ಆ ಪುಸ್ತಕದ ಹೆಸರು ಗೇಮ್ ಇನ್ ಗೇಮ್. ಅದನ್ನು ಬರೆದಿದ್ದು ಖ್ಯಾತ ಫುಟ್ಬಾಲ್ ಆಟಗಾರ್ತಿ ಸೋನ ಚೌದರಿ. ತಂಡದಲ್ಲಿ ಅವಕಾಶ ಸಿಗಲು, ಉಳಿದುಕೊಳ್ಳಲು ಕೋಚ್ ಕಾರ್ಯದರ್ಶಿಗಳ ಜೊತೆ ಮಲಗಬೇಕಿತ್ತು. ವಿದೇಶ ಪ್ರವಾಸಕ್ಕೆ ಹೊರಟಾಗ ಆಟಗಾರ್ತಿಯರ ರೂಮಿನಲ್ಲೇ ಕೋಚ್, ಕಾರ್ಯದರ್ಶಿಗಳಿಗೆ ಮಲಗಲು ಮಂಚ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದು ತಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಬರೀ ಫುಟ್ಬಾಲ್ ಅಂತಲ್ಲ. ಎಲ್ಲಾ ವಲಯಗಳಲ್ಲೂ ಹೆಣ್ಣುಮಕ್ಕಳಿಗೆ ಲೈಂಗಿಕವಾಗಿ ಹಿಂಸಿಸುವ, ಅಧಿಕಾರ, ಅವಕಾಶದ ಅಗತ್ಯತೆಗಳನ್ನು ಹೇರಿ ಬಳಸಿಕೊಳ್ಳುವ ಹೀನಾಪ್ರವೃತ್ತಿಯಿದೆ. ಹಲವು ಹೆಣ್ಣುಮಕ್ಕಳು ಇಂತಹ ಪರಿಸ್ಥಿತಿ ಬಂದಾಗ ಚಪ್ಪಲಿ ತೋರಿಸಿ ಎದ್ದುಬಂದಿದ್ದಾರೆ. ಮಾನಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂಬ ಜಾಯಮಾನದ ಹೆಣ್ಣುಮಕ್ಕಳಿವರು. ಆದರೆ ಕೆಲವು ಹೆಣ್ಣುಮಕ್ಕಳು ಅನಿವಾರ್ಯವಾಗಿ, ಅಧಿಕಾರಕ್ಕಾಗಿ ಕಾಂಪ್ರಮೈಸ್ ಆಗಿಬಿಡುತ್ತಾರೆ. ಮೇಲ್ನೋಟಕ್ಕೆ ನಗುವಿನ, ಶಿಸ್ತಿನ ಸೋಗು ಹಾಕಿಕೊಂಡ ಕೆಲವು ಹೆಣ್ಣುಮಕ್ಕಳು ಹಿಂಬಾಗಿಲಿನಿಂದ ಸರೆಂಡರ್ ಆಗುವುದನ್ನು ನಾವು ನೋಡಿರುತ್ತೇವೆ. ಲಂಪಟ ವ್ಯವಸ್ಥೆಯಲ್ಲಿ ಇವತ್ತಿಗೂ ಹೆಣ್ಣು ಗಂಡಸಿನ ಕೈಗೊಂಬೆಯಾಗಿರುವುದು ನಿಜಕ್ಕೂ ದುರಂತ.
POPULAR STORIES :
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?