ಹೈ ಹೀಲ್ಸ್ ನಿಮ್ಮ ಆರೋಗ್ಯದ ಮೇಲೆ‌ ಬೀರುವ ಅಡ್ಡಪರಿಣಾಮಗಳ ಬಗ್ಗೆ ಗೊತ್ತಾ..?

Date:

ಇತ್ತೀಚಿನ ದಿನಗಳಲ್ಲಿ ಪಾದರಕ್ಷೆಗಳಲ್ಲಿ ಹಲವು ಟ್ರೆಂಡಿ ಡಿಸೈನ್ ಗಳು ಬಂದಿವೆ‌. ಅದರಲ್ಲೂ ಹೈ ಹೀಲ್ಸ್ ಗಳಂತೂ ಯುವತಿಯರ ಫೇವರೇಟ್. ಮಾಡರ್ನ್ ಬಟ್ಟೆ, ಅದಕ್ಕೆ ಒಪ್ಪುವ ಸರ.. ಕಿವಿಯೋಲೆ.. ಜೊತೆಗೆ ಟ್ರೆಂಡಿಯಾಗಿರುವ ಹೈ ಹೀಲ್ಸ್ ಧರಿಸಿ ಯಾವುದಾದರೂ ಪಾರ್ಟಿಗೆ ಎಂಟ್ರಿ ಕೊಟ್ಟರೆ ಸಾಕು. ನೀವು ಆ ಪಾರ್ಟಿಗೆ ಬಂದವರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಡುತ್ತೀರಿ.

ಅದರಲ್ಲೂ ಪಾರ್ಟಿ ವೇಳೆ ಸಾಮಾನ್ಯ ಚಪ್ಪಲಿ ಬದಲಿಗೆ ಹೈಹೀಲ್ಸ್ ಹಾಕಿ ಹೋಗುವ ಸಂಪ್ರದಾಯ ಇತ್ತೀಚೆಗೆ ತುಸು ಹೆಚ್ಚುತ್ತಿದೆ. ಅದರಲ್ಲೂ ಮಧ್ಯ ವಯಸ್ಸಿನವರು ಹೈ ಹೀಲ್ಸ್ ಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ, ಹೈ ಹೀಲ್ಸ್ ಧರಿಸೋದು ತುಂಬಾನೇ ರಿಸ್ಕಿ ಎನ್ನುತ್ತಿದೆ ಹೊಸ ಅಧ್ಯಯನ.

ಹೈ ಹೀಲ್ಸ್ ಧರಿಸುವುದು ಎಲ್ಲರಿಗೂ ಇಷ್ಟವೇ. ಅದರೆ ಇದು ನಿಮ್ಮ ಕಾಲುಗಳಿಗೆ ಅದೆಂಥಾ ಸಮಸ್ಯೆ ತಂದದೊಡ್ಡುತ್ತೆ ಗೊತ್ತಾ..? ಅದರಿಂದ ಸಾಕಷ್ಟು ನೋವು ಅನುಭವಿಸಬೇಕಾದೀತು ಎಂಬುದು ನಿಮಗೆ ಗೊತ್ತಾಗಿದ್ಯಾ..? ಇದನ್ನು ಹೊಸ ಅಧ್ಯಾಯವೊಂದು ಹೇಳಿದೆ.

ಹೆಚ್ಚಾಗಿ ಹೈಹೀಲ್ಸ್ ಬಳಸುವುದರಿಂದ ಬೆನ್ನು, ಕಾಲಿನ ಬೆರಳುಗಳು ಮತ್ತು ಕಾಲುಗಂಟುಗಳ ಮೇಲೆ ಭಾರೀ ಒತ್ತಡ ಬಿದ್ದು ನೋವು ಕಾಣಿಸಿಕೊಳ್ಳುತ್ತದೆ.

ನಿರಂತರವಾಗಿ ಹೀಲ್ಸ್ ಬಳಸುವುದರಿಂದ ನಿಮ್ಮ ನಡೆಯುವ ಭಂಗಿಯೇ ಬದಲಾಗಬಹುದು. ಹೈಹೀಲ್ಸ್ ಧರಿಸಿದಾಗ ಕಾಲುಗಳನ್ನು ಬ್ಯಾಲೆನ್ಸ್ ಮಾಡಲು ಒದ್ದಾಡುವಂತಾಗಿದೆ. ಜೊತೆಗೆ ಹೈಹೀಲ್ಸ್ ಬಳಕೆಯಿಂದಾಗಿ ಬೆನ್ನುಹುರಿಯ ಮೇಲೆ ವಿಪರೀತ ಒತ್ತಡ ಬೀಳುವುದು‌.‌ ಇದರಿಂದಾಗಿ ಕ್ರಮೇಣ
ಬೆನ್ನೇ ಬಗ್ಗಿ ಹೋಗಬಹುದು.

ಹೈಹೀಲ್ಸ್ ನ ಪಾದವನ್ನು ಅಂಕು ಡೊಂಕಾಗಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಕಾಲಿನ ಬೆರಳುಗಳಿಗೆ ಸರಿಯಾಗಿ ರಕ್ತ ಪರಿಚಲನೆಯೂ ಆಗದಿರಬಹುದು. ಹಾಗಾಗಿ ನಿತ್ಯ ಎತ್ತರದ ಚಪ್ಪಲಿ ಧರಿಸುವ ಮುನ್ನ ದೇಹದ ಆರೋಗ್ಯದ ಕಡೆಗೂ ಗಮನ ಕೊಡಿ.

ಅಪರೂಪಕ್ಕೊಮ್ಮೆ ಹೀಲ್ಸ್ ಬಳಸುವುದಾದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಆದರೆ ನಿತ್ಯ ಬಳಸುವವರಾದರೆ ಅದಕ್ಕೂ ಮುನ್ನ ಅಲೋಚಿಸಬೇಕಾಗುತ್ತದೆ.

ಹೈ ಹೀಲ್ಸ್ ಹಾಕಿದಾಗ ಕಾಲಿನ ಹಿಮ್ಮಡಿ ಎತ್ತರದಲ್ಲಿದ್ದರೆ, ಪಾದದ ಮುಂದಿನ ಭಾಗ ನೆಲಕ್ಕೆ ಸಮನಾಗಿರುತ್ತದೆ.‌ ಇದರಿಂದ ಕಾಲಿನ ಸಾಕಷ್ಟು ನರಗಳು ತೊಂದರೆಗೆ ಒಳಗಾಗುತ್ತವೆ ಎನ್ನುತ್ತದೆ ಹೊಸ ಅಧ್ಯಯನ.

ಇನ್ನು ಈ ರೀತಿಯ ಚಪ್ಪಲ್ಲಿ ಧರಿಸುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಅಧಿಕವಂತೆ. ಹೈ ಹೀಲ್ಸ್ ತೊಟ್ಟರೆ ದೇಹ ಮುಂದಕ್ಕೆ ಬಾಗುತ್ತದೆ. ಇದರಿಂದ ದೇಹದ ಹಿಂಭಾಗಕ್ಕೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಬೆನ್ನು ನೋವು ಆರಂಭವಾಗುತ್ತದೆ. ಇನ್ನು, ಹೈ ಹೀಲ್ಸ್ ಹಾಕಿದಾಗ ಕಾಲು ಉಳುಕುವ ಸಾಧ್ಯತೆಯೂ ಹೆಚ್ಚಿರುತ್ತದೆ ಎನ್ನುತ್ತದೆ ಅಧ್ಯಯನ.

ಹೈ ಹೀಲ್ಸ್ ಧರಿಸಿದಾಗ ಇಡೀ ದೇಹದ ಭಾರ ಹಿಮ್ಮಡಿ ಮೇಲಷ್ಟೆ ಬೀಳುತ್ತದೆ. ಹೆಚ್ಚು ಕಾಲ ಧರಿಸಿದರೆ ಹಿಮ್ಮಡಿ ನೋವು ಬರುವುದು ಖಚಿತ. ಹೈ ಹೀಲ್ಸ್ ನಮನ್ನು ಹೆಚ್ಚು ಆಕರ್ಷಿತರನ್ನಾಗಿ ಕಾಣುವಂತೆ ಮಾಡುತ್ತದೆ. ಆದರೆ, ಅದರಿಂದ ಆರೋಗ್ಯದ‌ ಮೇಲೆ ಅಡ್ಡಪರಿಣಾಮ ಹೆಚ್ಚಾಗುತ್ತದೆ. ಹೀಗಾಗಿ ಹೀಲ್ಸ್ ಧರಿಸುವ ಮುನ್ನ ಕೊಂಚ ಆಲೋಚಿಸಿ..

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...