ರಮೇಶ್ ಅರವಿಂದ್ ಅಭಿನಯಿಸಿರುವ 101ನೇ ಸಿನಿಮಾ ಶಿವಾಜಿ ಸುರತ್ಕಲ್. ಇದೇ ವರ್ಷ ಫೆಬ್ರವರಿ 21 ರಂದು ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಅದ್ಭುತವಾದ ಪ್ರತಿಕ್ರಿಯೆ ಬಂದಿತ್ತು. ರಾಜ್ಯವಿಡೀ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಬಿಡುಗಡೆಯಾಗಿ ಮೂರು ವಾರದವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು. ಇದೀಗ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದೆ ಚಿತ್ರತಂಡ. ಅದು ಕೂಡ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ. ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಚಿತ್ರದ ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಇನ್ನು ಈ ಸಿನಿಮಾ ನೋಡಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು ಮಾಧ್ಯಮಗಳಿಂದ ಒಳ್ಳೆ ವಿಮರ್ಶೆ ಪಡೆದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಂದ ಕೂಡ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಗೂಗಲ್ ನಲ್ಲಿ 96% , ಐ.ಎಂ.ಡಿ.ಬಿ ಯಲ್ಲಿ 8.3 ರೇಟಿಂಗ್ಸ್ ಈ ಚಿತ್ರಕ್ಕೆ ಸಿಕ್ಕಿತ್ತು. ಅಂದಹಾಗೆ ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯಧಿಕ ಗಳಿಕೆ ಕಂಡ ಚಿತ್ರ ಎಂದು ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಘೋಷಣೆಯಾಗಿತ್ತು.
ಈ ಚಿತ್ರ ಲಾಕ್ ಡೌನ್ ಕಳೆದ ನಂತರ ಮತ್ತೆ ಥಿಯೇಟರ್ ನಲ್ಲಿ ಬಿಡುಗಡೆಯಾಗತ್ತೆ ಅನ್ನೋ ಭರವಸೆಯಲ್ಲೂ ಸಿನಿಮಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.ಚಿತ್ರಿತಂಡ ಕೂಡ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆಗೆ ಯೋಚಿಸಿತ್ತು. ಇದೀಗ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಶಿವಾಜಿ ಸುರತ್ಕಲ್ ಸಿನಿಮಾ ರಿಲೀಸ್ ಆಗಲಿದೆ.
ಹೌದು, ಆಗಸ್ಟ್ 7ರಂದು zee5 ಎಂಬ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಹು ನಿರೀಕ್ಷೆಯ ಶಿವಾಜಿ ಸುರತ್ಕಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡಿಗರಲ್ಲದೆ ಕನ್ನಡೇತರರು ಕೂಡ ಈ ಚಿತ್ರವನ್ನು ನೋಡಬಹುದು. ಇದು ಒಂದು ಪತ್ತೆದಾರಿ ಚಿತ್ರವಾಗಿದ್ದು, ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಾಗೂ ಮುಂದಿನ ದಿನಗಳಲ್ಲಿ ಟೆಲಿವಿಷನ್ ಪ್ರಿಮಿಯರ್ ವಿಚಾರವಾದ ಮಾಹಿತಿ ಚಿತ್ರದ ನಿರ್ದೇಶಕರು ತಿಳಿಸುತ್ತಾರೆ.
ಇನ್ನು ಚಿತ್ರದ ಹಿಂದಿ ರಿಮೇಕ್ ರೈಟ್ಸ್
ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು B4U Movies ಅವರು ಪಡೆದುಕೊಂಡಿದ್ದು, ದಕ್ಷಿಣ ಭಾರತದ ಭಾಷೆಗಳಲ್ಲೂ ಕೂಡ ಡಬ್ಬಿಂಗ್ ಆಗುವ ಬಗ್ಗೆ ಇನ್ನು ಮಾತುಕತೆ ನಡೆಯುತ್ತಿದ್ದು, ಇದರ ಬಗ್ಗೆ ಮಾಹಿತಿಯನ್ನು ಚಿತ್ರದ ನಿರ್ದೇಶಕರು ಹಾಗೂ ಚಿತ್ರತಂಡ ಅಧಿಕೃತವಾಗಿ ಮಾಹಿತಿಯನ್ನ ನೀಡಬೇಕಿದೆ. ಶಿವಾಜಿ ಸುರತ್ಕಲ್ ಸಿನಿಮಾವನ್ನ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ರವರು ನಿರ್ಮಾಣ ಮಾಡಿದ್ದಾರೆ. ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ರೆ, ಚಿತ್ರಕಥೆಯನ್ನು ಅಭಿಜಿತ್ ರಮೇಶ್ ಹಾಗೂ ಆಕಾಶ್ ಶ್ರೀವತ್ಸರವರು ಬರೆದಿದ್ದಾರೆ. ಈ ಚಿತ್ರಕ್ಕೆ ಗುರುಪ್ರಸಾದ್ ಎಂ.ಜಿ ಛಾಯಾಗ್ರಹಣವಿದ್ದು, ಜುಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿರಲಿದೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ರವರೆ ಸಂಕಲನಾಕಾರರಾಗಿದ್ದಾರೆ. ಒಟ್ನಲ್ಲಿ ಶಿವಾಜಿ ಸುರತ್ಕಲ್ ಸಿನಿಮಾವನ್ನ ನೋಡ್ಬೇಕು ಅಂತಾ ಕಾತುರದಿಂದ ಕಾಯುತ್ತಿದ್ದ ಸಿನಿ ಪ್ರೇಮಿಗಳಿಗೆ ಸಿನಿಮಾ ತಂಡದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಾಯುತ್ತಿದ್