ಹಂಪಿಯಲ್ಲಿ ಬೃಹತ್ ಹನುಮನ ವಿಗ್ರಹ ನಿರ್ಮಾಣಕ್ಕೆ ಯೋಜನೆ..

Date:

ದುಷ್ಟ ಶಕ್ತಿ ನಿವಾರಕ.. ಮನಸ್ಸಿನಲ್ಲಿರುವ ಭಯ ನಿವಾರಿಸಿ ಧೈರ್ಯ ನೀಡುವ ಆಂಜನೇಯ ಎಲ್ಲರ ಪ್ರಿಯ ದೇವರು. ರಾಮನ ಪರಮ ಭಕ್ತ ಹನುಂತ..

ಸಾಹಸ, ಭಕ್ತಿ, ಸ್ವಾಮಿ ನಿಷ್ಠೆ, ಹೀಗೆ ಯಾವುದಕ್ಕೆ ಉದಾಹರಣೆ ನೀಡಿದರೂ ಮೊದಲು ಸೊಗುವ ಹೆಸರೇ ಅಂಜನಾಸುತನದು. ಹನುಮನು ತೋರಿದ ಭಕ್ತಿ ಹಾಗೂ ಸಾಹಸಗಳ ಕಥೆ ನಮ್ಮನ್ನು ರೋಮಾಂಚಿತಗೊಳಿಸುತ್ತದೆ.

ಕೇಸರಿ ಹಾಗೂ ಅಂಜನಾ ದಂಪತಿಗಳಿಗೆ ಜನಿಸಿದ ಹನುಮನು ಶಿವನ ಪ್ರತಿರೂಪವೆ ಎಂದು ನಂಬಲಾಗಿದೆ. ಹನುಮನು ಜನಿಸಿದ್ದು ಕಿಷ್ಕಿಂಧೆ ಎಂಬ ಪ್ರದೇಶದಲ್ಲಿ.

ಹನುಮ ಕಾಲಿಟ್ಟ, ಸಾಹಸ ತೋರಿದ ಕಿಷ್ಕಿಂದೆಯೇ ನಮ್ಮ ಈಗಿನ ಹಂಪಿ. ಹೌದು, ವಿಜಯನಗರ ಸಾಮ್ರಾಜ್ಯದ ವೈಭವಯುತ ರಾಜಧಾನಿಯಾಗಿ ಮೆರೆದಿದ್ದ ಇಂದಿನ ಹಂಪಿಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಸುತ್ತಮುತ್ತಲಿನ ಪ್ರದೇಶಗಳೆ, ಹಿಂದೆ ಕಿಷ್ಕಿಂಧೆಯಾಗಿತ್ತು. ತುಂಗ ಭದ್ರ ನದಿಯನ್ನೆ ಹಿಂದೆ ಪಂಪ ಸರೋವರ ಎನ್ನಲಾಗಿತ್ತು.

ರಾಮಾಯಣದ ಸಂದರ್ಭದಲ್ಲಿ ಅಂದರೆ ತ್ರೇತಾ ಯುಗದಲ್ಲಿ ಈ ಒಟ್ಟಾರೆ ಪ್ರದೇಶವೇ
ದಂಡಕಾರಣ್ಯದಲ್ಲಿತ್ತು ಎನ್ನಲಾಗಿದೆ. ಆದ್ದರಿಂದ ಈ ಒಂದು ಅರಣ್ಯ ಪ್ರದೇಶವು ವಾನರ ಸಾಮ್ರಾಜ್ಯವಾಗಿ ಬಿಂಬಿತವಾಗಿತ್ತು. ಮುಂದೆ ದ್ವಾಪರ ಯುಗದಲ್ಲಿ ಪಾಂಡವರೂ ಕೂಡ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗುತ್ತದೆ.

ಇಂಥ ಪೌರಾಣಿಕ ಹಿನ್ನೆಲೆ ಹೊಂದಿರುವ ಹಂಪಿಯಲ್ಲಿ ಇದೀಗ ಬೃಹತ್ ಆಂಜನೇಯನ ವಿಗ್ರಹ ನಿರ್ಮಿಸಲು ಯೋಜನೆ ನಡೆಸಿದ್ದಾರೆ. ಹಂಪಿ ಮೂಲದ ಹನಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹನುಮನ ಜನ್ಮ ಸ್ಥಳವಾದ ಕಿಷ್ಕಿಂಧ (ಹಂಪಿ)ದಲ್ಲಿ ಅಂದಾಜು 1,200 ಕೋಟಿ ರೂಪಾಯಿ ವೆಚ್ಚದಲ್ಲಿ 215 ಮೀಟರ್ ಎತ್ತರದ ಬೃಹತ್ ಹನುಮನ ವಿಗ್ರಹವನ್ನು ಮುಂದಿನ 6 ವರ್ಷಗಳಲ್ಲಿ ನಿರ್ಮಿಸಲು ಯೋಜನೆ ರೂಪಿಸುತ್ತಿದೆ.

ಇದುವರೆಗೆ, ಅಂಜನಾದ್ರಿ ಬೆಟ್ಟದ ತುದಿಯಲ್ಲಿ ಇರುವ ಏಕೈಕ ದೇವರು ಹನುಮಾನ್. ಈ ಹನುಮಾನ್ ದೇವಾಲಯವನ್ನು ತಲುಪಲು ಭಕ್ತರು 550 ಮೆಟ್ಟಲುಗಳನ್ನು ಏರಬೇಕಾದ ಅಗತ್ಯ ಇದೆ ಈ ಸ್ಥಳ ಎಲ್ಲರಿಗೂ ಸುಲಭ ಸಾಧ್ಯವಾಗಂತೆ ಹಾಗೂ ಭವ್ಯವಾಗಿರುವಂತೆ ಮಾಡಲು ನಾವು ಬಯಸುತ್ತಿದ್ದೇವೆ ಮುಂದಾಗಿದ್ದೇವೆ ಎಂದು ಟ್ರಸ್ಟ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಯೋಜನೆಗೆ ಕರ್ನಾಟಕ ಸರಕಾರ ಒಂದು ಪಾಲು ನಿಧಿ ನೀಡಲಿದ್ದು, ಉಳಿದ ನಿಧಿಯನ್ನು ಟ್ರಸ್ಟ್ ದೇಣಿಗೆಯ ಮೂಲಕ ಸಂಗ್ರಹಿಸಲಿದೆ. ನಿಧಿ ಸಂಗ್ರಹಿಸಲು ದೇಶಾದ್ಯಂತ ಹನುಮಾನ್ ರಥಯಾತ್ರೆ ನಡೆಸಲು ಟ್ರಸ್ಟ್ ಚಿಂತಿಸುತ್ತಿದ್ದೆ ಎನ್ನಲಾಗುತ್ತಿದೆ.

ಸರಕಾರ ಕೂಡ ಈ ಪ್ರಸ್ತಾವ ಪರಿಗಣಿಸಿದೆ ಹಾಗೂ ಸಮಗ್ರ ವರದಿ ಕೋರಿದೆ ಎಂದು ಕರ್ನಾಟಕದ ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಸಹ‌ ಮಾಹಿತಿ ನೀಡಿದ್ದಾರೆ.

ಕಿಷ್ಕಿಂಧಾ ಸೇರಿದಂತೆ ಕರ್ನಾಟಕದಲ್ಲಿರುವ ಮೂರು ಸ್ಥಳಗಳು ರಾಮಾಯಣದೊಂದಿಗೆ ನೇರ ಸಂಬಂಧ ಇದೆ ಎಂದು ನಂಬಲಾಗಿದೆ. ಇನ್ನೆರೆಡು ಸ್ಥಳಗಳೆಂದರೆ‌ ಗೋಕರ್ಣದ ಮಹಾಬಲೇಶ್ವರ ದೇವಾಲಯ ಹಾಗೂ ಚಿಕ್ಕಮಂಗಳೂರಿನ ಚಂದ್ರ ದ್ರೋಣ ಪರ್ವತ ಶ್ರೇಣಿ‌.ಇಂದಿಗೂ ಈ ಸ್ಥಳಗಳು ನಮ್ಮ ಶ್ರೀಮಂತ ಪರಂಪರೆಯನ್ನು ಇಂದಿಗ ಪ್ರತಿಬಿಂಬಿಸುತ್ತಲಿವೆ. 

Share post:

Subscribe

spot_imgspot_img

Popular

More like this
Related

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ ಬೆಳಗಾವಿ: ಉತ್ತರಕನ್ನಡ...

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ...

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ....

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..?

ಮಹಿಳೆಯರಲ್ಲಿ ನಿದ್ರೆಯ ಕೊರತೆಗೆ ಕಾರಣಗಳೇನು? ಇದಕ್ಕೆ ಪರಿಹಾರವೇನು..? ಮನೆಯ ದೈನಂದಿನ ಕೆಲಸಭಾರವನ್ನು ನಿರ್ವಹಿಸುವ...