ಕೇರಳ ರಾಜ್ಯದಂತೆ ಕರ್ನಾಟಕದಲ್ಲೂ ಪ್ಲಾಸ್ಟಿಕ್ ನಿಷೇಧವಾಗಿ ತಿಂಗಳು ಕಳೆದಿದೆ. ಆದರೂ ಪ್ಲಾಸ್ಟಿಕ್ ಚೀಲಗಳು ಅಲ್ಲಲ್ಲಿ ಇಟ್ಟಾಡುತ್ತಿವೆ. ಇವತ್ತಿಗೂ ಹಲವಾರು ಷಾಪ್ಗಳು, ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಇದರಿಂದ ಯರ್ರಾಬಿರ್ರಿ ಸಿಟ್ಟಾಗಿರುವ ಬಿಬಿಎಂಪಿ ನೇರವಾಗಿ ಗ್ರಾಹಕರಿಗೆ ಬರೆಹಾಕಲು ನಿರ್ಧರಿಸಿದೆ. ಇನ್ನುಮುಂದೆ ಗ್ರಾಹಕರೇನಾದರೂ ಪ್ಲಾಸ್ಟಿಕ್ ಚೀಲಗಳಲ್ಲಿ ಸಾಮಾನು ತುಂಬಿಕೊಂಡರೇ ಅವರನ್ನು ಹಿಡಿದು ಫೈನ್ ಹಾಕಲು ನಿರ್ಧರಿಸಿದೆ. ಸಧ್ಯಕ್ಕೆ ಬಿಬಿಎಂಪಿ ಐನೂರು ರೂಪಾಯಿ ದಂಡ ಹಾಕುವ ನಿರ್ಧಾರ ಮಾಡಿದೆ. ಅದೇ ವ್ಯಕ್ತಿ ಪದೇಪದೇ ಸಿಕ್ಕಿಬಿದ್ದರೇ ದಂಡದ ಮೊತ್ತು ಒಂದು ಸಾವಿರ ಕಟ್ಟಬೇಕಾಗುತ್ತದೆಯಂತೆ. ಜೊತೆಗೆ ಕಳ್ಳದಾರಿಯಿಂದ ಪ್ಲಾಸ್ಟಿಕ್ ಉತ್ಪಾಧಿಸುವವರನ್ನು ಪತ್ತೆಮಾಡಿ ಐದು ಲಕ್ಷದವರೆಗೆ ದಂಡ ಹಾಕುವುದಾಗಿ ಬಿಬಿಎಂಪಿಯ ಅಧಿಕೃತ ಮೂಲಗಳು ತಿಳಿಸಿವೆ. ಕೇರಳದಲ್ಲೂ ಪ್ಲಾಸ್ಟಿಕ್ ನಿಷೇಧವಾದಾಗ ಅಲ್ಲಿನ ಜನರು ನೀರಸವಾಗಿ ಸ್ಪಂಧಿಸಿದ್ದರು. ಹಾಗಾಗಿ ಅಲ್ಲಿನ ಸರ್ಕಾರ ಗ್ರಾಹಕರಿಗೆ ಬರೆ ಎಳೆಯಲು ನಿರ್ಧರಿಸಿತ್ತು. ಅದರ ಪರಿಣಾಮ ಕೇರಳದಲ್ಲಿ ಪ್ಲಾಸ್ಟಿಕ್ ಲವಲೇಶವೂ ಕಾಣಿಸುತ್ತಿಲ್ಲ. ಅದೇ ಉಪಾಯದಲ್ಲಿರುವ ಬಿಬಿಎಂಪಿ ತನ್ನ ಉದ್ದೇಶದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾದುನೋಡಬೇಕು.
POPULAR STORIES :
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie