2015 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ವಾರ್ತಾ ಸಚಿವ ರೋಷನ್ ಬೇಗ್ ಪ್ರಶಸ್ತಿಯನ್ನ ಪ್ರಕಟಿಸಿದ್ದಾರೆ. ನಿರ್ದೇಶಕ ನಾಗಣ್ಣ ಅಧ್ಯಕ್ಷತೆಯ ಒಟ್ಟು 8ಮಂದಿ ಕಮಿಟಿಯಿಂದ ಪ್ರಸಸ್ತಿಯ ಪಟ್ಟಿ ಸಿದ್ದಪಡಿಸಿತ್ತು.
ಶಿವಯೋಗಿ ಶ್ರೀಪುಟ್ಟಯ್ಯಜ್ಜ ಚಿತ್ರದ ಅದ್ಭುತ ನಟನೆಗಾಗಿ ವಿಜಯರಾಘವೇಂದ್ರ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನು ಇತ್ತಿಚಿಗಷ್ಟೇ ನಿರೀಕ್ಷೆಯ ಮಟ್ಟಕ್ಕೆ ನಟನೆ ಇಲ್ಲ ಅನ್ನೋ ಹಿಯಾಳಿಕೆಗೆ ಗುರಿಯಾಗಿ ತೀವ್ರ ಮನನೊಂದಿದ್ದ ಆಕ್ಷನ್ ಕ್ವೀನ್ ಮಾಲಾಶ್ರೀಗೆ ಗಂಗಾ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಇನ್ನು ಹಳ್ಳಿಯ ಸೊಗಡಿನ ಮೂಲಕ ಮನೆ ಮನ ಗೆದ್ದಿರುವ ತಿಥಿ ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ಇನ್ನುಳಿದಂತೆ ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಮಾರಿಕೊಂಡವರು, ತೃತೀಯ ಅತ್ಯುತ್ತಮ ಚಿತ್ರವಾಗಿ ಮೈತ್ರಿ, ವಿಶೇಷ ಸಾಮಾಜಿಕ ಕಾಳಜಿ ಚಿತ್ರವಾಗಿ ಶಿವಯೋಗಿ ಶ್ರೀಪುಟ್ಟಯ್ಯಜ್ಜ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಕೃಷ್ಣಲೀಲಾ, ಅತ್ಯುತ್ತಮ ಮಕ್ಕಳ ಚಿತ್ರವಾಗಿ ಮನೆ ಮೊದಲ ಪಾಠಶಾಲೆ ಹೊರಹೊಮ್ಮಿದೆ. ಹಾಗೆ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಶ್ರೀಧರ್ ಸಂಭ್ರಮ್, ಅತ್ಯುತ್ತಮ ಬಾಲ ನಟನಾಗಿ ಲಿಖಿತ್ ಶರ್ಮ, ಅತ್ಯುತ್ತಮ ಬಾಲ ನಟಿಯಾಗಿ ಮೇವಿಷ್, ಅತ್ಯುತ್ತಮ ಗಾಯಕನಾಗಿ ಸಂತೋಷ್ ವೆಂಕಿ, ಅತ್ಯುತ್ತಮ ಗಾಯಕಿಯಾಗಿ ಶಮಿತಾ ಮಲ್ನಾಡ್, ಅತ್ಯುತ್ತಮ ಗೀತೆ ರಚನೆಕಾರರಾಗಿ ನಾಗೇಂದ್ರ ಪ್ರಸಾದ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು ಪ್ರಶಸ್ತಿ ಪಡೆದವರು ಫುಲ್ ಖುಷಿಯಾಗಿದ್ದಾರೆ. ಆದ್ರೆ2014ನೇ ಸಾಲಿನ ಪ್ರಶಸ್ತಿ ಇನ್ನೂ ಪ್ರಧಾನವಾಗಿಲ್ಲ. ರಾಜ್ಯದಲ್ಲಿ ಬರದ ಹಿನ್ನೆಲೆ ಪ್ರಸಸ್ತಿ ಪ್ರಧಾನ ಸಮಾರಂಭ ನಡೆದಿಲ್ಲ. ಸದ್ಯದಲ್ಲೆ 2014 ರ ಸಾಲಿನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕೂಡ ನಡೆಯಲಿದೆ.
- ಶ್ರೀ
POPULAR STORIES :
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?