ಇದು ನೈಜ ಸೂಕ್ಷ್ಮ ಸಂವೇದನೆಯ ಕತೆಯಾಗಿರುವುದರಿಂದ ಯಾರದು ನಿಜವಾದ ಹೆಸರು ವಿಳಾಸ ಇಲ್ಲದೇ…ಆರಂಭಿಸಿ ಮುಗಿಸುವೆ ತೊಚಿದ್ದು ತಿಳಿಸಿ
ಗೆಳೆಯರೇ ಅವನ ಕಂಗಳಲ್ಲಿ ಆಗಿನ್ನು ತಾರುಣ್ಯದ ಕಾಂತಿ ಸೋಸುವಾಗ! ಅವಳಿಗೆ ಅವನ ಮೇಲೆ ಒಲವಾಯಿತು. ಸುಮಾರು 2 ವರ್ಷಗಳ ಕಾಲ ಸದ್ದಿಲ್ಲದೇ ನಡೆಯುತ್ತಿದ್ದ ಇವರ ಪ್ರೀತಿಗೆ ಬರಸಿಡಿಲಂತೆ ಎರಗಿದ್ದು ಹುಡುಗಿಯ ಮದುವೆಯ ನಿಶ್ಚಿಯ, ಮಾರನೆಯ ದಿನ ಆ ಹುಡುಗ ಹುಡುಗಿ ಕಾಲೇಜಿಗೆ ಬಾರದೆ ದೇವಸ್ಥಾನದ ಬಳಿ ಕೂತು ಜೀವನದ ಮುಂದಿನ ದಿನಗಳ ಲೆಕ್ಕಾಚಾರ ಹಾಕಿದರು… ಆದ ಮೂರನೇ ದಿನ ಇಳಿ ಸಂಜೆ ಆ ಹುಡುಗ ಮತ್ತು ಹುಡುಗಿ ರಾಜಧಾನಿ ತಲುಪಿದರು
.. ಅಲ್ಲಿ ಹುಡುಗನ ಗೆಳೆಯ ಮೆಕಾನಿಕ್ ಆಗಿದ್ದ ಅವನ ಸಹಾಯದಿಂದ ಉಳಿಯಲು ಒಂದು ರೂಂ ಸಿಕ್ಕಿತು.. ಆ ಮೆಕಾನಿಕ್ ಇವರಿದ್ದಲ್ಲಿಗೆ ಪ್ರತಿ ದಿನ ಊಟ ತಿಂಡಿ ತಂದು ಉಪಚರಿಸಿದ.. ಕೇವಲ ಮೂರು ದಿನದಲ್ಲಿ ಹುಡುಗನಿಗೆ ಬೆಂಗಳೂರು ಓಂದು ಕಛೇರಿಯಲ್ಲಿ ಕ್ಲರ್ಕ್ ಕೆಲಸವನ್ನು ನೀಡಿತು.. ದಿನ ಸಂಜೆ ಇಬ್ಬರ ಓಡಾಟ ಮುಂಜಾನೇಯ ಜಗಳ ಅವರಿಬ್ಬರಿಗೆ ಎಲ್ಲವನ್ನೂ ಮರೆಸಿತ್ತು ಹುಡುಗನಿಗೆ ಮೊದಲ ತಿಂಗಳ ಸಂಬಳ ಬಂತು, ಹಾಗೇ ಕೆಲವು ತಿಂಗಳುಗಳು ಕಳಿಯೀತು
ಕಛೇರಿಯಲ್ಲಿ ಮುಂಗಡ ಹಣ ಪಡೆದು ಒಳ್ಳೆಯ ಮನೆ ಮಾಡಿದ EMI ಗಳ ಧೈರ್ಯದಿಂದ ಮನೆಗೆ ಬೇಕಾದ ಅಗತ್ಯವಸ್ತುಗಳನ್ನು ತಂದ ಇಬ್ಬರ ಅನ್ಯೊನ್ಯತೆ ಎಂತಹವರಿಗೂ ಹೊಟ್ಟೆ ಕಿಚ್ಚು ಹಚ್ಚುವ ಪರಿಯಲ್ಲಿತ್ತು! ಪ್ರೀತಿನೇ ಹಾಗಲ್ವಾ.! ಒಂದಿನ ಹುಡುಗ ಆಫೀಸ್ ನಲ್ಲಿ ಯಾರದೊ ಬರ್ತಡೇ ಅಂತ ಕುಡಿದು ಮನೆಗೆ ಬಂದ..
ಅಂದು ಹುಡುಗಿ ತಾರಾ ಮಾರಿ ಜಗಳ ಮಾಡಿದಳು! ಕೋಪ ತಾಳದೆ ಇವನು ಅವಳ ಕೆನ್ನೆಗೆ ಹೊಡೆದ! ಇಬ್ಬರೂ ಒಂದೊಂದು ದಿಕ್ಕಿನಲ್ಲಿ ಮಲಗಿ ರಾತ್ರಿ ಕಳೆದರು!
ಮಾರನೆಯ ದಿನ ಮುಂಜಾನೆ ಹುಡುಗ ಕಣ್ ಬಿಟ್ಟಾಗ ಹುಡುಗೀ ನಾಪತ್ತೆ! ಮೊದಲು ಹೋಗಿ ಕೋಣೆಯಲ್ಲಿ ಹುಡುಕಿದ ಆಮೇಲೆ ಆ ಇಡಿ ವಠಾರದ ಮನೆ ಮನೆಗಳಲ್ಲಿ ಹುಡುಕಿದ , ಅವಳು ಎಲ್ಲೂ ಸಿಗಲಿಲ್ಲಾ!
ಅತ್ತ ಗೋಗರೆದ ಮನೆಯ ಮೂಲೆ ಮೂಲೆಯಲ್ಲೂ ಬಿದ್ದು ಓದ್ದಾಡಿದ, ಅಲ್ಲಿಂದ ಸೀದ ಅವನ ಮೆಕಾನಿಕ್ ಗೆಳೆಯನನ್ನು ಕರೆದುಕೊಂಡು ಪೊಲೀಸ್ ಸ್ಟೇಷನ್ ಗೆ ಹೋದ, ಅವರು ಅಲ್ಲಿ ಅವಳ ಫೋಟೋ.. ಆಧಾರ್ ಕಾರ್ಡ್ ಕೇಳಿದರು ಇವನ ಬಳಿ ಅವಳ ನೆನಪು ಬಿಟ್ಟು ಏನು ಇರಲಿಲ್ಲ. .!
ಮೂರು ವರ್ಷಗಳ ನಂತರ… ಇವನು ಯುಗಾದಿ ಹಬ್ಬಕ್ಕೆ ಊರಿಗೆ ಬಂದು ವಾಪಸ್ ಕೆಲಸಕ್ಕೆ ಹೊರಡಲು ಬಸ್ ಸ್ಟ್ಯಾಂಡ್ ಗೆ ಬಂದ, ಅತ್ತ ಕಡೆಯಿಂದ ಇವನ ಹೆಸರನ್ನು ಅದೇ ಹುಡುಗಿಯ ದನಿ ಕೂಗಿದಂತಾಯ್ತು! ಇವನು ಆಶ್ಚರ್ಯದಿಂದ ಅತ್ತ ತಿರುಗಿದ! ಅಲ್ಲೊಂದು ಪುಟ್ಟ ಮಗು ಅಂಬೆಗಾಲಿಡುತ್ತ ಅವಳ ಎದೆಗಪ್ಪಿತು! ಎಂದು ಕಾಣದ ಕೈ ಅವಳ ಹೆಗಲ ಮೇಲಿತ್ತು:
ಅವನ ಗತಿ..?
- ಚೇತನ್ ದಾಸರಹಳ್ಳಿ
POPULAR STORIES :
KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!