ಫ್ಲೊರಿಡಾದ ಈ ಎಪ್ಪತ್ತುವರ್ಷದ ವೃದ್ದೆಯ ಹೆಸರು ಮೇರಿ ಆನ್ ಫ್ರಾಂಕೋ. ಈಗ್ಗೆ ಇಪ್ಪತ್ಮೂರು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಆಕೆಯ ಬೆನ್ನು ಮೂಳೆ ಮುರಿದಿತ್ತು. ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಅವತ್ತಿನಿಂದ ಕುರುಡಾಗಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಮೇರಿ, ಕೆಲವು ದಿನಗಳ ಹಿಂದೆ ಹೆಜ್ಜೆ ತಪ್ಪಿ ನೆಲಕ್ಕೆ ಬಿದ್ದಳು. ಬಿದ್ದ ರಭಸಕ್ಕೆ ಆಕೆಯ ತಲೆಗೆ ಬಲವಾದ ಪೆಟ್ಟುಬಿದ್ದಿತ್ತು. ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಮುಗಿದ ನಂತರ ಪ್ರಜ್ಞೆ ಮರುಕಳಿಸಿತ್ತು. ಅಚ್ಚರಿಯೆಂದರೇ ಇಪ್ಪತ್ಮೂರು ವರ್ಷಗಳ ಹಿಂದೆ ದೃಷ್ಟಿ ಕಳೆದುಕೊಂಡ ಅಜ್ಜಿಗೆ ಕಣ್ಣು ಕಾಣಿಸುತ್ತಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಕಣ್ಣಿಗೆ ರಕ್ತಸಂಚಾರವಾಗಿ ದೃಷ್ಟಿಬಂದಿದೆ ಅಂತ ವೈದ್ಯರು ಹೇಳಿದ್ದಾರೆ. ಆದರೆ ಇದು ವಿಜ್ಞಾನಕ್ಕೂ ನಿಲುಕದ ಅದ್ಭುತವೆಂದಿದ್ದಾರೆ. ಎರಡೂ ದಶಕಗಳಿಗೂ ಹೆಚ್ಚುಕಾಲ ದೃಷ್ಠಿ ಕಳೆದುಕೊಂಡ ಅಜ್ಜಿಗೆ ಕಣ್ಣಬಂದಿರುವುದು ಪುನರ್ಜನ್ಮ ಬಂದಂತಾಗಿದೆಯಂತೆ..! ಜಗತ್ತು ನನ್ನ ಕಲ್ಪನೆಯಂತಿಲ್ಲ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ..
POPULAR STORIES :
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
ದೇವರನಾಡಿಗೂ ದೆವ್ವದ ನಾಡಿಗೂ ಎಲ್ಲಿಯ ಸಂಬಂಧ..!? ನರೇಂದ್ರ ಮೋದಿ ಎಡವುತ್ತಿರುವುದೆಲ್ಲಿ..!?
ಹಾವು ಮನುಷ್ಯರಿಗೆ ಕಚ್ಚುತ್ತೆ ನಿಜ..! ಆದರೆ ಇವ್ನು ಹೆಬ್ಬಾವನ್ನೇ ಕಚ್ಚಿ ಪ್ರಜ್ಞೆ ತಪ್ಪಿಸಿದ್ದ..!?
ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?