ಕೃಷ್ಣನಿಗೆ ಪ್ರಿಯವಾದ ಪಾರಿಜಾತ ಹೂವಿನ ಮಹತ್ವವೇನು ಗೊತ್ತಾ..?

0
466

ಪಾರಿಜಾತ ಶ್ರೀ ಕೃಷ್ಣನಿಗೆ ಪ್ರಿಯವಾದ ಹೂ ಎಂಬುದು ನಂಬಿಕೆ. ಹೀಗಾಗಿ‌ನಮ್ಮ ತತ್ತ್ವ ಶಾಸ್ತ್ರದಲ್ಲಿ‌ ಪಾರಿಜಾತ ಗಿಡಕ್ಕೆ ಎಲ್ಲಿಲ್ಲದ ಮಹತ್ವವಿದೆ. ಸಮುದ್ರ ಮಥನ ಕಾಲದಲ್ಲಿ ಸುರಭಿ, ವಾರಣಿಯ ನಂತರ ಜನಿಸಿದ್ದು ಪಾರಿಜಾತ ಎಂಬ ಕತೆಯಿದೆ. ಕ್ಷೀರ ಸಮುದ್ರದಿಂದ ಹುಟ್ಟಿದ 5 ಕಲ್ಪ ವೃಕ್ಷಗಳಲ್ಲಿ ‌ಪಾರಿಜಾತ ಕೂಡ ಒಂದು. ಕಲ್ಪ ವೃಕ್ಷ ಹಾಗೂ ಕಾಮಧೇನುವನ್ನು ಋಷಿಗಳಿಗೆ ಕೊಟ್ಟ ಇಂದ್ರ, ಇಂದ್ರಾಣಿಗಾಗಿ ಪಾರಿಜಾತ ವೃಕ್ಷವನ್ನು ತನ್ನ ನಂದನವನಕ್ಕೆ ಕೊಂಡೊಯ್ದು. ಆದರೆ ಕೃಷ್ಣ ತನಗೆ ಪ್ರಿಯವಾದ ಈ ಪಾರಿಜಾತ ಗಿಡವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕತೆಯಿದೆ.

ಇನ್ನೂ ಪಾರಿಜಾತ ಹೂವನ್ನು ತಿಳುವಳಿಕೆ ಹಾಗೂ ಜ್ಞಾನದ ಸಂಕೇತ ಎಂದು ಹೇಳಲಾಗುತ್ತದೆ. ಈ ಹೂವಿನ ಕಂಪು ಮೂಗಿಗೆ ತುಂಬಾ ಹಿತವಾಗಿದೆ.‌ ಈ ಹೂ ಸೂರ್ಯ ಮುಳುಗಿದ ನಂತರ ಅರಳುವುದರಿಂದ ಇದನ್ನು ನೈಟ್ ಜಾಸ್ಮಿನ್‌ ಎಂದು ಕೂಡ ಕರೆಯಲಾಗುವುದು. ಭಗವಾನ್ ಶ್ರೀ ಕೃಷ್ಣನಿಗೆ ಪ್ರಿಯವಾದರಿಂದ ದೇವ ಪುಷ್ಪ ಎಂದು ಕರೆಯುವುದು ವಾಡಿಕೆ.

ಅದರಲ್ಲೂ ಪೂಜೆಯಲ್ಲಿ ಪಾರಿಜಾತ ಪಾರಿಜಾತ ಹೂವನ್ನು ಪೂಜೆಗೆ ಬಳಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಇದರ ಸುವಾಸನೆ ಮನಸ್ಸಿಗೆ ತುಂಬಾ ಆಹ್ಲಾದಕರವಾಗಿರುತ್ತದೆ. ಮನೆಯಲ್ಲಿ ಹಿತಕರ ವಾತಾವರಣ ಸೃಷ್ಟಿಸುತ್ತೆ ಈ ಪಾರಿಜಾತ ಪುಷ್ಪ.

ಈ ಹೂವನ್ನು ಪೂಜೆಗೆ ಮಾತ್ರವಲ್ಲ, ಆಯುರ್ವೇದಲ್ಲಿ ಔಷಧಿಯಾಗಿಯೂ ಸಹ ಬಳಸಲಾಗುವುದು. ವಿಪರೀತ ಕಾಡುವ ಕೀಲುನೋವು ಶಮನ ಮಾಡುವ ಗುಣ ಪಾರಿಜಾತ ಗಿಡಕ್ಕಿದೆ.

ಇದರ ಎಲೆಗಳಿಂದ ಮಾಡುವ ಕಷಾಯ ಸೇವಿಸಿದರೆ ಸಂಧಿವಾತ ನೋವು ಕಡಿಮೆಯಾಗುವುದು. ಪ್ರತಿದಿನ ಮುಂಜಾನೆ ಪಾರಿಜಾತದ ಎಲೆಗಳ ಕಷಾಯ ಮಾಡಿ ಕುಡಿಯುತ್ತಿದ್ದರೆ ಕ್ರಮೇಣ ಸಂಧಿವಾತ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ಪಾರಿಜಾತ ಎಲೆಯನ್ನು ಜಜ್ಜಿ ತೆಂಗಿನೆಣ್ಣೆಯಲ್ಲಿ ಕುದಿಸಿ ಅದನ್ನು ಹಚ್ಚುವುದರಿಂದಲೂ ನೋವು ಕಡಿಮೆಯಾಗುವುದು.

ಕೆಮ್ಮು, ಜಂತು ಹುಳ ನಿವಾರಣೆ ಪಾರಿಜಾತ ಗಿಡದ ಎಲೆಯಿಂದ ಮಾಡಿದ ಕಷಾಯ ಕೆಮ್ಮು ಹಾಗೂ ಜಂತುಹುಳ ನಿವಾರಣೆಗೆ ಬಳಸುತ್ತಾರೆ. ಮಕ್ಕಳಿಗೆ ಇದರ ಎಲೆಯ ಔಷಧ ಮಾಡಿ ನೀಡಲಾಗುವುದು. ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುವಲ್ಲಿಯೂ ಪಾರಿಜಾತ ಎಲೆಯ ಕಷಾಯ ಪರಿಣಾಮಕಾರಿಯಾಗಿದೆ.

ಹತ್ತು ಪಾರಿಜಾತ ಎಲೆಯನ್ನು ಒಂದು ಕಪ್ ನೀರಿಗೆ ಹಾಕಿ ಅದು ಅರ್ಧ ಕಪ್ ಆಗುವಷ್ಟು ಹೊತ್ತು ಕುದಿಸಿ, ಅದಕ್ಕೆ ಶುಂಠಿ ರಸ ಹಾಗೂ ಜೇನು ಸೇರಿಸಿ ಕುಡಿಯಿರಿ. ಇದನ್ನು ಮೂರು ಹೊತ್ತು ಕುಡಿಯುತ್ತಿದ್ದರೆ ಬೇಗನೆ ಕೆಮ್ಮು ಕಡಿಮೆಯಾಗುವುದು. ಅಲ್ಲದೆ ಇದರ ಎಲೆಗಳನ್ನು ಕುದಿಸಿ ಕುಡಿಯುವುದರಿಮದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.‌

ಪಾರಿಜಾತ ಬೀಜವನನ್ನು ಸಂಗ್ರಹಿಸಿ ಪುಡಿ ಮಾಡಿ ಇದನ್ನು ಕಾಮಲೆ ರೋಗ ನಿವಾರಣೆಗೆ ಕೂಡ ಬಳಸಲಾಗುವುದು.

ಪಾರಿಜಾತ ಬೀಜದ ಪುಡಿಯನ್ನು ಪೌಡರ್ ಮಾಡಿ ಇದನ್ನು ಮುಖದ ಸೌಂದರ್ಯ ವೃದ್ದಿಸಲು ಬಳಸಬಹುದು. ಅಲ್ಲದೆ ಇದನ್ನು ಸುಗಂಧ ದ್ರವ್ಯಗಳ ಔಷಧ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ.

ಪಾರಿಜಾತ ಬೀಜದ ಪುಡಿಯನ್ನು ಪೌಡರ್ ಮಾಡಿ ಮುಖದ ಸೌಂದರ್ಯ ವೃದ್ದಿಸಲು ಬಳಸಬಹುದು. ಅಲ್ಲದೆ ಇದನ್ನು ಸುಗಂಧ ದ್ರವ್ಯಗಳ ಔಷಧ ತಯಾರಿಕೆಯಲ್ಲಿ ಕೂಡ ಬಳಸುತ್ತಾರೆ.

ಪಾರಿಜಾತ ಗಿಡಕ್ಕೆ ಪ್ರತಿದಿನ ನೀರು ಹಾಕಬೇಕು.‌ ಗಿಡ ನೆಟ್ಟು ಒಂದು ತಿಂಗಳಾಗುವಷ್ಟರಲ್ಲಿ ಗಿಡದಲ್ಲಿ ಹೂ ಬಿಡಲಾರಂಭಿಸುತ್ತದೆ. ಹೂ ಅರಳಿದರೆ ಒಂದು ವಾರಗಳ ಕಾಲ ಇರುತ್ತದೆ. ಹೂ ಅರಳಿ ಉದುರಿದ ತುದಿಯನ್ನು ಕತ್ತರಿಸಬೇಕು, ಈ ಕೊಂಬೆ ನೆಟ್ಟರೆ ಹೊಸ ಗಿಡ ಬೆಳೆಯುತ್ತದೆ. ಎಲ್ಲಾ ಕಾಲದಲ್ಲಿ ಪುಷ್ಪ ಬಿಡುವ ಈ ಗಿಡವನ್ನು ಮಳೆಗಾಲದಲ್ಲಿ ಕತ್ತರಿಸಬಾರದು.

LEAVE A REPLY

Please enter your comment!
Please enter your name here