ಅರಬ್ ರಾಷ್ಟ್ರಗಳಲ್ಲಿ ಅಮಾನವೀಯತೆ..! ನರಳುತ್ತಿದ್ದಾಳೆ ಚಿಕ್ಕಮಗಳೂರಿನ ನಾಜಿಯಾ..!

Date:

 

ಹೆಚ್ಚು ಓದಿಕೊಂಡಿರದ, ಭಾರತದಲ್ಲಿ ಮೂರು ಹೊತ್ತು ಗಂಜಿಗೆ ಬೇಕಾದಷ್ಟು ಸಂಪಾದಿಸಲಾಗದ, ಸಾಲ ಮಾಡಿಕೊಂಡ, ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡ- ಅನೇಕರು ವಿದೇಶಕ್ಕೆ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿಂದ ಹೊರಡುವಾಗ ಇನ್ನೆರಡು, ಮೂರುವರ್ಷದಲ್ಲಿ ದೊಡ್ಡ ಶ್ರೀಮಮತರಾಗುತ್ತೇವೆ ಎಂದು ಭ್ರಮಿಸುತ್ತಾರೆ. ಆದರೆ ನಿಜವಾಗಲೂ ವಿದೇಶದಲ್ಲಿ ಅವರು ಅನುಭವಿಸುವುದು ಶುದ್ಧ ನರಕ. ಹೆಚ್ಚು ಓದಿಕೊಂಡಿರದ, ಕೆಲಸದ ಅನಿವಾರ್ಯತೆಯಿರುವವರು ಏಜೆಂಟರ ಮೂಲಕ ವಿದೇಶಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಭಾರತ, ಬಾಂಗ್ಲಾ, ಪಾಕಿಸ್ತಾನ ಇತರೆ ದೇಶಗಳ ಮಂದಿ ಹೆಚ್ಚಾಗಿ ಉದ್ಯೋಗ ಅರಸಿ ಅರಬ್ ರಾಷ್ಟ್ರಗಳಿಗೆ ಹೊರಡುತ್ತಾರೆ. ಅಲ್ಲಿ ಡ್ರೈವರ್ ಕೆಲಸ, ಮನೆಕೆಲಸ, ಗೇಟ್ ಕಾಯುವ ಕೆಲಸ, ಅರಬ್ಬರಿಗೆ ಮಸಾಜ್ ಮಾಡುವ ಕೆಲಸ, ಅಡುಗೆ ಕೆಲಸ, ಗುಲಾಮಗಿರಿ ಮಾಡಿಕೊಂಡು ದುಡಿಯುತ್ತಾರೆ. ಅಪ್ಪ, ಅಮ್ಮ, ಗಂಡ, ಹೆಂಡತಿ, ಮಕ್ಕಳು, ಮಾವ, ಅಳಿಯ, ಅಣ್ಣ, ತಮ್ಮ, ಅಕ್ಕ, ತಂಗಿ- ಹೀಗೆ ವಿದೇಶದಲ್ಲಿದ್ದಾರೆ. ಕೈತುಂಬಾ ಸಂಬಳ ಸಿಗುತ್ತದೆ ಎಂದು ಇಲ್ಲಿನ ಅವರ ಸಂಬಂಧಿಕರು ಅವರು ಕಳಿಸುವ ದುಡ್ಡಿನಲ್ಲಿ ಆರಾಮಾಗಿ ಜೀವನ ಸಾಗಿಸುತ್ತಾರೆ. ಆದರೆ ಅಲ್ಲಿನವರ ಸ್ಥಿತಿ ನಿಜಕ್ಕೂ ದೇವರಿಗೆ ಪ್ರೀತಿ. ಅಕ್ಷರಶಃ ಗುಲಾಮಗಿರಿ ಬದುಕು. ನೂರಕ್ಕೆ ತೊಂಬತ್ತು ಮಂದಿ ಅರಬ್ ಮಾಲೀಕರು ಅಥವಾ ಕಫಿಲ್ಗಳು, ಅವರ ಛೇಲಾಗಳು ಕೆಟ್ಟವರಾಗಿರುತ್ತಾರೆ. ಅವನ ಕಾಲಿಗೆ ಕೆರೆತಬಂದು ಒದ್ದರೂ ಒದಿಸಿಕೊಳ್ಳಬೇಕು. ಪರದೇಶದಲ್ಲಿ ಎದುರು ಮಾತನಾಡುವಂತಿಲ್ಲ. ಎಡವಟ್ಟಾಗಿ ಜೈಲು ಸೇರಿದರೇ ವಾಪಾಸು ಬರುವ ಮಾತೇಇಲ್ಲ. ಹಾಗಾಗಿ ಅವಡುಗಚ್ಚಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಒಂದುವೇಳೆ ಅಲ್ಲಿ ಇರಲು ಸಾಧ್ಯವೇಇಲ್ಲ ಎಂದು ಹೊರಡುವಂತೆಯೂ ಇಲ್ಲ. ವೀಸಾ ಒಪ್ಪಂದಗಳನ್ನು ಮೀರಿದರೇ ಅಲ್ಲಿನ ಆಡಳಿತ ಶಿಕ್ಷಿಸುತ್ತದೆ. ಆ ನರಕದಲ್ಲಿ ಹಿಂಸೆ ಅನುಭವಿಸಲೇಬೇಕು. ಇನ್ನು ದೇಶಬಿಟ್ಟು ಕೆಲಸವನ್ನು ಅರಸಿ ಹೊರಡುವ ಹೆಣ್ಣುಮಕ್ಕಳ ಪರಿಸ್ಥಿತಿ ನೆನೆಸಿಕೊಂಡರೇ ಕರುಳು ಕಿತ್ತುಬರುತ್ತದೆ.

ಅಲ್ಲಿನ ಕೆಲ ಅರಬ್ಬರ ಮನೆಯಲ್ಲಿ ಚಾಕರಿ ಮಾಡುವ ಹೆಣ್ಣುಮಕ್ಕಳನ್ನು ಚಿತ್ರಹಿಂಸೆ ಕೊಡಲಾಗುತ್ತದೆ. ಕೆಲವರು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಪ್ರತಿಭಟಿಸಿದರೇ ಬೆಲ್ಟ್ ಏಟು. ತಲೆಯನ್ನು ಗೋಡೆಗೆ ಚಚ್ಚಲಾಗುತ್ತದೆ. ಮುಖಮೂತಿ ನೋಡದೇ ಹೊಡೆಯತ್ತಾರೆ. ಅಲ್ಲಿ ಅರಬ್ ಗಂಡಸರು ಮಾತ್ರವಲ್ಲ, ಹೆಂಗಸರು ಕೂಡ ಮೃಗೀಯವಾಗಿ ವರ್ತಿಸುತ್ತಾರೆ. ಹಿಂಸೆ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ. ಆದರೆ ಆ ಪ್ರಯತ್ನಕ್ಕೂ ಅಲ್ಲಿ ಅವಕಾಶವಿಲ್ಲ. ನಮ್ಮ ಎಂಬೆಸಿಗಳು ಅಲ್ಲಿ ಕತ್ತೆಮೇಯಿಸುತ್ತಾ ಕುಳಿತಿವೆ. ಭಾರತ ಸರ್ಕಾರ ನಮ್ಮ ಪ್ರಜೆಗಳ ಕಡೆಗೆ ಗಮನಹರಿಸಬೇಕು. ನಮ್ಮ ದೇಶದಲ್ಲಿ ಹುಟ್ಟಿಬೆಳೆದವರು ಬೇರೆ ದೇಶದ ನಾಯಿಗಳಿಂದ ಕಚ್ಚಿಸಿಕೊಳ್ಳುತ್ತಿದ್ದಾರೆ. ಕಷ್ಟಾನೋ.. ಸುಖಾನೋ.. ಈ ದೇಶದಲ್ಲೆ ಏನಾದರೂ ಉದ್ಯೋಗ ಹುಡುಕಿಕೊಳ್ಳಿ. ಮೂರು ಹೊತ್ತಿನ ಬಿರಿಯಾನಿ ಸಿಗದಿದ್ದರೂ, ಇಲ್ಲಿ ಮೂರು ಹೊತ್ತಿನ ತರಕಾರಿ ಊಟಕ್ಕೇನು ಕೊರತೆಯಿಲ್ಲ. ನಾವು ಗುಲಾಮರನ್ನು ಓಡಿಸಿದವರು. ನಾವೇ ಗುಲಾಮರಾಗಬಾರದು.

ಸೌದಿಯಲ್ಲಿ ಚಿಕ್ಕಮಗಳೂರಿನ ನಾಜಿಯಾ ಎಂಬಾಕೆ ಸೌದಿಯಲ್ಲಿ ಅನುಭವಿಸುತ್ತಿರುವ ಚಿತ್ರಹಿಂಸೆಯನ್ನು ನೆನೆದು ಇಷ್ಟು ಬರೆಯಬೇಕಾಯಿತು. ನರಕದಲ್ಲಿ ನರಳುತ್ತಿರುವ ಆ ಹೆಣ್ಣುಮಗಳನ್ನು ಸೇಫಾಗಿ ಅವಳ ಮನೆಗೆ ಬಿಡಬೇಕಾದ ಹೊಣೆ ಭಾರತ ಸರ್ಕಾರದ್ದು. ಇಂತಹ ಅರಬ್ ಹರಾಮಿಗಳ, ಇಲ್ಲಿಂದ ಹೋಗಿ ಅರಬ್ಬರಿಗೆ ಹುಟ್ಟಿದವರಂತೆ ಆಡುತ್ತಿರುವವರ ವಿರುದ್ಧ ಈ ದೇಶದ ಜನರು ಪ್ರತಿಭಟಿಸಬೇಕು. ನ್ಯಾಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಬೇಕು. ವಿದೇಶದವರಿಗೆ ಅತಿಥಿಗಳೆಂದು ಮರ್ಯಾದೆ ಕೊಡುವ ನಮ್ಮ ಜನಕ್ಕೆ ಅಲ್ಲಿ ಹಿಂಸೆ ಕೊಡುತ್ತಾರೆ. ನಾವಿನ್ನೂ ಗುಲಾಮರಾಗಿಯೇ ಬದುಕಬೇಕಾ..? ಯೋಚಿಸಿ.

  • ರಾ ಚಿಂತನ್

POPULAR  STORIES :

ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!

ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…

ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

Share post:

Subscribe

spot_imgspot_img

Popular

More like this
Related

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...