ಪುಟ್ಟ ಹಳ್ಳಿ , ತಂದೆಯ ದಿನಗೂಲಿಯೇ ಜೀವನಾಧಾರ …. ಇವತ್ತು ದೊಡ್ಡ ಯುವ ಉದ್ಯಮಿ ..!

0
726

ಪುಟ್ಟ ಹಳ್ಳಿ , ತಂದೆಯ ದಿನಗೂಲಿಯೇ ಜೀವನಾಧಾರ …. ಇವತ್ತು ದೊಡ್ಡ ಯುವ ಉದ್ಯಮಿ ..!

ಜೀವನದಲ್ಲಿ ಯಾರನ್ನೂ ಯಾವತ್ತು ಕಡೆಗಾಣಿಸಬಾರದು . ಪ್ರತಿಭೆ, ಸಾಧಿಸುವ ಛಲ, ಪರಿಶ್ರಮವಿದ್ದರೆ ಯಾರು ಎಷ್ಟು ಎತ್ತರಕ್ಕೆ ಬೆಳೆಯಬಹುದು . ಮನಸ್ಸು ಮಾಡಿ ಮುನ್ನುಗ್ಗಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ … ಈ ರಿಯಲ್ ಸ್ಟೋರಿಯೂ ನಿಮಗೆ ಸ್ಫೂರ್ತಿ .. ದಿನಗೂಲಿ ಪಡೆದು ಜೀವನ ನಡೆಸುತ್ತಿದ್ದವರ ಮಗ ಉದ್ಯಮಿಯಾದ ಸೂಪರ್ ಸ್ಟೋರಿ ಇದು ..

ಮುಸ್ತಾಫ ಐಡಿ ಫ್ರೆಶ್ ಫುಡ್ ಸಂಸ್ಥೆಯ ಸಿಇಒ. ಮೂಲತಃ ಕೇರಳದ ಪುಟ್ಟ ಗ್ರಾಮದವರು. ಸದ್ಯ ಇವರು ಬೆಂಗಳೂರಿನಲ್ಲಿ ನೆಲಿಸಿದ್ದು, ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕದಾಗಿ ಆರಂಭಿಸಿದ ರೆಡಿ ಟು ಕುಕ್ ಫುಡ್ ಇಂದು ಬೃಹದಾಕಾರವಾಗಿ ಬೆಳೆದಿದೆ. ಇದೀಗ ಐಡಿ ಪ್ರೆಶ್ ಫುಡ್, ಇಡ್ಲಿ , ದೋಸೆ ಜೊತೆ ಜೊತೆಗೆ ಇನ್ನಿತರ ಸಿದ್ಧ ಆಹಾರ ಉತ್ಪನ್ನಗಳತ್ತ ಗಮನ ಹರಿಸಿದೆ.
ಬೆಂಗಳೂರಿನ 17 ಸ್ಥಳಗಳಲ್ಲಿ ಐಡಿ ಟ್ರಸ್ಟ್ ಶಾಪ್ ತೆರೆಯಲಾಗಿದೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಿಂಡಿ ತಿಂದವರು ಹಣ ಕೊಟ್ಟು ಹೋಗುತ್ತಿದ್ದಾರೆ. ಇಡ್ಲಿ ಹಾಗೂ ದೋಸೆ ಹಿಟ್ಟಿನ ಗುಣ ಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಮೂಲ ಉದ್ದೇಶ. ಈ ಉದ್ದೇಶವನ್ನು ಗಮನದಲ್ಲಿಟ್ಟಕೊಂಡು ಕಂಪನಿ ಕಾರ್ಯ ನಿರ್ವಹಿಸುತ್ತಿದೆ ಅಂತಾರೆ ಮುಸ್ತಾಫ್ ಅವರು.


ಮುಸ್ತಾಫ ಬೆಳೆದುಬಂದ ಹಾದಿಯ ಬಗ್ಗೆ ಹೇಳಬೇಕೆಂದರೆ, ಇವರ ತಂದೆಯವರು ದಿನಗೂಲಿ ಕೆಲಸ ಮಾಡುತ್ತಿದ್ದರು. ಚಿಕ್ಕವರಿದ್ದಾಗ ಪಾಕೆಟ್ ಮನಿಗೆ ಚಿಕ್ಕಪ್ಪರಿಂದ 100 ರೂಪಾಯಿ ಹಣವನ್ನು ಪಡೆದರು.ಆ ಹಣದಲ್ಲಿ ಚಿಕ್ಕದಾದ ಚಾಕಲೆಟ್ ಹಾಗೂ ಸ್ವಿಟ್ಸ್ ಅಂಗಡಿ ತೆರೆದ್ರು. ಅಲ್ಲದೆ, ಅಲ್ಲಿ ಉತ್ತಮ ವ್ಯಾಪಾರ ಆಯಿತು. ಬೇಸಿಗೆ ರಜೆಯಲ್ಲಿ ಕಲಿತ ವಿದ್ಯೆ ಇಂದು ದೊಡ್ಡ ಉದ್ಯಮಿಯನ್ನಾಗಿಸಿದೆ.


ಗ್ರಾಹಕರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಸಿದ್ಧ ಆಹಾರ ಉತ್ಪನ್ನ ಕೊಡುವುದು ಅತ್ಯಂತ ಸವಾಲಿನ ಕೆಲಸ. ಆದರೂ ಇದರಲ್ಲಿ ಯಶಸ್ಸಿಯಾಗುತ್ತೇವೆ. ರವಾ ಇಡ್ಲಿ ಮತ್ತು ವಡಾ ಪಾವ್ ರುಚಿ ಕೆಡದಿರಲು ಯಾವುದೇ ಪ್ರಿಸರ್ವೇಟಿವ್ ಬಳಸಲ್ಲ. ಹೆಚ್ಚು ದಿನ ಬಾಳಿಕೆ ಬರುವ ವಸ್ತುಗಳ ಬದಲಿಗೆ ಕನಿಷ್ಠ ದಿನಗಳ ಅವಧಿಯಲ್ಲಿ ಗುಣಮಟ್ಟದ ಉತ್ಪನ್ನ ನೀಡುವುದೇ ಮುಪ್ತಾಪಾ ಅವರ ಕಳಕಳಿ.


ಇನ್ನು ಮುಸ್ತಾಫ್ರ ಕಂಪನಿಯ ಪ್ರಾಡಕ್ಟ್ ಬರೀ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ. ಪಕ್ಕದ ರಾಜ್ಯಗಳಲ್ಲೂ ಹೆಸರುವಾಸಿ. ದುಬೈಗೆ ಮುಸ್ತಫಾ ಕಂಪನಿಯಿಂದ ದಿನಂಪ್ರತಿ ಹಿಟ್ಟು ಹೋಗುತ್ತದೆ. ಏನೇ ಹೇಳಿ. ಆಹಾರ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಸಿದ್ಧ ಆಹಾರ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ ಎನ್ನುವುದು ಯುವ ಉದ್ಯಮಿ ಮುಸ್ತಫಾ ಅವರ ಸತ್ಯದ ಮಾತು.
ಒಟ್ಟಾರೆ, ಇಡ್ಲಿ-ದೋಸೆ ಹಿಟ್ಟು ಮಾಡುವ ಸಂಸ್ಥೆಯೊಂದು ಈಗ 100 ಕೋಟಿಗೂ ಅಧಿಕವಾಗಿ ಬೆಳೆದು ನಿಂತಿರುವ ಕಥೆ ನಿಜಕ್ಕೂ ರೋಚಕ. ಬದುಕಿನಲ್ಲಿ ಏನೂ ಆಗಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಯುವಕರಿಗೆ ಮುಸ್ತಾಫ್ ಅವರೇ ಸ್ಫೂರ್ತಿ.

LEAVE A REPLY

Please enter your comment!
Please enter your name here