ಸುಶಾಂತ್ ಸಿಂಗ್ , ದಿಶಾ ಸಾಲಿಯಾನ್ ನಡುವಿದ್ದ ಸಂಬಂಧವೇನು? ಸುಶಾಂತ್ ಪ್ರಕರಣ ಸಿಬಿಐಗೆ ವಹಿಸಿದ ಬೆನ್ನಲ್ಲೇ ದಿಶಾ ಕೇಸ್ ಗೆ ಬಿಗ್ ಟ್ವಿಸ್ಟ್ …!

Date:

ಸುಶಾಂತ್ ಸಿಂಗ್ , ದಿಶಾ ಸಾಲಿಯಾನ್ ನಡುವಿದ್ದ ಸಂಬಂಧವೇನು? ಸುಶಾಂತ್ ಪ್ರಕರಣ ಸಿಬಿಐಗೆ ವಹಿಸಿದ ಬೆನ್ನಲ್ಲೇ ದಿಶಾ ಕೇಸ್ ಗೆ ಬಿಗ್ ಟ್ವಿಸ್ಟ್ …!

ಬಾಲಿವುಡ್ ನಟ ಸುಶಾಂತ್ ಸಾವನ್ನಪ್ಪಿ ಎರಡು ತಿಂಗಳು ಕಳೀತಾ ಬಂದಿದೆ. ಸದ್ಯ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ . ಈಗಾಗಲೇ ಮುಂಬೈ ಪೊಲೀಸರ ಬಳಿ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ ಗಳನ್ನು ವರ್ಗಾವಣೆ ಮಾಡುವಂತೆ ಕೋರ್ಟ್ ಸೂಚಿಸಿದೆ .
ಇನ್ನು ಸುಶಾಂತ್ ಸಾವಿನ ನಂತರ ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಂತಾಗಿದೆ . ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಿಂದಿ ಸಿನಿರಂಗದ ಅನೇಕರ ಮೇಲೆ ಅನುಮಾನದ ದೃಷ್ಟಿಬೀರುವಂತಾಗಿದೆ . ಇದೀಗ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ .

ದಿಶಾ ಸಾಲಿಯಾನ್‌ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್‌ ಆಗಿದ್ದರು. ಅವರು ಸುಶಾಂತ್ ಸಿಂಗ್ ಸಾಯುವ ಒಂದು ವಾರದ ಮೊದಲು ಅಂದ್ರೆ ಜೂನ್ 8 ರಂದು ದಿಶಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು .

ದಿಶಾ ಸಾವಿನ ಒಂದು ವಾರದ ಬಳಿಕ ಸುಶಾಂತ್ ಸಾವನ್ನಪ್ಪಿದ್ದು ಹತ್ತಾರು ಅನುಮಾನಗಳಿಗೆ ಕಾರಣವಾಗಿತ್ತು.

ಪ್ರಕರಣದ ಮೊದಲು ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಸುಶಾಂತ್‌ ಸಾವಿಗೂ ದಿಶಾ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದರು ‌.

ಇದೀಗ ಆ ಬಗ್ಗೆ ಮತ್ತೆ ಹೊಸದಾಗಿ ಕೇಸ್‌ ದಾಖಲಿಸಿ, ತನಿಖೆ ಶುರುಮಾಡಿದ್ದಾರೆ ..!

ದಿಶಾ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಕೆಲವು ದಿನಗಳಲ್ಲಿ ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಈ ಇಬ್ಬರ ಸಾವಿಗೆ ಏನೋ ಕನೆಕ್ಷನ್ ಇರಬೇಕು ಎಂಬ ವಾದ ಕೂಡ ಇದೆ . ಅದು ಸಹಜವಾದ ಯೋಚನೆ ಕೂಡ ಹೌದು.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ನಾರಾಯಣ್‌ ರಾಣೆ ಕೂಡ ಅದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಹೊಸ ಪ್ರಕಟಣೆಯನ್ನು ಹೊರಡಿಸಿದ್ದಾರೆ .

ದಿಶಾ ಅವರ ಸಾವು ಅಸಹಜ . ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೂ ದಿಶಾ ಸಾವಿಗೂ ಸಂಬಂಧ ಇದೆ ಎಂದು ಅನೇಕ ಸುದ್ದಿಗಳು ಹರಿದಾಡುತ್ತಿದ್ದು , ಇದಕ್ಕೆ ಸಂಬಂಧಿಸಿದಂತೆ ಯಾರ ಬಳಿಯಲ್ಲಾದರೂ ಇದಕ್ಕೆ ಸಂಬಂಧಿಸಿದ ಸಾಕ್ಷಿ ಮತ್ತು ಮಾಹಿತಿಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದು, ದಿಶಾ ಸಾವಿನ ಪ್ರಕರಣಕ್ಕೂ ಟ್ವಿಸ್ಟ್ ಸಿಕ್ಕಿದೆ.

ದಿಶಾ ಸುಶಾಂತ್ ಅವರ ಮ್ಯಾನೇಜರ್ ಆಗಿದ್ದರು.  ಅವರಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ಅವರು ಏಕಾಏಕಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು . ಅವರ ಸಾವಿನ‌ ಕೆಲವೇ ದಿನಗಳಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು .

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ ಮತ್ತು ದಿಶಾ ಹಾಗೂ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಮಾತುಗಳು ಚರ್ಚೆಯಾಗಿದ್ದವು . ಈಗ ಮತ್ತೆ ದಿಶಾ ಸಾವಿನ ಪ್ರಕರಣ ಮತ್ತು ಸುಶಾಂತ್ ಸಿಂಗ್ ಸಾವಿನ ಪ್ರಕರಣ ತಳಕು ಹಾಕಿಕೊಂಡಿದೆ .

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...