IPL ನ ಅನ್ ಬ್ರೇಕಬಲ್ ಟಾಪ್ 10 ರೆಕಾರ್ಡ್ ಗಳು..!

Date:

IPL ನ ಅನ್ ಬ್ರೇಕಬಲ್ ಟಾಪ್ 10 ರೆಕಾರ್ಡ್ ಗಳು..!

ಕೊರೋನಾ ಮಹಾಮಾರಿ ವಕ್ಕರಿಸದೇ ಇದ್ದಿದ್ದರೆ ಮಾರ್ಚ್ 29 ರಿಂದಲೇ IPL ಆರಂಭವಾಗಿ ಈಗಾಗಲೇ ಟೂರ್ನಿ ಮುಗಿದಿರ್ತಿತ್ತು. ಆದ್ರೆ, ಕೊರೋನಾದಿಂದ 13 ನೇ ಆವೃತ್ತಿ ಮೆಗಾ ಟೂರ್ನಿ ಮುಂದೂಡಲ್ಪಟ್ಟಿತ್ತು.‌ ನಡೆಯುತ್ತೋ? ನಡೆಯಲ್ವಾ ಅನ್ನೋ ಡೌಟಿತ್ತು‌. ಕೊನೆಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸಂಬಂಧಪಟ್ಟ ಎಲ್ಲರ ಪರಿಶ್ರಮದಿಂದ IPL 2020 ನಡೆಯುತ್ತಿದೆ.. ಕೊರೋನಾ‌ ದೆಸೆಯಿಂದಾಗಿ ಭಾರತದಲ್ಲಿ ನಡೆಯುವ ಬದಲು ಯು ಎ ಇ ಅರ್ಥಾತ್ ಯುನೈಟೆಡ್‌‌ ಅರಬ್ ಎಮಿರೇಟ್ಸ್ ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂದ್ಯಗಳು ನಡೆಯುತ್ತಿವೆ.
ದಿನೇ ದಿನೇ ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಹತ್ತಾರು ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ.
ಈ ನಡುವೆ ಒಮ್ಮೆ ನಾವು – ನೀವು ಮೆಗಾ ಟೂರ್ನಿ ಐತಿಹಾಸಿಕ ರೆಕಾರ್ಡ್ ಗಳತ್ತ ಚಿತ್ತ ಹರಿಸೋಣ.‌ IPL ಅಂಗಳದಲ್ಲಿ ಲೆಕ್ಕವಿಲ್ಲದಷ್ಟು ಅದ್ಭುತ ರೆಕಾರ್ಡ್ ಗಳು ನಿರ್ಮಾಣವಾಗಿವೆ, ನಿರ್ಮಾಣವಾಗುತ್ತಿವೆ. ಅನೇಕ ರೆಕಾರ್ಡ್‌ ಗಳು ಬ್ರೇಕ್ ಆಗುತ್ತವೆ.‌ಆದರೆ, ಕೆಲವೊಂದು ರೆಕಾರ್ಡ್ ಗಳನ್ನು ಮಾತ್ರ ಎಂದೂ ಎಂದೆಂದೂ ಮುರಿಯಲು ಆಗಲ್ಲ. ಯಾರೂ ಬ್ರೇಕ್ ಮಾಡಲಾಗದ ಟಾಪ್ 10 ರೆಕಾರ್ಡ್ ಗಳ ಪಟ್ಟಿ ಇಲ್ಲಿದೆ. ಈ ರೆಕಾರ್ಡ್ ಗಳನ್ನು ಬ್ರೇಕ್ ಮಾಡೋದು ಹಾಗಿರಲಿ, ಅದರ ಹತ್ತಿರ ಸುಳಿಯುವುದೇ ಕಷ್ಟ ಸಾಧ್ಯ..!

*10 ಅನ್ ಬ್ರೇಕಬಲ್ ರೆಕಾರ್ಡ್ ಗಳು*

Number 10

ಹೈಯಸ್ಟ್ ಇಂಡಿವಿಶುವಲ್ ಸ್ಕೋರ್ ( ಗರಿಷ್ಠ ವ್ಯಕ್ತಿಗತ ಸ್ಕೋರ್ ) : ನಿಮಗೆ ಗೊತ್ತೇ ಇದೆ ವೆಸ್ಟ್ ಇಂಡೀಸ್ ನ ಹೊಡಿಬಡಿ ಆಟಗಾರ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ.‌ ಅವರ ಕೆಲವು ದಾಖಲೆಗಳನ್ನು ಸದ್ಯ ಯಾರೂ ಬ್ರೇಕ್ ಮಾಡಲು ಆಗಲ್ಲ. ಅವುಗಳಲ್ಲೊಂದು ಗರಿಷ್ಠ ವ್ಯಕ್ತಿಗತ ಸ್ಕೋರ್. ಪ್ರಸ್ತುತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಕ್ರಿಸ್ ಗೇಲ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿದ್ದರು. 2013 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ ಅಬ್ಬರಿಸಿದ್ದರು. ಕೇವಲ‌ 66 ಬಾಲ್ ಗಳಲ್ಲಿ 175 ರನ್ ಸಿಡಿಸಿ ಔಟಾಗದೆ ಉಳಿದಿದ್ದರು. ಆ ಮ್ಯಾಚ್ ನಲ್ಲಿ ಆರ್ ಸಿಬಿ ಪುಣೆಗೆ 264 ರನ್ ಗಳ ಟಾರ್ಗೆಟ್ ನೀಡಿತ್ತು. ಪುಣೆ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಮಾಡಿತ್ತು. ಆರ್ ಸಿಬಿ‌ 130 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು. ಟಿ20ಯಲ್ಲಿ ಶತಕ ಸಿಡಿಸುವುದೇ ಕಷ್ಟ. ಅಂತಹದ್ರಲ್ಲಿ ಗೇಲ್ 175 ರನ್ ಬಾರಿಸಿ ರೆಕಾರ್ಡ್ ಮಾಡಿದ್ದಾರೆ .ಈ ಅತ್ಯಧಿಕ ಸ್ಕೋರ್ ಅನ್ನು ಬ್ರೇಕ್ ಮಾಡೋದು ಸ್ವತಃ ಗೇಲ್ ಗೆ ಕಷ್ಟ ಎಂದರೆ ತಪ್ಪಾಗಲ್ಲ..!

Number 9

ತಂಡದ ಅತಿ ಹೆಚ್ಚು ರನ್ : ಮೊದಲೇ ಹೇಳಿರುವಂತೆ 2013 ರಲ್ಲಿ ಪುಣೆ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ ತಂಡದ ಆಟಗಾರರಾಗಿದ್ದ ಕ್ರಿಸ್ ಗೇಲ್ 175 ರನ್ ಬಾರಿಸಿದ್ದರು.‌ ಆ ಮ್ಯಾಚ್ ನಲ್ಲಿ ಆರ್ ಸಿಬಿ‌ 20 ಓವರ್ ಗಳಲ್ಲಿ 263 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಪುಣೆ ಕೇವಲ 133 ರನ್ ಮಾಡಲು ಶಕ್ತವಾಗಿತ್ತು. ಆರ್ ಸಿಬಿ ಆ ಪಂದ್ಯದಲ್ಲಿ ಕಲೆಹಾಕಿದ್ದ 263 ರನ್ನೇ IPL ಇತಿಹಾಸದಲ್ಲಿ ತಂಡವೊಂದರ ಅತ್ಯಧಿಕ ಸ್ಕೋರ್. ಈ ದಾಖಲೆಯನ್ನು ಇದುವರೆಗೆ ಯಾರೂ ಮುರಿದಿಲ್ಲ. ಮುರಿಯುವುದು ಕೂಡ ಕಷ್ಟ ಸಾಧ್ಯ..!

Number 8

ತಂಡದ ಅತಿ‌‌‌ ಕಡಿಮೆ ಸ್ಕೋರ್ : IPL ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿರುವ ದಾಖಲೆ ಆರ್ ಸಿಬಿ ಹೆಸರಲ್ಲಿದೆಯೋ ಅದೇರೀತಿ ಅತಿ ಕಡಿಮೆ ರನ್ ಕಲೆಹಾಕಿದ ತಂಡ ಕೂಡ ಆರ್ ಸಿಬಿಯೇ..!
2017ರಲ್ಲಿ ಕೋಲ್ಕತ್ತಾದಲ್ಲಿ ಕೋಲ್ಕಾತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ RCB ಅತಿ ಕಡಿಮೆ‌ ಸ್ಕೋರ್ ಗೆ ಆಲ್ ಔಟ್ ಆಗಿ ಮುಖಭಂಗ ಅನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 131 ರನ್ ಮಾಡಿತ್ತು.‌ ಸಾಧಾರಣ ಗುರಿ ಬೆನ್ನತ್ತಿದ ಆರ್ ಸಿಬಿ ಕೇವಲ‌ 49 ರನ್ ಗಳಿಗೆ ಆಲ್ ಔಟ್ ಆಗಿತ್ತು..! ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿಡಿವಿಲಿಯರ್ಸ್ ಅವರಂಥಾ ವಿಶ್ವಶ್ರೇಷ್ಠ ಬ್ಯಾಟ್ಸ್ ಮನ್ ಗಳನ್ನು ಹೊಂದಿದ್ದ ತಂಡ ಇಷ್ಟೊಂದು ಕಮ್ಮಿ ಸ್ಕೋರ್ ಗೆ ಆಲ್ ಔಟ್ ಆಗಿದ್ದು ಎಂದಿಗೂ ಅಚ್ಚರಿಯೇ..! ಒಟ್ನಲ್ಲಿ ಹೈಯಸ್ಟ್ ಟೋಟಲ್ ಸ್ಕೋರ್ ಮಾತ್ರವಲ್ಲದೆ ಲೋಯೆಸ್ಟ್ ಟೋಟಲ್ ಸ್ಕೋರ್ ಕೂಡ RCB ಹೆಸರಲ್ಲಿದೆ.

NUMBER 7

ಸತತ ಗೆಲುವು : ಯಾವ ತಂಡ ಅದ್ಭುತ ಫಾರ್ಮ್ ನಲ್ಲಿರುತ್ತದೆಯೋ ಆ ತಂಡ ನಿರಂತರ ಗೆಲವುವನ್ನು ಪಡೆಯುತ್ತದೆ.‌ ತಂಡದಲ್ಲಿ ಒಬ್ಬರಲ್ಲದೆ ಇನ್ನೂಬ್ಬರು ಆಡುತ್ತಿದ್ದರೆ ತಂಡ ಗೆಲುವಿನ ಓಟವನ್ನು ಮುಂದುವರೆಸುತ್ತೆ.‌
IPL ಇತಿಹಾಸದಲ್ಲಿ ಅತಿ ಹೆಚ್ಚು ನಿರಂತರ ಗೆಲುವನ್ನು ಪಡೆದ ತಂಡ ಎಂಬ ಹೆಗ್ಗಳಿಕೆ ಕೋಲ್ಕತ್ತಾ ನೈಟ್ ರೈಡರ್ಸ್ ನದ್ದಾಗಿದೆ.‌ 2014 ಟೂರ್ನಿಯಲ್ಲಿ ಸತತ 9 ಪಂದ್ಯಗಳನ್ನು ಕೋಲ್ಕತ್ತಾ ಗೆದ್ದಿತ್ತು. ಬಳಿಕ‌ 2015 ರ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯ ಗೆದ್ದಿತ್ತು. ಇದರೊಂದಿಗೆ ಸತತ 10 ಪಂದ್ಯಗಳ ಜಯದೊಂದಿಗೆ ಕೆಕೆಆರ್ ನಿರಂತರ ಗೆಲುವು ಕಂಡ ಟೀಮ್ ಎಂಬ ಕೀರ್ತಿಗೆ ಪಾತ್ರವಾಗಿದೆ.‌

NUMBER 6

ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ : IPL ಹೊಸ ಹೊಸ ಪ್ರತಿಭೆಗಳ ಅನಾವರಣ ವೇದಿಕೆ. ಹೊಸ ಹೊಸ ಸ್ಟಾರ್ ಆಟಗಾರರು IPL ಮೂಲಕ ಸದ್ದು ಮಾಡುತ್ತಿದ್ದಾರೆ. ಮೊದಲ ಮ್ಯಾಚಂತೂ ಎಲ್ಲರಿಗೂ ಅವಿಸ್ಮರಣೀಯವಾಗಿರುತ್ತದೆ. ಟಿ20 ಎಂದರೆ ಬ್ಯಾಟ್ಸ್ ಮನ್ ಗಳ ಅಬ್ಬರ . ಹೀಗಿರುವಾಗ ಬಹುದೊಡ್ಡ ಯಶಸ್ಸು ಮೊದಲ ಪಂದ್ಯದಲ್ಲೇ ಬೌಲರ್ ಗೆ ಸಿಕ್ಕರೆ ಹೇಗಿರುತ್ತೆ? IPLನ ಡೆಬ್ಯು ಮ್ಯಾಚ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಮ್ಮೆ ವೆಸ್ಟ್ ಇಂಡೀಸ್ ನ ಅಲ್ಜಾರಿ ಜೋಸೆಫ್ ಅವರದ್ದಾಗಿದೆ. 2019 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ ಅಲ್ಜಾರಿ ಜೋಸೆಫ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ 3.4 ಓವರ್ ಬೌಲಿಂಗ್ ಮಾಡಿ ಕೇವಲ‌ 12 ರನ್ ನೀಡಿ 6 ವಿಕೆಟ್ ಕಿತ್ತಿದ್ದರು.

NUMBER 5

ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ : IPL ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರು ರೆಕಾರ್ಡ್ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ ಹೆಸರಲ್ಲಿದೆ.‌ 2013 ರಲ್ಲಿ ಆರ್ ಸಿಬಿ ಪರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ 175 ರನ್ ಸಿಡಿಸಿದ್ದರಲ್ಲಾ… ಆ ಮ್ಯಾಚ್ ನಲ್ಲಿ ಬರೋಬ್ಬರಿ 17 ಸಿಕ್ಸರ್ ಗೇಲ್ ಬ್ಯಾಟಿಂದ ಬಂದಿತ್ತು. ಈ ದಾಖಲೆ ಇದುವರೆಗೆ ಯಾರೂ ಬ್ರೇಕ್ ಮಾಡಿಲ್ಲ.

NUMBER 4

ವೇಗದ ಅರ್ಧಶತಕ / ಫಾಸ್ಟೆಸ್ಟ್ ಫಿಫ್ಟಿ

IPL ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿರುವ ದಾಖಲೆ ಕನ್ನಡಿಗ ಕೆ.ಎಲ್ ರಾಹುಲ್ ಅವರ ಹೆಸರಲ್ಲಿದೆ.‌ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ರಾಹುಲ್ 2018 ರಲ್ಲಿ ಮೊಹಲಿಯಲ್ಲಿ ಡೆಲ್ಲಿ ತಂಡದ ವಿರುದ್ಧ ಕೇವಲ 14 ಬಾಲ್ ಗಳಲ್ಲಿ 50 ರನ್ ಬಾರಿಸಿದ್ದರು. ಇದು IPL ಇತಿಹಾಸದಲ್ಲಿ ಇದುವರೆಗಿನ ಫಾಸ್ಟೆಸ್ಟ್ ಹಾಫ್ ಸೆಂಚುರಿ.

NUMBER 3

ವೇಗದ ಶತಕ / ಫಾಸ್ಟೆಸ್ಟ್ ಸೆಂಚುರಿ

T20 ಫಾರ್ಮೆಟ್ ನಲ್ಲಿ ಎಷ್ಟು ರನ್ ಮಾಡುತ್ತಾರೆ ಎನ್ನುವುದಕ್ಕಿಂತ ಎಷ್ಟು ವೇಗವಾಗಿ ಮಾಡುತ್ತಾರೆ ಎನ್ನುವುದು ಮುಖ್ಯ. ಅತಿ ವೇಗದ ಅರ್ಧಶತಕದಷ್ಟೇ ಅತಿ ವೇಗದ ಶತಕ ಕೂಡ ಮುಖ್ಯವಾಗುತ್ತದೆ. IPL ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಕನ್ನಡಿಗ ಕೆ.ಎಲ್ ರಾಹುಲ್ ಅವರ ಹೆಸರಲ್ಲಿದೆ. ಅಂತೆಯೇ ಅತಿವೇಗದ ಶತಕ ಯಾರ ಹೆಸರಲ್ಲಿದೆ ಎಂದು ನೋಡಿದರೆ ಮತ್ತೆ ಬರುವುದೇ ವೆಸ್ಟ್ ಇಂಡಿಸ್ ಸ್ಟಾರ್ ಕ್ರಿಸ್ ಗೇಲ್ ಅವರದ್ದು. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ ಸಿ ಬಿ ಪರ ಕಣಕಕ್ಕಿಳಿದಿದ್ದ ಗೇಲ್ 175 ರನ್ ಸಿಡಿಸಿದ್ದರು. ಆಗ ಕೇವಲ 30 ಬಾಲ್ ಗಳಲ್ಲಿ ಶತಕ ಪೂರೈಸಿದ್ದರು.‌ ಇದು IPL ಇತಿಹಾಸದ ವೇಗದ ಶತಕವಾಗಿದೆ.

NUMBER 2

ಒಂದು ಓವರ್ ನಲ್ಲಿ ಅತಿ ಹೆಚ್ಚು ರನ್ : 2007ರ ಟಿ20 ವಿಶ್ವಕಪ್ ನಲ್ಲಿ ಭಾರತದ ಯುವರಾಜ್ ಸಿಂಗ್ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ ಗೆ 6 ಬಾಲ್ ಗೆ 6 ಸಿಕ್ಸರ್ ಸಿಡಿಸಿದ್ದರು‌.‌ ಇದು ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಓವರ್ ಒಂದರಲ್ಲಿ ಬಂದ ಅತ್ಯಧಿಕ ಸ್ಕೋರ್. ಆದರೆ ನಾವಿಲ್ಲಿ IPL ಬಗ್ಗೆ ಮಾತಾಡ್ತಿದ್ದೀವಿ. IPL ನಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಖ್ಯಾತಿ ಕೂಡ ಕ್ರಿಸ್ ಗೇಲ್ ಅವರದ್ದಾಗಿದೆ.‌ ಗೇಲ್ 2011 ರಲ್ಲಿ ಗೇಲ್ RCB ಪರ ಆಡಿದ್ದರು. ಆಗ ಕೊಚ್ವಿ ಟಸ್ಕರ್ಸ್ ತಂಡದ ಪ್ರಶಾಂತ್ ಪರಮೇಶ್ವರನ್ ಅವರ ಒಂದು ಓವರ್ ನಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 36 ರನ್ ಬಾರಿಸಿದ್ದರು. ಒಂದು ನೋ ಬಾಲ್ ಸೇರಿದಂತೆ 37 ರನ್ ಆ ಓವರ್ ನಲ್ಲಿ ಬಂದಿತ್ತು.

NUMBER 1

ಅತಿ ಹೆಚ್ಚು ಹ್ಯಾಟ್ರಿಕ್

ಸತತ ಮೂರು ಬಾಲ್ ಗಳಲ್ಲಿ ಮೂರು ವಿಕೆಟ್ ತೆಗೆಯುವುದು ಸುಲಭದ ಮಾತಲ್ಲ.‌ಅದೂ IPL ಎಂಬ ಬ್ಯಾಟ್ಸ್ ಮನ್ ಗಳ ಸ್ವರ್ಗದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವುದು ಬೌಲರ್ ಗಳ ದೊಡ್ಡ ಸಾಧನೆಯೇ ಸರಿ. IPL ನಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಭಾರತೀಯ ಬೌಲರ್ ಅಮಿತ್ ಮಿಶ್ರಾ ಹೆಸರಲ್ಲಿದೆ.‌ ಅಮಿತ್ ಮಿಶ್ರಾ ಒಂದಲ್ಲ ಎರಡಲ್ಲ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...