ಬಹುರಾಷ್ಟ್ರಿಯ ಕಂಪನಿಗಳು ಭೂಜಲವನ್ನು ಹೇಗೆ ಲೂಟಿ ಮಾಡಿಕೊಳ್ಳುತ್ತಿದ್ದಾರೆ??????

Date:

ದೇಶದೆಲ್ಲೆಡೆ ಹಾಹಾಕಾರ….ನೀರಿಗಾಗಿ ಜನರ ಪರದಾಟ..ಸರಿಸುಮಾರು 330ಮಿಲಿಯನ್ ಗೂ ಹೆಚ್ಚು ಜನ ಬರಗಾಲದಿಂದ ತತ್ತರಿಸುತ್ತಿದ್ದಾರೆ.ತೀವ್ರ ನೀರಿನ ಅಭಾವದಿಂದ ರೈತರು ತಮ್ಮ ಬೆಳೆ ಹಾನಿ ಅನುಭವಿಸುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಪೆಪ್ಸಿ ಒಳಗೊಂಡು ಇತರ ಕಂಪನಿಗಳು ಭೂಜಲವನ್ನು ಲೂಟಿ ಮಾಡುತ್ತಿದ್ದಾರೆ.ಇವರಿಗೆ ಹೇಳೊರು ಕೇಳೊರು ಇಲ್ಲದಂತಾಗಿದೆ.ತಡೆರಹಿತ ಹಾಗೂ ಏಕ ಪ್ರಕಾರದ ಭೂಜಲದ ಹೊರತೆಗೆಯುವಿಕೆಯಿಂದಾಗಿ ಭೂಜಲದ ಮಟ್ಟಕ್ಕೆ ಅಪಾಯ ಉಂಟಾಗಿದ್ದು ಭೂಜಲವು ಅತೀ ವೇಗದಲ್ಲಿ ಕುಸಿತದ ಅಪಾಯಕಾರಿ ಮಟ್ಟವನ್ನು ತಲಪಿದೆ ಎಂದು ವಿಜ್ಣಾನಿಗಳು ಎಚ್ಚರಿಕೆ ನೀಡಿದ್ದಾರೆ.

ನೀರು ಸರಬರಾಜು(ಪ್ಯಾಕೇಜ್) ಉದ್ಯಮವು ತೀವ್ರ ಸ್ವರೂಪದಲ್ಲಿ ಬೆಳೆಯುತ್ತಿದ್ದು ಇದು ವಾರ್ಷಿಕ ಮಾರಾಟದಲ್ಲಿ 1000 ಕೋಟಿ ರೂ ಮೌಲ್ಯದ ಆದಾಯವನ್ನು ಗಳಿಸಿದೆ.ಇದು ವರ್ಷದಿಂದ ವರ್ಷಕ್ಕೆ ತೀವ್ರ ವಾಗಿ 40 ರಿಂದ 50 ಪ್ರತಿಶತ ಹೆಚ್ಚಳಿಕೆಯಾಗುತ್ತಿದ್ದು ಕೇವಲ ಇದಕ್ಕೆ ಭೂಜಲದ ಶೋಷಣೆಯೇ ಕಾರಣವಾಗಿದೆ.ತೀವ್ರ ವಾಗಿ ಗಮನಿಸಿದಾಗ ಈವ್ಯವಹಾರದ ಪ್ರದೇಶಗಳಲ್ಲೆ ಭೂಜಲದ ಮಟ್ಟದಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ 3 ವರ್ಷಗಳಿಂದ ಸತತವಾಗಿ ಕೇಂದ್ರ ಸರಕಾರದ ಭೂಜಲಮಂಡಳಿ ಪ್ರಾಧಿಕಾರವು 144 ಬಹುರಾಷ್ಟ್ರೀಯ ಹಾಗೂ ಇತರ ಕಂಪನಿಗಳನ್ನೊಳಗೊಂಡಂತೆ ತ್ಯಾಜ್ಯನೀರಿನ ಮರುಬಳಕೆಗೆ ಅನುಮತಿ ಯಿತ್ತರೂ ಕೇವಲ 24 ಕಂಪನಿಗಳು ಈ ನಿಟ್ಟಿನಲ್ಲಿ ಕಾರ್ಯ ವಹಿಸುತ್ತಿದೆ.ಪೆಪ್ಸಿ ಕಂಪನಿಯ ಪ್ರಮುಖ ಬ್ರಾಂಡ್ ಗಳಾದ ಮಾಜ,ಸ್ಲೈಸ್,ಮೌಂಟನ್ ಡ್ಯು,೭ಅಪ್,ಟ್ರೋಪಿಕಾನ,ನಿಂಬೂಜ್ ಮೊದಲಾದ ಕಂಪನಿಯು ಪ್ರತಿ ವರ್ಷ 6,48,000 ಕ್ಯುಬಿಕ್ ಭೂಜಲವನ್ನು ಉಪಯೊಗಿಸುತ್ತಿದ್ದು ಮರು ಜಲವನ್ನು ಭರ್ತಿಮಾಡಲಾಗುತ್ತಿಲ್ಲ,ಇವುಗಳು ಕರಾರು ಪ್ರಕಾರ 83,778 ಕ್ಯುಬಿಕ್ ಮೀಟರ್ ನೀರನ್ನು ಪ್ರತೀ ವರ್ಷ ಭರ್ತಿ ಮಾಡಬೇಕಿತ್ತು.

ಈ ತರದ ನಿರ್ಲಜ್ಜ ಭೂಜಲದ ಶೋಷಣೆಯಿಂದ ನೋಯಿಡ, ಉತ್ತರ ಪ್ರದೇಶ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ನೀರಿನ ಅಭಾವವನ್ನು ಎದುರಿಸುವಂತಾಗಿದೆ.ಭೂಜಲ ಮಟ್ಟವು 180 ಅಡಿಗಿಂತಲೂ ಕೆಳಗೆ ಕುಸಿದಿದೆ.ಈ ತರನಾದ ಪರಿಸ್ಥಿತಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಸಂಪೂರ್ಣವಾಗಿ ಭೂಜಲ ನಾಶವಾಗುವುದರಲ್ಲಿ ಯಾವುದೇ ಸಂದೇಹವಿರಲಾರದು.

ಒಂದು ಕಡೆ ಲಾತೂರ್ ನಂತಹ ಪ್ರದೇಶಕ್ಕೆ ಸರಕಾರವು ರೈಲುಗಳಲ್ಲಿ ನೀರು ಪೂರೈಸುತ್ತಿರುತ್ತಿದೆ;ಇನ್ನೊಂದು ಕಡೆ ಬಹುರಾಷ್ಟ್ರಿಯ ಕಂಪನಿಗಳ ಭೂಜಲದ ಲೂಟಿಯು ನಮ್ಮನ್ನು ಯಾವ ಸ್ಥಿತಿಯತ್ತ ಕೊಂಡೊಯ್ಯುವುದೊ ದೇವರೇ ಬಲ್ಲ.

  • ಸ್ವರ್ಣ ಭಟ್

POPULAR  STORIES :

ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

ಬೆಂಗಳೂರಿಗರೇ ಪ್ಲಾಸ್ಟಿಕ್ ನಿಷೇಧವನ್ನು ಡೋಂಟ್ಕೇರ್ ಅಂತೀರಾ..!? ಕೈಯ್ಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಕಂಡ್ರೇ ರೂ 500 ದಂಡ..!!

ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?

ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...