ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದ ಶತಾಯುಷಿ.. ಮೂರು ತಿಂಗಳ‌‌ ಚಿಕಿತ್ಸೆ ‌ಬಳಿಕ ೧೦೫ ವರ್ಷದ ವೃದ್ಧೆ ಗುಣಮುಖ.

Date:

ಕೋವಿಡ್-19, ಈ ಹೆಸರು ಕೇಳಿದರೆ ಜನ ಬೆಚ್ಚಿಬೀಳುತ್ತಾರೆ.‌ ಕೊರೊನಾ ಎಂಬುವ ಒಂದು‌ ಸಣ್ಣ ವೈರಾಣು, ಇಡೀ ವಿಶ್ವವ್ಯಾಪಿ ಹರಡಿ, ರಣಕೇಕೆ ಹಾಕಿದೆ.‌ 

ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳ ಬಲಿತೆಗೆದುಕೊಳ್ಳುತ್ತಾ, ಜನರಲ್ಲಿ ಭಯವನ್ನು ಹುಟ್ಟಿಸಿದೆ.

ಅದರಲ್ಲೂ ವಯೋವೃದ್ಧರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಇಳಿವಯಸ್ಸಿನವರಿಗೆ ಕೊರೊನಾ ಬಂದರೆ‌ ವಾಸಿಯೇ ಆಗದು ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.‌ ಸರ್ಕಾರ ಕೂಡ ವಯಸ್ಸಾದವರನ್ನು‌ ಆದಷ್ಟೂ ಮನೆಯೊಳಗೆ ಇರುವಂತೆ ಮನವಿ ಮಾಡಿದೆ.
ಆದರೆ ಇದರ ನಡುವೆ 80 ಕ್ಕೂ ಹೆಚ್ಚು ವರ್ಷದ ವೃದ್ಧರು ಸೇರಿದಂತೆ ಹೆಚ್ಚಿನ ವಯಸ್ಸಿನವರು ಸೋಂಕಿನಿಂದ ಗುಣಮುಖರಾಗುತ್ತಿರುವುದು ಕತ್ತಲ ನಡುವೆ ಆಶಾಕಿರಣದಂತಿದೆ.

ಹೌದು, 105‌ ವಯಸ್ಸಿನ ಅಸ್ಮಾ ಬೀವಿ ಎಂಬ ಅಜ್ಜಿಯೊಬ್ಬರು ಕೊರೊನಾ ವಿರುದ್ಧದ ಹೋರಾಟದಲ್ಲಿ ‌ಜಯಗಳಿಸಿದ್ದಾರೆ. ಬರೋಬ್ಬರಿ ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಕೋವಿಡ್‌-19 ನಿಂದ ಗುಣಮುಖರಾಗಿ, ಕೇರಳದ ಸರ್ಕಾರಿ ಆಸ್ಪತ್ರೆಯಿಂದ
ಕಳೆದ ಬುಧವಾರ ಬಿಡುಗಡೆಗೊಂಡಿದ್ದಾರೆ.

ಕೇರಳದಲ್ಲಿ ಕೋವಿಡ್‌ನಿಂದ ಗುಣಮುಖರಾದವರಲ್ಲಿ ಇವರು ಅತ್ಯಂತ ಹಿರಿಯರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೊಲ್ಲಮ ಜಿಲ್ಲೆಯ ಅಂಚಲ್‌ ನಗರದ ನಿವಾಸಿಯಾದ ಅಸ್ಮಾ ಬೀವಿಯವರಿಗೆ ಮಗಳ ಮೂಲಕ ಸೋಂಕು ಹೊಕಗಕಿತ್ತು. ಏ.೨೦ರಂದು ಇವರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಅಂದೇ ಅವರನ್ನು ಕೊಲ್ಲಮ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಸ್ಮಾ ಬೀವಿಯವರು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಯನ್ನು ವೈದ್ಯಕೀಯ ಮಂಡಳಿಯು ಮೇಲ್ವಿಚಾರಣೆ ಮಾಡುತ್ತಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ‌ ಕೊರೊನಾ ಸೋಂಕಿಗೆ ಜಗ್ಗದ ಶತಾಯುಷಿ ಅಜ್ಜಿ ಚಿಕಿತ್ಸೆಯ ವೇಳೆಯಲ್ಲಿ ಅವರು ಅಪಾರ ಶಕ್ತಿಯಿಂದಿದ್ದರಂತೆ. ಈ ಬಗ್ಗೆ ಆರೋಗ್ಯ
ಇಲಾಖೆ ತಿಳಿಸಿದೆ‌.

“ಅಂಚಲ್-ಮೂಲದ 105ರ ಅಸ್ಮಾ ಬೀವಿಯವರನ್ನು ಕೋವಿಡ್‌-19 ನಿಂದ ಗುಣವಾದ ಬಳಿಕ ಬಿಡುಗಡೆ ಮಾಡಲಾಯಿತು. ಕೊರೊನಾ ವೈರಸ್‌ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ರಾಜ್ಯದ ಅತ್ಯಂತ ಹಿರಿಯ ವ್ಯಕ್ತಿ ಇವರು,” ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್‌ನಲ್ಲಿ ಪಥನಮ್‌ಥಿಟ್ಟ ನಗರದ ರಾಣಿ ಹಳ್ಳಿಯ 93 ರ ಥಾಮಸ್‌ ಅಬ್ರಹಾಂ ಕೋವಿಡ್‌-19 ನಿಂದ ಗುಣಮುಖರಾದ ದೇಶದ ಅತೀ ಹಿರಿಯರಾಗಿದ್ದರು. ನಂತರದ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಶತಾಯುಷಿಗಳು ಗುಣಮುಖರಾಗಿದ್ದಾರೆ.
ರೈತ ಅಬ್ರಹಾಂ ಮತ್ತು ಅವರ ಪತ್ನಿ ಮಾರಿಯಮ್ಮ(88) ಅವರನ್ನು ಕೊಟ್ಟಯುಮ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆಗೊಳಿಸಲಾಗಿತ್ತು.

ಬೀವಿಯವರು ತಮ್ಮ ಇಳಿ ವಯಸ್ಸಿನಲ್ಲಿಯೂ ಸಹ ಅಪಾರ ಶಕ್ತಿಯನ್ನು ತೋರಿಸಿದ್ದಾರೆ ಎಂದು ಆರೋಗ್ಯ ಸಚಿವೆ ಕೆ ಕೆ ಶೈಲಾಜಾ ಅವರನ್ನು ಕೊಂಡಾಡಿದ್ದಾರೆ. ಜೊತೆಗೆ ವೃದ್ಧರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರು ಮತ್ತು ಇತರೆ ವೈದ್ಯಕೀಯ ಕಾರ್ಯಕರ್ತರನ್ನು ಶೈಲಜಾ ಅವರು ಹೊಗಳಿದ್ದಾರೆ.

ಆತ್ಮವಿಶ್ವಾಸ.. ಧೈರ್ಯ ಇದ್ದರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಇದಕ್ಕೆ ಸಾಕ್ಷಿ ಶತಾಯುಷಿ ಅಸ್ಮಾ ಬೀವಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...