ಕನ್ನಡಕ್ಕೆ ಬರ್ತಿದ್ದಾರೆ ಐಶ್ವರ್ಯ… ಹೌದು ಐಶ್ವರ್ಯ ಕನ್ನಡಕ್ಕೆ ಬರ್ತಿದ್ದಾರೆ ಆದ್ರೆ ರೈ ಅಲ್ಲ ಸರ್ಜಾ. ಯೆಸ್
ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ಒಂದೆರೆಡು ಚಿತ್ರಗಳಲ್ಲಿ ನಟಿಸಿರೋ ಐಶ್ವರ್ಯ ಕನ್ನಡಕ್ಕೆ ಬರೋದಕ್ಕೆ ರೆಡಿ ಆಗ್ತಿದ್ದಾರೆ.
ಇಷ್ಟಕ್ಕೂ ಐಶ್ವರ್ಯ್ರನ್ನ ಕನ್ನಡಕ್ಕೆ ಕರೆ ತರ್ತಿರೋದು ಬೇರ್ಯಾರು ಅಲ್ಲ ಸ್ವತಃ ಅವರ ತಂದೆ ಅರ್ಜುನ್ ಸರ್ಜಾ ಅವರೇ. ಹೌದು ಪ್ರೇಮ ಬರಹ ಅನ್ನೋ ಚಿತ್ದ ಮೂಲಕ ತಮ್ಮ ಮಗಳನ್ನು ಕನ್ನಡಕ್ಕೆ ಇಂಟ್ರಡ್ಯೂಸ್ ಮಾಡೋದಕ್ಕೆ ಅರ್ಜುನ್ ಸಿದ್ಧವಾಗಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಆಕ್ಷನ್ ಕಟ್ ಕೇಳ್ತಿರೋದು ಕೂಡ ಅರ್ಜುನ್ ಸರ್ಜಾ.
`ಪ್ರೇಮ ಬರಹ’ ಚಿತ್ರವನ್ನು ತಮ್ಮದೇ ಶ್ರೀರಾಮ್ ಫಿಲಂಸ್ ಬ್ಯಾನರ್‌ನಡಿ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ ಅರ್ಜುನ್. ಇದೇ ತಿಂಗಳ 22ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಇನ್ನು ಈ ಚಿತ್ರದಲ್ಲಿ ಐಶ್ವರ್ಯ ನಾಯಕಿಯಾಗಿ ಕಾಣಿಸಿಕೊಳ್ತಿದ್ರೆ, ಚಂದನ್ ನಾಯಕನಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಈ ಚಿತ್ರದಕ್ಕೆ `ಆ ದಿನಗಳು’ ಚೇತನ್ ನಾಯಕ ಅಂತ ಹೇಳಗಾಗ್ತಿತ್ತು. ಆದ್ರೆ ಈಗ ನಾಯಕನ ಜಾಗಕ್ಕೆ `ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದನ್ ಅವ್ರನ್ನ ಫಿಕ್ಸ್ ಮಾಡಲಾಗಿದೆ.
`ಬಿಗ್ ಬಾಸ್ 3′ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಚಂದನ್ ಇಂಡಸ್ಟ್ರಿಯಲ್ಲಿ ಒಂದು ದೊಡ್ಡ ಬ್ರೇಕ್‍ಗಾಗಿ ಕಾಯುತ್ತಿದ್ದಾರೆ. ಆ ಬ್ರೇಕ್ ಈಗ `ಪ್ರೇಮ ಬರಹ’ ಚಿತ್ರದ ಮೂಲಕ ಸಿಗುವ ನಿರೀಕ್ಷೆಚಿತ್ರ ತಂಡಕ್ಕಿದೆ. ತಮ್ಮ ಮಗಳು ಐಶ್ವರ್ಯಳನ್ನು ಕನ್ನಡ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡೋ ಬಗ್ಗೆ ಹೇಳ್ತಾನೆ ಇದ್ದ ಅರ್ಜುನ್, ಸುಮಾರು ಒಂದೂವರೆ ವರ್ಷದ ಹಿಂದೆ ಬಿಡುಗಡೆಯಾದ `ಅಭಿಮನ್ಯು’ ಚಿತ್ರದ ಸಂದರ್ಭದಲ್ಲೇ ಮಗಳನ್ನ ಸ್ಯಾಂಡಲ್ ವುಡ್ ಗೆ ಪರಿಚಯಿಸೋ ಇಂಗಿತ ವ್ಯಕ್ತ ಪಡಿಸಿದ್ದರು.
- ಶ್ರೀ
POPULAR STORIES :
ಅರಬ್ ರಾಷ್ಟ್ರಗಳಲ್ಲಿ ಅಮಾನವೀಯತೆ..! ನರಳುತ್ತಿದ್ದಾಳೆ ಚಿಕ್ಕಮಗಳೂರಿನ ನಾಜಿಯಾ..!
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?