“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

Date:

ಚಾಂದಿನಿಯ ದುರಂತ ಪ್ರೀತಿಚಾಂದಿನಿ ಅನ್ನೋ ಹುಡುಗಿ, ತಮಿಳು ನಾಡಿನ ಹಳ್ಳಿಯೊಂದರಿಂದ ಓಡಿ ಬಂದು ಬೆಂಗಳೂರಿನ ಕಾಲೇಜಿನಲ್ಲಿ ಓದು ಶುರು ಮಾಡಿದಳು. ಅಪ್ಪ ಅಮ್ಮನನ್ನು ಬಿಟ್ಟು ಓಡಿ ಬಂದಿದ್ದು ಯಾಕೆ ಅನ್ನೋ ವಿಷ್ಯ ಅವಳು ಯಾರಿಗೂ ಹೇಳ್ತಾ ಇರಲಿಲ್ಲ. ಅಷ್ಟೇ ಅಲ್ಲ, ಯಾವ ಹುಡುಗ, ಹುಡುಗಿಯರೊಂದಿಗೂ ಬೆರೆಯದ ಗೊಂದಲಮಯ ಹುಡುಗಿ ಅವಳು. ಒಂಟಿತನವೇ ಜೀವನಕ್ಕೆ ಆಧಾರ ಎಂದು ಬದುಕುತಿದ್ಡಳು ಇವಳು ಸದಾ ಒಂಟಿಯಾಗಿರೋದನ್ನು ನೋಡ್ತಾ ಇದ್ದ ಜೋಸೆಫ್ ಎಂಬ ಹುಡುಗ ಅವಳನ್ನು ಮಾತಾಡಿಸೋಕೆ ಪ್ರಯತ್ನ ಪಟ್ಟ.. ಆರಂಭದಲ್ಲಿ ಅವನೊಂದಿಗೂ ಮಾತನಾಡದ ಆಕೆ ದಿನ ಕಳೆದಂತೆ ತನ್ನ ನೋವನ್ನು ಮರೆಯೋದಕ್ಕೆ ಅವನೊಂದಿಗೆ ಮಾತನಾಡ್ತಾ ಇದ್ಳು. ಆದ್ರೆ ತನ್ನ ಮನದ ದುಃಖವನ್ನು ಯಾವತ್ತೂ ಹೇಳಿಕೊಂಡಿರಲಿಲ್ಲ. ಅದು ಅವಳಿಗೆ ಇಷ್ಟವೂ ಇರಲಿಲ್ಲ.. ಆದ್ರೆ ಅವಳು ಸದಾ ಒಂದು ಮಾತು ಹೇಳ್ತಾ ಇದ್ಳು.“ನಿನ್ನಿಂದ ನನ್ನ ದುಃಖ ಮರೆತಿದ್ದೀನಿ.. ಖುಷಿ ಕೊಟ್ಟಿದ್ದೀಯ. ಕೊನೆವರೆಗೂ ನೀನು ಒಳ್ಳೆಯವನಾಗೇ ಇರ್ತೀಯ..??”ಅಂತ ಹೇಳ್ತಾ ಇದ್ಳು..ಅವಳ ಮಾತನ್ನು ಕೇಳಿ ನಿನ್ನ ದುಃಖಕ್ಕೆ ನಾನು ಇರ್ತೀನಿ ಅಂತ ಸಮಾಧಾನ ಮಾಡ್ತಿದ್ದ..  ಅವಳ ಮುಖದಲ್ಲಿ ನಗು ಮೂಡಿಸಿ ಮನಸಿನ ಭಾರ ಕಡಿಮೆ ಮಾಡ್ತಿದ್ದ. ಆದ್ರೆ ಅವಳ ತಂದೆ ತಾಯಿಗಳ ವಿಷಯವಾಗಲೀ ಅಥವ ಅವಳು ಬೆಂಗಳೂರಿಗೆ ಬಂದ ಉದ್ದೇಶವಾಗಲೀ ಯಾವುದನ್ನೂ ಹೇಳಿರಲಿಲ್ಲ. ಪರಸ್ಪರಸ್ನೇಹ-ಸಲಿಗೆ  ಜೋಸೆಫ್ ಮನದಲ್ಲಿ ಪ್ರೀತಿಯ ಭಾವನೆಯನ್ನು ಮೂಡಿಸಿತ್ತು. ಅದೊಂದು ದಿನ ಅವನು ತನ್ನ ಪ್ರೀತಿಯ ವಿಷಯವನ್ನು ಅವಳಿಗೆ ಹೇಳಿಬಿಟ್ಟ.ಚಾಂದಿನಿ ಕಕ್ಕಾಬಿಕ್ಕಿಯಾಗಿ ಹೋದಳು. ಏನು ಹೇಳಬೇಕು, ಏನು ಹೇಳಬಾರದು ಎಂದು ತಿಳಿಯದೇ ಕಣ್ಣೀರು ಹಾಕಿದಳು. “ನನಗೆ ಆ ಅರ್ಹತೆ ಇಲ್ಲ.. ನನ್ನಿಂದ ನೀನು ಏನೂ ನಿರೀಕ್ಷೆ ಮಾಡಬೇಡ” ಎಂದು ಹೇಳಿ ಓಡಿ ಹೋದಳು. ಅವನು ಅವಳನ್ನು ಸಮಾಧಾನ ಮಾಡಿದ..“ ಚಾಂದಿನಿ, ನಾನು ನಿನ್ನ ರೂಪಕ್ಕೆ ಮಾರು ಹೋದವನಲ್ಲ. ನಿನ್ನ ಮನಸು, ಮುಗ್ಧತೆಗೆ ಮಾರು ಹೋದವನು, ಕೊನೆವರೆಗೂ ನಿನ್ನ ಖುಷಿಯಾಗಿ ನೋಡ್ಕೋತೀನಿ” ಅಂತ ಹೇಳಿದ. ಆದರೆ ಚಾಂದಿನಿಯ ಮನಸಿನ ನೋವು ಇನ್ನಷ್ಟು ಹೆಚ್ಚಾಗಿತ್ತು.“ಅಯ್ಯೋ ಜೋಸೆಫ್.. ನನ್ನ ಜೀವನದ ಕೆಲವು ಸತ್ಯಾಂಶಗಳನ್ನು ಹೇಳಿಕೊಳ್ಳೋ ಪರಿಸ್ಥಿತಿಯಲ್ಲಿ ಇಲ್ಲ.. ದಯವಿಟ್ಟು ಕೆದಕಬೇಡ.. ನನ್ನ ಪಾಡಿಗೆ ನನ್ನ ಬಿಟ್ಟುಬಿಡು. ನಾವಿಬ್ರೂ ಒಂದಾಗೋಕೆ ಅಗೋದಿಲ್ಲ ಅಂತ ಗೋಗರೀತಾಳೆ.. ಆದ್ರೆ ಅಪಾರವಾಗಿ ಪ್ರೀತಿಸ್ತಾಇದ್ದ ಜೋಸೆಫ್ ಕಾರಣವಿಲ್ಲದೇ ಹೇಗೆ ನನ್ನನ್ನು ರಿಜೆಕ್ಟ್ ಮಾಡ್ತೀಯ..?? ಕಾರಣ ಹೇಳು.. ನಾನು ನನ್ನ ಪ್ರೀತೀನ ಬಿಡ್ತೀನಿ.. ನಾನು ಚೆನ್ನಾಗಿಲ್ವಾ.,.?? ಒಳ್ಳೆಯವನಲ್ವಾ..?? ಹೇಳು ಚಾಂದಿನಿ ಹೇಳು” ಅಂತ ಕೇಳ್ತಾನೆ..“ಯಾವ ವಿಷಯಗಳು ಕೆದಕಬಾರದು ಅಂತ ನಾನು ಬೆಂಗಳೂರಿಗೆ ಬಂದೆನೋ ಅದೇ ವಿಷಯಗಳು ನನ್ನನ್ನು ಕುಕ್ಕಿ ತಿನ್ನುತ್ತಿವೆ ಎಂದು ಕುಸಿದು ಬೀಳ್ತಾಳೆ.. ಆಗ ಜೋಸೆಫ್ ಅವಳ ಕಣ್ಣೀರನ್ನು ಒರೆಸಿ ಕೇಳಿದ “ಏನಾಗಿದೆ ನಿನಗೆ..?? ನೀನು ಹಿಂದೆ ಹೇಗಿದ್ದೆ ಎಂಬುದು ನನಗೆ ಬೇಡ.. ನಿನ್ನ ಆಸ್ತಿ, ಅಂತಸ್ತು, ತಂದೆ ತಾಯಿಗಳ ವಿಚಾರ ಬೇಡ.. ಆದ್ರೆ ಮುಂದಿನ ಜೀವನದಲ್ಲಿ ಹಿಂದಿನ ಜೀವನದ ನೋವು ಬಾರದಂತೆ ನಿನ್ನ ನೋಡಿಕೊಳ್ತೀನಿ ಅಂತ ಪ್ರೀತಿಯಿಂದ ಹೇಳಿದ..ನಿನ್ನ ಪ್ರೀತಿಯಲ್ಲಿ ಮೋಸವಿಲ್ಲ.. ನಿನ್ನಂತ ಹುಡುಗ ಎಷ್ಟು ಹುಡುಕಿದ್ರೂ ಸಿಗೋದಿಲ್ಲ ಜೋಸೆಫ್..ಆದ್ರೆ ನನ್ನಂಥ ಪಾಪಿಷ್ಟರಿಗೆ ಒಳ್ಳೆಯ ಸ್ನೇಹಿತನಾಗಿದ್ದೀಯ.. ಅದೇ ನನ್ನ ಪುಣ್ಯ. ಆದ್ರೆ ಬೇರೆ ಯಾವ ನಿರೀಕ್ಷೆಯೂ ನನ್ನಿಂದ ಮಾಡ್ಬೇಡ ಅಂತ ಹೇಳಿ ಅಲ್ಲಿಂದ ಹೋಗ್ತಾಳೆ.. ಆದ್ರೆ ಜೋಸೆಫ್ “ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ” ಅಂತ ಕೂಗಿ ಹೇಳ್ತಾನೆ. ಆದ್ರೆ ಮರುದಿನ ಬೆಳಗಾಗುವಷ್ಟರಲ್ಲಿ ಚಾಂದಿನಿ ಸಾವಿಗೆ ಶರಣಾಗಿರ್ತಾಳೆ. ಚಾಂದಿನಿಯ ನಿಗೂಢ ಸಾವಿಗೆ ಜೋಸೆಫ್ ದಂಗಾಗಿ ಹೋಗ್ತಾನೆ. ಅದ್ರೆ ಆ ಹೆಣಕ್ಕೆ ವಾರಸುದಾರರು ಯಾರೂ ಇರೋದಿಲ್ಲ. ಜೊಸೇಫ್ ತಾನೇ ಎದುರು ನಿಂತು ಶವ ಸಂಸ್ಕಾರ ಮಾಡ್ತಾನೆ. ಆದ್ರೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಕ್ಕೆ ಅವಳು ಸತ್ತಳು ಅಂತ ಜೋಸೆಫ್ ತುಂಬಾನೇ ಕೊರಗ್ತಾ ಇರ್ತಾನೆ. ಅದೊಂದು ದಿನ ಜೋಸೆಫ್ ಮನೆಗೆ ಒಂದು ಪತ್ರ ಬರುತ್ತೆ. ವಿಚಿತ್ರ ಅಂದ್ರೆ ಅದು ಚಾಂದಿನಿ ಬರೆದ ಪತ್ರ..!!ಸತ್ತ ಚಾಂದಿನಿ ಪತ್ರ ಬರೀತಾಳಾ ಅಂತ ಜೋಸೆಫ್ ಗೆ ಅಚ್ಚರಿಯಾಗುತ್ತೆ. ಅದನ್ನು ತೆಗೆದು ನೋಡಿದಾಗ ಅವನಿಗೊಂದು ಅಚ್ಚರಿಯ ವಿಷಯ ಕಾದಿರುತ್ತೆ. ಅದನ್ನು ಓದಿ ಜೋಸೆಫ್ ದಿಗ್ಭ್ರಾಂತನಾಗುತ್ತಾನೆ..ಅದು ಚಾಂದಿನಿ ಸಾಯೋಕೆ ಮೊದಲೇ ಬರೆದ ಪತ್ರ. ಆ ಪತ್ರದಲ್ಲಿ ಏನಿತ್ತು ಗೊತ್ತಾ..?? ಗೆ, ಜೋಸೆಫ್.ಪ
ದ್ಭನಾಭ ನಗರ, ಬೆಂಗಳೂರು.  ಇಂದ ಚಾಂದಿನಿ, ಮಲ್ಲೇಶ್ವರಂ, ಬೆಂಗಳೂರು “ಆತ್ಮೀಯ ಗೆಳೆಯ….ದಯವಿಟ್ಟ ಕ್ಷಮಿಸು.. ನಿನ್ನ ಸ್ನೇಹವನ್ನು ನಾನು ಬಿಟ್ಟು ಹೋಗ್ತಾ ಇದ್ದೀನಿ.. ನೀನು ನನ್ನ ಜೊತೆಗೆ ಪ್ರೀತಿಯ ಬಂಧನದಲ್ಲಿ ಬೀಳ್ತೀಯ ಅಂತ ನನಗೆ ಗೊತ್ತಿರಲಿಲ್ಲ.. ನಾನು ತಪ್ಪು ಮಾಡಿಬಿಟ್ಟೆ. ಒಳ್ಳೆಯ ಹುಡುಗನ ಮನಸ್ಸಿನಲ್ಲಿ ಇಲ್ಲಸಲ್ಲದ ಆಸೆಗಳನ್ನು ಹುಟ್ಟಿಸಿ ನಿನ್ನ ಬದುಕಿಗೆ ಮುಳ್ಳಾದೆ.  ಪ್ರೀತಿ ಮಾಡಿದ್ದು ತಪ್ಪು ಅಂತ ಹೇಳ್ತಿಲ್ಲ. ಆದ್ರೆ ನನ್ನನ್ನು ಪ್ರೀತಿ ಮಾಡಿದ್ದು ತಪ್ಪು.. ಈ ನಿನ್ನ ತಪ್ಪಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾನೇ ಕಾರಣ ಆಗ್ಬಿಟ್ಟೆ. ಅದಿಕ್ಕೆ ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆಯೇ ಶಿಕ್ಷೆ ಎಂದು ಆತ್ಮ ಹತ್ಯೆ ಮಾಡಿಕೊಳ್ತಾ ಇದ್ದೀನಿ. ನನ್ನ ಮನದ ನೋವು, ನಾನು ತಮಿಳುನಾಡು ಬಿಟ್ಟುಬೆಂಗಳೂರಿಗೆ ಯಾಕೆ ಬಂದೆ ಅನ್ನೋದನ್ನು ಯಾರಿಗೂ ಹೇಳಿರಲಿಲ್ಲ.. ಆದ್ರೆ ಈಗ ಹೇಳ್ತೀನಿ ಕೇಳು.. ನನ್ನನ್ನು ಹೆತ್ತ ತಂದೆ ತಾಯಿಗಳೇ ಕರುಣೆ ಇಲ್ಲದೇ ನನ್ನನ್ನು ಹೊರಗೆ ಹಾಕಿದ್ರು. ಕಾರಣ ಏನು ಅಂತ ಗೊತ್ತಾ..?? ನನ್ನ ದೇಹದಲ್ಲಿನ ಹಾರ್ಮೋನುಗಳು.. ಹೌದು..ನಾನು ಹುಟ್ಟಿದಾಗ ನನಗೆ ಇಟ್ಟ ಹೆಸರು ಚಂದನ್.. ಹುಟ್ಟುವಾಗ ಹುಡುಗನಾಗಿ ಹುಟ್ಟಿದೆ.. ಆದ್ರೆ ಬೆಳೆಯುತ್ತ ಬೆಳೆಯುತ್ತ ನನ್ನ ದೇಹದಲ್ಲಿ ಬದಲಾವಣೆಗಳು ಆಗೋಕೆ ಶುರುವಾದವು. ಹುಡುಗಿಯ ದೇಹದಂತೆ ನನ್ನ ದೇಹವೂ ಮಾರ್ಪಾಡಾಯ್ತು. ನಾನೇನು ಮಾಡ್ಲಿ..?? ಇದು ನನ್ನ ತಪ್ಪಾ..??ಬೆಂಗಳೂರಿಗೆ ಬಂದು ಹುಡುಗಿಯಾಗಿಯೇ ಬದುಕೋಕೆ ಶುರು ಮಾಡಿದೆ. ಆದ್ರೆ ನಿನ್ನ ಜೀವನಕ್ಕೆ ನಾನೇ ಶತೃ ಆಗ್ತೀನಿ ಅಂತ ನಾನು ಅಂದುಕೊಂಡಿರಲಿಲ್ಲ. ನಿನ್ನ ಪ್ರೀತಿ ನನ್ನ ಕಡೆ ತಿರುಗಿತು.. ನಾನೆನು ಮಾಡ್ಲಿ..?? ನಾನು ಸತ್ತರೆ ಯಾರಿಗೂ ಏನೂ ನಷ್ಟವಿಲ್ಲ. ಆದ್ರೆ ನೀನು ಬದುಕಿ ಬಾಳಬೇಕಾದವ. ಅದಿಕ್ಕೆ, ನಿನ್ನ ಜೀವನಕ್ಕೆ ನಾನು ಅಡ್ಡಿಯಾಗಬಾರದು ಅಂತ ಆತ್ಮ ಹತ್ಯೆ ಮಾಡಿಕೊಳ್ತಿದ್ದೀನಿ..ಆದ್ರೆ ಒಂದು ವಿಷಯ ಗೆಳೆಯ.. ನಿನ್ನ ಸ್ನೇಹ ನಾನು ಎಂದೂ ಮರೆಯೋದಿಲ್ಲ.. ಕ್ಷಮೆ ಇರಲಿ ಜೋಸೆಫ್ ಇಂತಿ ದುರದೃಷ್ಟವಂತೆ    ಚಾಂದಿನಿ.

  •  ಚೇತನ್ ದಾಸರಹಳ್ಳಿ

POPULAR  STORIES :

16-21 ವಯಸ್ಸಿನವರಲ್ಲಿ ಮಿತಿಮೀರಿದೆ `ಕಾಮನೆ..!’ ಹದಿವಯಸ್ಸಿನ ಹುಡುಗ-ಹುಡುಗಿಯರು ಹಾಳಾಗುತ್ತಿದ್ದಾರೆ..!?

ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?

ಟೀಂ ಇಂಡಿಯಾ ಧೋನಿ ಕೈ ತಪ್ಪುತ್ತಾ…?

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

ಬೆಂಗಳೂರಿಗರೇ ಪ್ಲಾಸ್ಟಿಕ್ ನಿಷೇಧವನ್ನು ಡೋಂಟ್ಕೇರ್ ಅಂತೀರಾ..!? ಕೈಯ್ಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಕಂಡ್ರೇ ರೂ 500 ದಂಡ..!!

ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?

ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?

ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?

`ಹಿಂದೂ ಹೆಣ್ಣುಮಕ್ಕಳು ನಾಲ್ಕು ಮಕ್ಕಳನ್ನು ಹೆರಲಿ..!’ ಜೀನ್ಸ್ ಪ್ಯಾಂಟ್ ಮಹಾರಾಜನ ಫುಲ್ ಡಿಟೇಲ್ಸ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...