತ್ತವೆ. ಆದರೆ ಅವತ್ತು ಹಾಗೇ ಸಣ್ಣ ಸದ್ದಿಲ್ಲದೇ ಸಾಯುವ ಘಟನೆ ನಡೆದಿರಲಿಲ್ಲ. ಕಗ್ಗತ್ತಲಲ್ಲಿ ನಡೆದುಹೋಗಿತ್ತು ರೇಪ್. ಅತ್ತ ಅತ್ಯಾಚಾರಕ್ಕೊಳಗಾದ ನಿರ್ಭಯ ಸಾವು ಬದುಕಿನ ಮಧ್ಯೆ ಅವಿರತ ಹೋರಾಟ ನಡೆಸುತ್ತಿದ್ದರೇ ಇತ್ತ ಅವಳ ಧಾರುಣ ಸ್ಥಿತಿಗೆ ಇಡೀ ದೇಶವೇ ಪುಟಿದೆದ್ದಿತ್ತು. ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆದವು. ಅತ್ಯಾಚಾರಿಗಳನ್ನು ಒಂದೇ ಒಂದು ಸಾರಿ ಕೈಗೆ ಕೊಟ್ಟುಬಿಡಿ, ನಾವೇ ನಿರ್ಭಯಾಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ ಅಂತ ಆಕ್ರೋಶ ಕೇಳಿಬಂತು.

ಎಕ್ಸಾಕ್ಟ್ಲೀ ದಿಸ್. ಒಂದು ದೇಶಕ್ಕೆ, ಒಂದು ರಾಜ್ಯಕ್ಕೆ, ಒಂದು ಪ್ರದೇಶಕ್ಕೆ ಇಂಥದ್ದೊಂದು ಹಠಾತ್ ಆಕ್ರೋಶಗಳು ಬೇಕೇಬೇಕು. ಹುಚ್ಚು ನಾಯಿ ಅಂತ ಗೊತ್ತಿದ್ದರೂ ಅದನ್ನು ಕಚ್ಚಲು ಬಿಡುವ ಮೂರ್ಖರು ನಮ್ಮ ದೇಶದಲ್ಲಿ ಇಲ್ಲ. ಅವರಿಗೂ ಆಕ್ರೋಶ ಇದೆ, ಸಂಕಟ ಇದೆ, ಸ್ವಾಭಿಮಾನ ಇದೆ, ಭಾವನೆಗಳಿವೆ ಅಂತ ತೋರಿಸಿಕೊಟ್ಟಿದ್ದರು. ದೇಶ, ಹೆಣ್ಣು ಅಂತ ಬಂದ್ರೇ ಈ ದೇಶದ ನರ ಇಲ್ಲದವರು ಕೂಡ ಎದ್ದು ನಿಲ್ಲುತ್ತಾರೆ ಎನ್ನುವುದಕ್ಕೆ ನಿರ್ಭಯ ಕೇಸ್ ಜ್ವಲಂತ ಸಾಕ್ಷಿಯಾಗಿತ್ತು. ನಿರ್ಭಯ ಕೇಸಿನಲ್ಲಿ ಅವತ್ತು ಕಾಣಿಸಿದ್ದು ಕೇವಲ ಆಕ್ರೋಶವಲ್ಲ. ಸಿಟ್ಟು, ಸೆಡವುಗಳಲ್ಲ. ಬದಲಾಗಿ ಅಲ್ಲಿ ಕರುಳು ಹಿಂಡುವ ಆಕ್ರಂದನಗಳಿತ್ತು. ನಮ್ಮನೆ ಮಗಳನ್ನು ರಾತ್ರೋರಾತ್ರಿ ತಿಂದು ತೇಗಿಬಿಟ್ಟಿದ್ದಾರೆ. ನಮ್ಮ ನಡುವೆ ಓಡಾಡಿಕೊಂಡಿದ್ದ ಹುಡುಗಿಗೆ ಈ ತರಾ ಅನ್ಯಾಯ ಆಗಬಾರದಿತ್ತು. ಆಗಿದ್ದು ಆಗಿದೆ, ಆ ದುರುಳರನ್ನು ಒಂದ್ ಸಲ ನಮ್ಮ ಕೈಗೆ ಒಪ್ಪಿಸಿಬಿಡಿ. ಈ ದೇಶದಲ್ಲಿ ಗಂಡಸು ಎನಿಸಿಕೊಂಡವ್ನು ಇನ್ನೊಂದು ಹೆಣ್ಣಿನ ಮೇಲೆ ಕೈ ಇಡುವುದಿರಲಿ, ಕಣ್ಣು ಕೂಡ ನೆಡದಂತೆ ಮಾಡಿಬಿಡ್ತೀವಿ ಅಂತ ಆವೇಶಭರಿತರಾಗಿ ಹೇಳುತ್ತಿದ್ದಿದ್ದರಲ್ಲಿ ಉತ್ಪ್ರೇಕ್ಷೆಗಳಿರಲಿಲ್ಲ. ಆದರೆ ಇವರೆಲ್ಲರ ಆತಂಕ, ಕಣ್ಣೀರು, ಪ್ರಾರ್ಥನೆಗಳಿಗೆ ಫಲ ಸಿಗ್ಲಿಲ್ಲ. ಸಿಂಗಾಪುರದ ಮೌಟ್ ಎಲೆಜಬೆತ್ ಹಾಸ್ಪಿಟಲ್ನಲ್ಲಿ ಕರುಳು ಹರಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂಗ್ಯವ್ವ ಶಾಶ್ವತವಾಗಿ ಕಣ್ಣು ಮುಚ್ಚಿದ್ದಳು. ಒಂದೇ ಒಂದು ಸಲ ಎದ್ದು ಬರಬಾರದಿತ್ತಾ ಮಗಳೇ ಎಂಬ ಕೂಗನ್ನು ಕೇಳಿಸಿಕೊಳ್ಳದೇ ಹೊರಟುಹೋಗಿದ್ದಳು.

ನಿರ್ಭಯ ಸಾವಿಗೆ ಕಾರಣವಾದವರಿಗೆ ಕೋರ್ಟ್ ತಕ್ಕ ಶಿಕ್ಷೆಯನ್ನೇ ಕೊಟ್ಟಿದೆ. ಒಟ್ಟು ಐದು ಜನ ಆರೋಪಿಗಳಲ್ಲಿ ಒಬ್ಬಾತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಮೂವರಿಗೆ ಗಲ್ಲು ಶಿಕ್ಷೆಯಾಗಿದೆ. ಒಬ್ಬ ಬಾಲಾಪರಾಧಿಗೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿತ್ತು. ಹೆಚ್ಚುವರಿ ಒಂದು ವರ್ಷ ಹೆಚ್ಚೇ ಶಿಕ್ಷೆಗೀಡಾಗಿ ಆಮೇಲೆ ಹೊರಬಂದಿದ್ದ. ಅವನು ಅಪ್ರಾಪ್ತ. ಅದಕ್ಕಿಷ್ಟೇ ಶಿಕ್ಷೆ ಅಂತ ಕಾನೂನಿನಲ್ಲಿರುವುದರಿಂದ, ಕಾನೂನಿಗೆ ವಿರುದ್ಧವಾಗಿ ಮಾತನಾಡುವಂತಿಲ್ಲ. ಹೊರಬಂದಿರುವ ಬಾಲರಾಕ್ಷಸನಿಗೆ ಏನಿಲ್ಲ ಅಂದ್ರು ಈಗ ಇಪ್ಪತೊಂದು ವಯಸ್ಸು ದಾಟಿದೆ. ಅವತ್ತಿಗೆ ಹದಿನೆಂಟಾಗಿರಲಿಲ್ಲ. ಅದೇ ಮೂರ್ನಾಲ್ಕು ತಿಂಗಳು ಕಳೆದಿದ್ದರೇ ಇವತ್ತಿಗೆ ಇವ್ನಿಗೂ ಗಲ್ಲು ಶಿಕ್ಷೆಯಾಗುತ್ತಿತ್ತು. ಆದ್ರೆ ನಮ್ಮ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ.

“ನಿರ್ಭಯ ಪ್ರಕರಣ’ ಎಂದೇ ಜನಜನಿತವಾಗಿರುವ 2012ರಲ್ಲಿ ಸಂಭವಿಸಿದ ದಿಲ್ಲಿಯ ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಅಮಾನುಷ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಾಲಾಪರಾಧಿ ಬಿಡುಗಡೆಯಾದ ನಂತರ ಆಕ್ರೋಶಗಳು ಕೇಳಿಬಂದವು. ಸುಪ್ರಿಂ ಕೋರ್ಟ್ ನಲ್ಲಿ ದೆಹಲಿ ಮಹಿಳಾ ಆಯೋಗ ಈ ಸುಳಿವು ಸಿಕ್ಕ ದಿನವೇ ಮೇಲ್ಮನವಿ ಸಲ್ಲಿಸಿತ್ತು. ಆದರೆ ಸುಪ್ರಿಂ ಕೋರ್ಟ್ ಕಾನೂನಿನ ನಿಯಮದ ಅನುಸಾರ ಬಾಲ ರಾಕ್ಷಸನಿಗೆ ರಿಲೀಫ್ ನೀಡಿತ್ತು. ಬಾಲ ರಾಕ್ಷಸ ಬಿಡುಗಡೆಯಾಗುತ್ತಾನೆ ಎಂಬ ಸುಳಿವು ಸಿಕ್ಕ ದಿನವೇ ಬಿಡುಗಡೆಗೆ ತಡೆಯೊಡ್ಡುವಂತೆ ದಿಲ್ಲಿ ಮಹಿಳಾ ಆಯೋಗ ರಾತೋರಾತ್ರಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರೂ ಅದು ಫಲಕಾಣಲಿಲ್ಲ. ಬಾಲಾಪರಾಧಿ ಬಿಡುಗಡೆಯಾಗದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಶನಿವಾರ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ಅವರ ನಿವಾಸಕ್ಕೆ ತೆರಳಿ ಅರ್ಜಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಈ ಕಿರಾತಕ ಬಿಡುಗಡೆಯಾಗಬಾರದು ಅಂತ ಅತ್ಯಾಚಾರ ಸಂತ್ರಸ್ತೆಯ ಪಾಲಕರ ನೇತೃತ್ವದಲ್ಲಿ ಇಂಡಿಯಾ ಗೇಟ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳು ನಡೆದವು. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಯಾವ ತೀರ್ಪು ಕೊಡುವಂತಿಲ್ಲ. ಆ ಕಾರಣಕ್ಕೆ ಯಾವುದೇ ಪ್ರತಿಭಟನೆಗಳು ಫಲ ನೀಡಲಿಲ್ಲ. ಪ್ರತಿಭಟನಾನಿರತರನ್ನೇ ಪೊಲೀಸರು ಅರೆಸ್ಟ್ ಮಾಡಿ ಬಿಡುಗಡೆ ಮಾಡಿದರು.

ಎಲ್ಲಿಯಾದರೂ ಈ ಬಾಲ ರಾಕ್ಷಸ ಜನರ ಕೈಗೆ ಸಿಕ್ಕಿಬಿಟ್ಟರೇ ಕೊಂದು ಬಿಡುತ್ತಾರೋ ಅಂತ ಅವನನ್ನು ರಹಸ್ಯ ಸ್ಥಳದಿಂದ ಬಿಡುಗಡೆ ಮಾಡಲಾಗಿತ್ತು. ಸರ್ಕಾರೇತರ ಸಂಘಟನೆಯೊಂದು ಆತನನ್ನು ಸುಪರ್ದಿಗೆ ತೆಗೆದುಕೊಂಡು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದಿತ್ತು. ಬಿಡುಗಡೆಗೂ ಮುನ್ನ ಅವನನ್ನು, `ನೀನು ಉತ್ತರಪ್ರದೇಶದ ಬದಾಯೂಂನಲ್ಲಿರುವ ನಿನ್ನ ಮನೆಗೆ ಹೋಗುತ್ತೀಯಾ ಅಥವಾ ಸರ್ಕಾರೇತರ ಸಂಘಟನೆಯ ಆಶ್ರಯದಲ್ಲಿ ಇರುತ್ತೀಯಾ’ ಎಂದು ಪ್ರಶ್ನಿಸಲಾಗಿತ್ತು. ಆಗ ಆತ `ನಾನು ಮನೆಗೆ ಹೋಗಲ್ಲ. ಸುರಕ್ಷತೆ ದೃಷ್ಟಿಯಿಂದ ಸಂಸ್ಥೆಯ ಆಶ್ರಯದಲ್ಲೇ ಇರ್ತೀನಿ’ ಎಂದಿದ್ದ. ಇದರ ಬೆನ್ನಿಗೆ ದೆಹಲಿ ಸರ್ಕಾರ ಅವನ ಜೀವನೋಪಾಯಕ್ಕೆ ಹೊಲಿಗೆ ಯಂತ್ರ, ಹತ್ತು ಸಾವಿರ ಹಣವನ್ನು ಕೊಟ್ಟಿತ್ತು. ರೇಪ್ ಮಾಡಿದವ್ನಿಗೆ ಇಷ್ಟೆಲ್ಲಾ ಸೆಕ್ಯುರಿಟಿ, ರಾಜಮರ್ಯಾದೆ ಸಿಗುತ್ತೆ ಅಂದರೇ ಅದು ನಮ್ಮ ದೇಶದಲ್ಲಿ ಮಾತ್ರ..! ಡಿಸೆಂಬರ್ 16, 2012ರಂದು ಭಾರತದ ರಾಜಧಾನಿ ದೆಹಲಿಯಲ್ಲಿ ವೈದ್ಯ ವಿದ್ಯಾರ್ಥಿನಿ ನಿರ್ಭಯಳನ್ನು ಚಲಿಸುತ್ತಿದ್ದ ಬಸ್ನಲ್ಲಿ ಆರು ಮಂದಿ ದುಷ್ಕಮರ್ಿಗಳು ಕಬ್ಬಿಣದ ಸರಳಿನಿದ ಹೊಡೆಯುವ ಮೂಲಕ ದಾರುಣವಾಗಿ ಅತ್ಯಾಚಾರ ಮಾಡಿದ್ದರು. ಈ ಪೈಶಾಚಿಕ ಘಟನೆಯಿಂದಾಗಿ ಅವಳ ತಲೆ ಹಾಗೂ ಕರುಳಿಗೆ ತೀವ್ರ ತೆರನಾದ ಗಾಯಗಳಾಗಿದ್ದವು.

ನಿರ್ಭಯ ಪೋಷಕರು ಉತ್ತರ ಪ್ರದೇಶದ ಬಾಲಿ ಜಿಲ್ಲೆಗೆ ಸೇರಿದವರು. ಅವರದ್ದು ಕೃಷಿಕ ಕುಟುಂಬ. ಬಡತನವೇ ಮನೆ ತುಂಬಿಕೊಂಡಿತ್ತು. ಮಗಳ ಶಿಕ್ಷಣಕ್ಕಾಗಿ ಜೀವನಾಂಶಕ್ಕಾಗಿ ಇದ್ದ ಮೂರು ಕುಂಟೆ ಜಮೀನನ್ನು ಮಾರಿದ್ದರು. ಆಗಾಗ ಮಾತ್ರ ದೆಹಲಿಗೆ ಬರುತ್ತಿದ್ದರು. ಮೃತ ದುರ್ದೈವಿ ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ. ಭದ್ರತೆಯ ಕಾರಣಕ್ಕಾಗಿ ಆಕೆಯನ್ನು ಜ್ಯೋತಿ, ಜಾಗೃತಿ, ಅಮಾನತ್, ನಿರ್ಭಯ ಹಾಗೂ ದಾಮಿನಿ ಅಂತ ಕರೆಯಲಾಗುತ್ತದೆ. ನವದೆಹಲಿಯ ಬೆರ್ ಸರೈ ಪ್ರಾಂತ್ಯದಲ್ಲಿ ವಾಸವಾಗಿದ್ದಳು. ಅವತ್ತು 2012ರ ಡಿಸೆಂಬರ್ 16ನೇ ತಾರೀಕು. ನಿರ್ಭಯ ಹಾಗೂ ಆಕೆಯ ಗೆಳೆಯ ಜೊತೆಗೂಡಿ ದೆಹಲಿಯ ಸಾಕೆತ್ ಬಳಿಯ ಚಿತ್ರಮಂದಿರವೊಂದರಲ್ಲಿ ದಬಾಂಗ್ 2 ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿಸಿಕೊಂಡು ಹೊರಬಂದಾಗ ಸಮಯ ರಾತ್ರಿ 9.30 ಆಗಿತ್ತು. ಆ ವೇಳೆ ಖಾಸಗಿ ಬಸ್ ಹತ್ತಿದ್ದಾರೆ. ಆ ಬಸ್ನಲ್ಲಿ ಚಾಲಕನನ್ನು ಒಳಗೊಂಡು ಆರು ಮಂದಿ ಪ್ರಯಾಣಿಕರಿದ್ದರು. ಬಸ್ಸಿನೊಳಗಿದ್ದವರು ನಗರದ ಕೊಳೆಗೇರಿಗೆ ಸೇರಿದ್ದವರಾಗಿದ್ದರು. ಡ್ರೈವರ್ ಹಾದಿ ತಪ್ಪಿಸಿದ್ದ. ಮಿಕ್ಕವರು ಚಲಿಸುತ್ತಿದ್ದ ಬಸ್ಸಿನ ಬಾಗಿಲು ಹಾಕಿದ್ದರು.

ಇದೇಕೆ ಹೀಗೆ ಮಾಡ್ತಿದ್ದೀರಾ..? ಎಂದು ಆಕೆಯ ಗೆಳೆಯ ಅವರನ್ನು ಕೇಳಿದ್ದಾನೆ. ಅಲ್ಲಿದ್ದ ಪ್ರಯಾಣಿಕರು, `ರಾತ್ರಿ ಹೊತ್ತು ನಿನಗೆ ಏನು ಕೆಲಸ?’ ಅಂತ ಪ್ರಶ್ನೆ ಮಾಡುವ ಮೂಲಕ ಆಕೆಯ ಹತ್ತಿರ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಅದನ್ನು ತಡೆಯಲು ಬಂದ ಗೆಳೆಯನಿಗೆ ಕಬ್ಬಿಣದ ಸರಳಿನಿಂದ ಹೊಡೆದು ಪ್ರಜ್ಞೆತಪ್ಪಿಸಿದ್ದಾರೆ. ಆನಂತರ ಯುವತಿಯನ್ನು ಒಬ್ಬೊಬ್ಬರಾಗಿ ಪೀಡಿಸಲು ಶುರು ಮಾಡಿದ್ದಾರೆ. ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಯುವತಿ ದುರುಳರ ಕೈ ಕಚ್ಚಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳು ಆಕೆಗೂ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ. ಒಂದು ಗಂಟೆಗಳ ಕಾಲ ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಮೇಲೆರಗಿ ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಒಬ್ಬೊಬ್ಬರಾಗಿ ಬಸ್ ಚಲಿಸುವ ಮೂಲಕ, ಅತ್ಯಾಚಾರ ಮಾಡಿದ್ದಾರೆ. ಕೊನೆಗೆ ಕಬ್ಬಿಣದ ಸರಳನ್ನು ಆಕೆಯ ಮರ್ಮಾಂಗಕ್ಕೆ ಚುಚ್ಚುವ ಮೂಲಕ ಧಾರುಣವಾಗಿ ಗಾಯಗೊಳಿಸಿ ಆಕೆಯನ್ನು ಹಾಗೂ ಆಕೆಯ ಗೆಳೆಯನನ್ನು ರಸ್ತೆಯ ಮೇಲೆ ಎಸೆದುಹೋಗಿದ್ದಾರೆ.

ಇಂಥದ್ದೊಂದು ಪೈಶಾಚಿಕತೆ ನಡೆದ ವಿಷಯ ತಿಳಿದ ದೆಹಲಿ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆ, ಕರುಳು, ಮರ್ಮಾಂಗಕ್ಕೆ ತೀವ್ರವಾಗಿ ಗಾಯವಾಗಿವೆ. ಕಂಡೀಷನ್ ವೆರೀ ಸೀರಿಯಸ್ ಎಂದಿದ್ದರು. ವಿಕೃತ ಕಾಮಿಗಳು ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ಸರಳಿನಿಂದ ಚುಚ್ಚಿದ್ದರಿಂದಾಗಿ ಶೇಕಡಾ 5% ಕರುಳು ಮಾತ್ರ ಉಳಿದುಕೊಂಡಿತ್ತು. ಈ ದುರ್ಘಟನೆ ನಡೆದ ಮೂರನೇ ದಿನಕ್ಕೆ ಅಂದರೇ ಡಿಸೆಂಬರ್ 19ನೇ ತಾರೀಕು ಆಕೆಗೆ ಗ್ಯಾಂಗ್ರಿನ್ ತಗುಲಿಕೊಂಡಿತ್ತು. ನರಗಳ ಮೂಲಕ ಔಷಧ ಕೊಡಲಾಯಿತು. ಡಿಸೆಂಬರ್ 21ರಂದು ಸರ್ಕಾರ ಆಕೆಗಾಗಿ ಅತ್ಯುತ್ತಮ ವೈದ್ಯ ಸಮಿತಿಯನ್ನು ನೇಮಕ ಮಾಡಿತು. 25 ಡಿಸೆಂಬರ್ ಕಳೆದರೂ ಅವಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಂತಿಮವಾಗಿ ಅಲ್ಲಿಯೂ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಸಾವಿನೊಂದಿಗೆ ಹೋರಾಡುತ್ತಲೇ ಡಿಸೆಂಬರ್ 29ರ ಬೆಳಗ್ಗೆ 4.45ಕ್ಕೆ ಕೊನೆಯುಸಿರೆಳೆದಳು.

ಮುಂದೇ ಪೈಶಾಚಿಕ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಬಂಧಿಸಲಾಯಿತು. ಬಸ್ ಚಾಲಕ ರಾಮ್ ಸಿಂಗ್, ಅವನ ತಮ್ಮ ಮುಕೇಶ್ ಸಿಂಗ್ ಇಬ್ಬರನ್ನು ರಾಜಸ್ತಾನದಲ್ಲಿ ಬಂಧಿಸಲಾಗಿತ್ತು. ಜಿಮ್ ಇನ್ಸ್ಟ್ರಕ್ಟರ್ ವಿನಯ್ ಶರ್ಮನನ್ನು ದೆಹಲಿಯಲ್ಲಿ ಬಂಧಿಸಿದ್ದರು. ಹಾಗೆಯೇ ಹಣ್ಣಿನ ವ್ಯಾಪಾರಿಯಾಗಿದ್ದ ಪವನ್ ಗುಪ್ತ, ಅಪ್ರಾಪ್ತನಾದ ರಾಜು, ಬಿಹಾರದಿಂದ ಕೆಲಸಕ್ಕೆ ಬಂದಿದ್ದ ಅಕ್ಷಯ್ ಠಾಕೂರ್ನನ್ನು ಬಂಧಿಸಲಾಯ್ತು. ಬಂಧಿತರನ್ನು ತಿಹಾರ್ ಜೈಲಿನಲ್ಲಿ ಪ್ರತ್ಯೇಕ ಸೆಲ್ನಲ್ಲಿ ಇಡಲಾಯಿತು. ಅದರಲ್ಲೊಬ್ಬ ಆತ್ಮಹತ್ಯೆ ಮಾಡಿಕೊಂಡ. ಮೂವರಿಗೆ ಗಲ್ಲು ಶಿಕ್ಷಯಾಗಿದೆ. ಒಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಬಿಡುಗಡೆಯಾದ. ನಮ್ಮ ದೇಶದಲ್ಲಿ ಚಳುಕು ಹುಟ್ಟಿಸಿದ್ದ ನಿರ್ಭಯ ಪ್ರಕರಣದಲ್ಲಿ ಮೂವರಿಗೆ ಗಲ್ಲಾದರೇ ಆಲ್ಮೋಸ್ಟ್ ಮುಗಿದಂತಾಗುತ್ತದೆ. ಬಾಲಾಪರಾಧಿ ಎಂಬ ಕಾರಣಕ್ಕೆ ಬಿಡುಗಡೆಯಾದ ಈ ರಾಕ್ಷಸ ಬಚಾವಾಗಿದ್ದನ್ನು ಯಾರಿಂದಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಮಗಳ ಬದುಕನ್ನು ದುರಂತ ಅಂತ್ಯಗೊಳಿಸಿದ ಪರಮಪಾಪಿಯೊಬ್ಬ ರಿಲೀಸ್ ಆಗಿ ಹೊರಬಂದಿದ್ದನ್ನು ಅವಳ ಹೆತ್ತವರಿಂದ ಸಹಿಸಲಾಗುತ್ತಿಲ್ಲ.

ಕತ್ರಿಗುಪ್ಪೆಯಲ್ಲಿ ಯುವತಿಯನ್ನು ಹೊತ್ತೊಯ್ದ ದೃಶ್ಯ ಮನಸನ್ನು ಕಲಕುತ್ತಿರುವುದರಿಂದ ಅದೇಕೋ ನಿರ್ಭಯ ನೆನಪಾದಳು. ಅದಕ್ಕೆ ಇಷ್ಟು ಬರೆಯಬೇಕಾಯಿತು. ನಮ್ಮ ಕಾನೂನಿನಲ್ಲಿ ಬಚಾವಾಗಲು ಹಲವು ದಾರಿಗಳಿರುವುದರಿಂದ ನೊಂದವರಿಗೆ ನ್ಯಾಯ ಸಿಗುತ್ತದಾ..? ಎಂಬ ಪ್ರಶ್ನೆಗೆ ಸುಲಭ ಉತ್ತರಗಳಿಲ್ಲ.

POPULAR  STORIES :

ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!

ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ

5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...