ಛಾಯಾಗ್ರಹಣಕ್ಕೆ ಜಗತ್ತಿನಲ್ಲಿ ವಿಶೇಷ ಮಹತ್ವವಿದೆ. ಫೋಟೋಗ್ರಫಿ ಹವ್ಯಾಸ ಹೆಚ್ಚಿನ ಮಂದಿಗೆ ಅಚ್ಚುಮೆಚ್ಚಿ. ಮೊದಲಿಗೆ ಪ್ರವೃತ್ತಿಯಾಗೋ ಫೋಟೋಗ್ರಫಿ ತದನಂತರದಲ್ಲಿ ಅವರ ಜೀವನದ ಭಾಗವಾಗಿ ಬಿಡುತ್ತೆ.
ಹೀಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ಯಾಮೆರಾಗಳ ರಿಪೇರಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ ಈ ದಂಪತಿ. ಪತಿ ಮತ್ತು ಪತ್ನಿ ಇಬ್ಬರೂ ಸಹ ಕ್ಯಾಮೆರಾ ರಿಪೇರಿ ಮಾಡುತ್ತಿದ್ದು, ಇದೇ ಅವರ ಜೀವನೋಪಾಯವೂ ಆಗಿದೆ. ತಮಗೆ ಬದುಕು ಕೊಟ್ಟ ಕ್ಯಾಮೆರಾ ಮೇಲೆ ಅಪಾರ ಗೌರವದಿಂದ ಈ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ಕ್ಯಾಮೆರಾ ಕಂಪನಿಗಳ ಹೆಸರಿನ್ನೇ ಇಡುವ ಮೂಲಕ ಛಾಯಾಗ್ರಹಣ ಲೋಕಕ್ಕೆ ಮಾದರಿಯಾಗಿದ್ದಾರೆ.
ಇವರ ಹೆಸರು ವರ್ಗೀಸ್ ಮತ್ತು ಬೀನಾ. ಮೈಸೂರಿನಲ್ಲಿ ಕಳೆದ 25 ವರ್ಷಗಳಿಂದ ಕ್ಯಾಮೆರಾ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಡಿಜಿಟಲ್ ಕ್ಯಾಮೆರಾ ಬಂದಿರೋ ಈ ಕಾಲದಲ್ಲೂ ಸಹ ವರ್ಗೀಸ್ ಕುಟುಂಬ ಕ್ಯಾಮೆರಾ ರಿಪೇರಿಯನ್ನೇ ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿದೆ.
ಕ್ಯಾಮೆರಾಗಳ ರಿಪೇರಿ ಕೆಲಸದಲ್ಲೇ
ತೊಡಗಿಸಿಕೊಂಡಿರುವ ವರ್ಗೀಸ್ ಹಾಗೂ ಬೀನಾ ಸಾಕಷ್ಟು ಹೆಸರು ಕೂಡ ಮಾಡಿದ್ದರೆ ಕೂಡ. ಕ್ಯಾಮೆರಾ ರಿಪೇರಿಯಲ್ಲಿ ಬೀನಾ ಕೂಡ ಪರಿಣಿತ ಹೊಂದುವ ಮೂಲಕ ಕ್ಯಾಮೆರಾ ರಿಪೇರಿ ಮಾಡುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ತಮ್ಮ ಬದುಕಿಗೆ ಅರ್ಥಕೊಟ್ಟ ಕ್ಯಾಮೆರಾಗಳ ಹೆಸರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದೆ ತಮ್ಮ ಮಕ್ಕಳಿಗೆ ಕ್ಯಾಮೆರಾ ಕಂಪೆನಿ ಹೆಸರಿಟ್ಟಿದ್ದಾರೆ. ಒಬ್ಬ ಪುತ್ರನಿಗೆ ಐಸೆಟ್ ನಿಕಾನ್ ಎಂದು ಮತ್ತೊಬ್ಬ ಪುತ್ರನಿಗೆ ಪಾಲ್ ಕೆನಾನ್ ಎಂದು ಹೆಸರಿಡುವ ಮೂಲಕ ಇವರು ವಿಶಿಷ್ಟತೆಯನ್ನು ಮೆರೆದಿದ್ದಾರೆ.
ಅಂದು ಏಳೆಂಟು ಮಂದಿ ಕ್ಯಾಮೆರಾ ರಿಪೇರಿ ಮಾಡುತ್ತಿದ್ದೆವು. ಈಗ ಸದ್ಯ, ಮೈಸೂರು ನಗರದಲ್ಲಿ ಮೂವರಷ್ಟೇ ಇದ್ದೇವೆ. ಅದರಲ್ಲಿ ಒಬ್ಬರು ನನ್ನ ಪತ್ನಿ. ಇದುವರೆಗೂ ನಾನು 24 ಸಾವಿರ ಕ್ಯಾಮೆರಾಗಳನ್ನು ರಿಪೇರಿ ಮಾಡಿರುವೆ’ ಎಂದು ವರ್ಗೀಸ್ ಹೇಳುತ್ತಾರೆ.
ಹಿಂದೆ ಫಿಲ್ಮ್ ಕ್ಯಾಮೆರಾಗಳ ಕಾಲದಿಂದ ಇದೇ ವೃತ್ತಿ ಮಾಡುತ್ತಿದ್ದೇವೆ. ಇಡೀ ಮೈಸೂರಿಗೆ ಮೂವರು ಮಾತ್ರ ಈ ವೃತ್ತಿ ಮಾಡ್ತಿದ್ದಾರೆ. ಇದುವರೆಗೆ 24 ಸಾವಿರ ಕ್ಯಾಮೆರಾಗಳನ್ನು ನಾವು ದುರಸ್ತಿ ಮಾಡಿದ್ದೇವೆ. ಚಿಪ್ ಹಾಗೂ ಎಸ್.ಡಿ. ಕಾರ್ಡ್ ಕ್ಯಾಮೆರಾ ಬಂದ ಬಳಿಕ ಸದ್ಯ ಫಿಲ್ಮ್ ರೋಲ್ ಕ್ಯಾಮೆರಾ ರಿಪೇರಿಗೆ ಬರೋದೆ ಕಡಿಮೆಯಾಗಿದೆ ಅಂತಾರೆ ವರ್ಗೀಸ್ ಪತ್ನಿ ಬೀನಾ.
ಕೊಡಗಿನ ಪಾಲಿಬೆಟ್ಟದ ನಿವಾಸಿಯಾದ ವರ್ಗೀಸ್ ಕೇರಳದ ತ್ರಿಶೂರ್ ಜಿಲ್ಲೆಯ ಕುಂನ್ನಂಕುಳಂ ಗ್ರಾಮದ ಬೀನಾ ಎಂಬುವರನ್ನು ವಿವಾಹವಾದ ಬಳಿಕ ಮೈಸೂರಿನಲ್ಲಿ ನೆಲೆನಿಂತರು. ಆರಂಭದಲ್ಲಿ
ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಛಾಯಾ ಚಿತ್ರಗಾರರಾಗಿ ವೃತ್ತಿ ಆರಂಭಿಸಿದರು. ನಂತರ, ಕ್ಯಾಮೆರಾದಲ್ಲಿ ಪರಿಣಿತಿ ಹೊಂದಿ
ಕ್ಯಾಮೆರಾ ರಿಪೇರಿ ಮಾಡಲು ಆರಂಭಿಸಿದರು. ಜೊತೆಗೆ ಪತ್ನಿ ಕೂಡ ಇದೇ ವೃತ್ತಿ ಆರಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಈ ದಂಪತಿಗೆ ಕ್ಯಾಮೆರಾ ರಿಪೇರಿ ಅಚ್ಚುಮೆಚ್ಚಿನ ಕೆಲಸ.
ವರಾಜ ಅರಸು ರಸ್ತೆಯಲ್ಲಿ 25 ವರ್ಷದ ಹಿಂದೆ ಇವರು ಅಂಗಡಿ ತೆರೆದರು. ಲಾಕ್‌ಡೌನ್ ನಂತರ ಶಾಂತಲಾ ಚಿತ್ರಮಂದಿರದ ಹಿಂಭಾಗದ ವೀಣೆ ಶೇಷಣ್ಣ ರಸ್ತೆಯ 7ನೇ ಕ್ರಾಸ್‌ನಲ್ಲಿ ಮನೆಯಲ್ಲೇ ರಿಪೇರಿ ಮಾಡುತ್ತಿದ್ದಾರೆ.