ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?

Date:

ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಚಿತಾ ರಾಮ್ ಆಟೋ ಚಾಲಕರಾಗಿರುವ  ಅಭಿಮಾನಿಯೊಬ್ಬರನ್ನು ಹುಡುಕ್ತಾ ಇದ್ದಾರೆ! ಅವರ ಹೆಸರು ತಿಳಿಯಲು ಕಾತುರದಿ ಕಾಯ್ತಿದ್ದಾರೆ. ಅವರನ್ನು ಹುಡುಕಿ ಒಂದು ಪೋಸ್ಟ್ ಕೂಡ ಮಾಡಿದ್ದಾರೆ. ಸಿನಿಮಾ ನಟ – ನಟಿಯರನ್ನು ಹುಡುಕಿಕೊಂಡು ಅಭಿಮಾನಿಗಳು ಬರೋದು ಕಾಮನ್. ಆದರೆ, ಸ್ಟಾರ್ ನಟಿಯೇ ಅಭಿಮಾನಿಯನ್ನು ಹುಡುಕುತ್ತಿದ್ದಾರಾ ಅಂತ ಆಶ್ಚರ್ಯವಾದ್ರು ಸತ್ಯ. ಡೌನ್ ಟು ಅರ್ತ್ ವ್ಯಕ್ತಿತ್ವದ ಚೆಲುವೆ ಡಿಂಪಲ್ ಕ್ವೀನ್ ರಚಿತಾರಾಮ್ ಅಭಿಮಾನಿಯೊಬ್ಬರನ್ನು ಹುಡುಕುತ್ತಿದ್ದಾರೆ. ತಮ್ಮ ಮನೆ ಬಳಿ ಬಂದು ಫೋಟೋ ತೆಗೆಸಿಕೊಂಡು ಖುಷಿ ಖುಷಿಯಿಂದ ಹೋದ ಅಭಿಮಾನಿಯ ಹೆಸರನ್ನು ಕೇಳೋಕೆ ಆಗಿಲ್ಲ ಅಂತ ಇದೀಗ ಅವರ ಹುಡುಕಾಟದಲ್ಲಿದ್ದಾರೆ ಬುಲ್ ಬುಲ್ ಚೆಲುವೆ, ಡಿಂಪಲ್ ಕ್ವೀನ್ ರಚಿತಾರಾಮ್.. ಅವರು ಇನ್ಸ್ಟಾದಲ್ಲಿ ಮಾಡಿರೋ ಪೋಸ್ಟಲ್ಲಿ ಏನಿದೆ ಅಂತ ನೋಡೋದಾದ್ರೆ…

 

“ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ “ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ.
ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು.
ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ
ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.

ನಿಮ್ಮ,
ರಚಿತಾ ರಾಮ್  ….ಎಂದು ರಚಿತಾ ಪೋಸ್ಟ್ ಮಾಡಿದ್ದಾರೆ. ಕಾದು ನೋಡಬೇಕು ಆ ಅಭಿಮಾನಿಯಾರು ಅಂತ..

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...