ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಿಸಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆದಾಯ ತೆರಿಗೆ, ಪಾವತಿ ಮತ್ತು ಸರಕು ಮತ್ತು ಸೇವಾ ತೆರಿಗೆ ಪಾವತಿ, ರಾಜಧನ ಮತ್ತು ಪಾವತಿ, ವಾರ್ಷಿಕ ಲೆಕ್ಕ ಪತ್ರಗಳ ತಯಾರಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಹಣಕಾಸು ವ್ಯವಸ್ಥಾಪಕರನ್ನು ಆಯ್ಕೆ ಮಾಡಲು ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ .
ಇದರಲ್ಲಿ ಆಸಕ್ತಿ ಉಳ್ಳವರು ಜುಲೈ, 27-2020 ರಿಂದ ಆಗಸ್ಟ್ 10-2020 ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತರು ಅರ್ಜಿಗಳನ್ನು ಜಿಲ್ಲಾ ಪಂಚಾಯತ ಧಾರವಾಡ ವೆಬ್ ಸೈಟ್ http: //zpdharwad.Kar.nic.in ಮತ್ತು ಧಾರವಾಡ ಜಿಲ್ಲಾ ವೆಬ್ ಸೈಟ್ http://dharwad.nic.in ಮುಖಾಂತರ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಎಂಕಾಂ ಅಥವಾ ಎಂಬಿಎ ಫೈನಾನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಮತ್ತು 35 ವರ್ಷ ವಯೋಮಿತಿ ಮೀರಿರಬಾರದು ಹಾಗೂ ಕನಿಷ್ಠ ಎರಡು ವರ್ಷಗಳ ಸಂಬಂಧಿತ ಅನುಭವ ಹೊಂದಿರಬೇಕು. ಅಕೌಂಟ್ಸ್ ಮ್ಯಾನೇಜರ್ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಪಂಚಾಯತಿಯ ದೂರವಾಣಿ ಸಂಖ್ಯೆ : 0836-2443322 ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆ ಹೊರಡಿಸಲಾಗಿದೆ.