1ರೂ ಬಾಡಿಗೆಗೆ ವ್ಹೀಲ್ ಚೇರ್ ಕೊಡ್ತಾರೆ ಇವರು..!

Date:

1ರೂ ಬಾಡಿಗೆಗೆ ವ್ಹೀಲ್ ಚೇರ್ ಕೊಡ್ತಾರೆ ಇವರು..!

ಈ ಗೃಹಿಣಿ ಫಲ್ಗುಣಿ ದೋಷಿ. ಕಾಲಿಲ್ಲದವರಿಗೆ ಕೇವಲ ಒಂದು ರೂಪಾಯಿಗೆ ವ್ಹೀಲ್ ಚೇರ್ ಬಾಡಿಗೆ ನೀಡುವ ಮೂಲಕ ವಿಕಲಚೇತನರ ಬಾಳಿಗೆ ಊರುಗೋಲಾಗಿದ್ದಾರೆ. ಇವರು ಗುಜರಾತ್ ರಾಜ್ಯದ ವಡೋದರ ಜಿಲ್ಲೆಯ ಅಕೋಟ ಪಟ್ಟಣದ ನಿವಾಸಿ. ನಮ್ಮ ದೇಶದ ಬಹುತೇಕ ವಿಕಲಚೇತನರು ವ್ಹೀಲ್ ಚೇರ್ ಕೊಳ್ಳುವಷ್ಟೂ ಶಕ್ತರಲ್ಲ. ಆ ಕಾರಣದಿಂದಾಗಿಯೇ ಫಲ್ಗುಣಿ ದೋಷಿ ಕೇವಲ ಒಂದು ರೂಪಾಯಿಗೆ ವ್ಹೀಲ್ ಚೇರ್, ಕ್ರಚರ್ಸ್ ಬಾಡಿಗೆ ನೀಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿಕಲಚೇತನರಿಗೆ ಊರುಗೋಲು ಆಗಿದ್ದಾರೆ.
ಫಲ್ಗುಣಿಯವರಿಗೆ ಈ ವೀಲ್ ಚೇರ್ ಯೋಚನೆ ಹೊಳೆದದ್ದಾದರೂ ಹೇಗೆ ಎನ್ನುವುದೇ ಕುತೂಹಲ. ಅವರು ಒಮ್ಮೆ ತಮ್ಮ ಗೆಳತಿಯ ಮನೆಗೆ ಹೋಗಿದ್ರಂತೆ. ಅಲ್ಲಿ ಅವರ ಅಜ್ಜಿಯ ವ್ಹೀಲ್ ಚೇರ್, ವಾಕರ್ ಎಲ್ಲ ಮೂಲೆಯಲ್ಲಿ ಹಾಳು ಬಿದ್ದಿದ್ದನ್ನು ನೋಡಿದರಂತೆ. ಆ ಉಪಕರಣಗಳು ಅವರಿಗೆ ಉಪಯೋಗವಾಗದ ಕಾರಣ, ಏನು ಮಾಡುವುದೆಂಬ ಯೋಚನೆಯಲ್ಲಿದ್ದರು. ಫಲ್ಗುಣಿಯರಿಗೆ ಆಗ ಅದನ್ನೇ ರಿಸೈಕಲ್ ಮಾಡಬಾರದೇಕೆ ಎಂಬ ಐಡಿಯಾ ಹೊಳೆಯಿತಂತೆ. ಅಂದಿನಿಂದಲೇ ಬಳಸಿ ಮೂಲೆಗೆ ಹಾಕಿದ್ದ ವ್ಹೀಲ್ಚೇರ್ಗಳನ್ನು, ಸುತ್ತಮುತ್ತಲಿನ ಪರಿಚಯದವರ ಮನೆಯಿಂದ ಸಂಗ್ರಹಿಸಿದರಂತೆ.
ಇನ್ನು ಸಂಗ್ರಹಿಸಿದ ಸಲಕರಣೆಗಳನ್ನು ಮರು ಬಳಕೆ ಮಾಡಿ ಆರ್ಥೋಪೆಡಿಕ್ ಉಪಕರಣ, ವ್ಹೀಲ್ ಚೇರ್, ವಾಕರ್ಗಳನ್ನು ತಯಾರಿಸಿದರು. ಅದನ್ನು ಅಗತ್ಯವಿರುವ ವಿಕಲಚೇತನರಿಗೆ ತಲುಪಲು ಒಂದು ದಿನಕ್ಕೆ ಒಂದು ರೂಪಾಯಿಗೆ ಬಾಡಿಗೆ ನೀಡಿ ಸಾಕಷ್ಟು ಜನರ ಬಾಳಲ್ಲಿ ಬೆಳಕಾದರು. ಹವ್ಯಾಸಕ್ಕಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಫಲ್ಗುಣಿಯವರಿಗೆ ಅನೇಕ ಸ್ನೇಹಿತರು ಸಹಾಯಹಸ್ತ ಚಾಚಿದರು. ಅದನ್ನೇ ವಿಸ್ತರಣೆ ಮಾಡಲು ಯೋಚಿಸಿ ‘ಹೆಲ್ಪಿಂಗ್ ಹ್ಯಾಂಡ್’ ಎಂಬ ಸಂಸ್ಥೆ ಸ್ಥಾಪಿಸಿದರು. 1999ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇದುವರೆಗೂ ಅನೇಕ ವಿಕಲಚೇತನರ ಜೀವನಕ್ಕೆ ನೆರವಾಗಿದೆ.


‘ಹೆಲ್ಪಿಂಗ್ ಹ್ಯಾಂಡ್ ’ ನಲ್ಲಿ ವ್ಹೀಲ್ ಚೇರ್ ಮಾತ್ರವಲ್ಲದೆ, ಟ್ಯಾನ್ಸೋರ್ಟ್ ಚೇರ್, ವಾಕರ್, ಕೇನ್ಸ್, ಕಾಲು ಮತ್ತು ಕುತ್ತಿಗೆಯ ಪಟ್ಟಿಗಳು ಬಾಡಿಗೆಗೆ ಸಿಗುತ್ತವೆ. ಈ ಸಂಸ್ಥೆ ಆರಂಭವಾಗಿ 16 ವರ್ಷಗಳಾಗಿವೆ. ಈವರೆಗೂ ಸಾವಿರಕ್ಕೂ ಅಧಿಕ ಉಪಕರಣಗಳನ್ನು ಬಾಡಿಗೆಗೆ ನೀಡಲಾಗಿದೆ. ಜನರಿಗೆ ಸಹಾಯವಾಗಲಿ ಎಂಬ ಕಾರಣದಿಂದ ಮಾಡಿದ ಈ ಪ್ರಯೋಗದಿಂದ ಇತ್ತೀಚೆಗೆ ಕೊಂಚ ಲಾಭವೂ ಬರಲಾರಂಭಿಸಿದೆ. ಹವ್ಯಾಸವಾಗಿ ಬೆಳೆದ ಯೋಜನೆ ಸಾಕಷ್ಟು ಜನರಿಗೆ ಉಪಯೋಗವಾಗಿದೆ.
ವಡೋದರಾದ ಸುತ್ತಲಿನ ಸಾಕಷ್ಟು ಜನರ ಬಾಯಿಯಿಂದ ಬಾಯಿಗೆ ಹರಡಿ ‘ ಹೆಲ್ಪಂಗ್ ಹ್ಯಾಂಡ್ ’ ಸಂಸ್ಥೆ ಕೆಲಸ ಜನಜನಿತವಾಗಿದೆ. ಮೊದಲೆಲ್ಲ ಉಪಕರಣಗಳನ್ನು ಉಚಿತವಾಗಿಯೇ ನೀಡುತ್ತಿತ್ತು. ಆದರೆ ಉಚಿತವಾಗಿ ನೀಡಿದಾಗ ಜನರಿಗೆ ಅದರ ಮಹತ್ವ ಗೊತ್ತಾಗುತ್ತಿರಲಿಲ್ಲ ಎಂದೆನಿಸಿ, ಈಗ ಒಂದು ರೂಪಾಯಿಗೆ ಬಾಡಿಗೆ ನೀಡುವುದನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಫಲ್ಗುಣಿ ದೋಷಿ. ವಡೋದರಾ ಮತ್ತು ಸುತ್ತಮುತ್ತಲ ಅನೇಕರು ತಮ್ಮ ಮನೆಯಲ್ಲಿರುವ ಬಳಸಿದ ಉಪಕರಣಗಳನ್ನು ದಾನವಾಗಿಯೂ ಈ ಸಂಸ್ಥೆಗೆ ನೀಡುತ್ತಿದ್ದಾರೆ.
ಎಷ್ಟೋ ಮಹಿಳೆಯರು ಮನೆಯಲ್ಲಿ ಕುಳಿತು ಯಾವ ರೀತಿಯ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯ ಎಂಬ ಬಗ್ಗೆ ಯೋಚಿಸುತ್ತಾರೆ. ಅಂಥವರು ನಮ್ಮ ಯೋಜನೆಯಿಂದ ಬೇರೆಯವರಿಗೆ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ಯೋಚಿಸಿದರೆ, ಹೊಸ ಐಡಿಯಾಗಳು ರೂಪುಗೊಳ್ಳುತ್ತವೆ. ಅದಕ್ಕೆ ಫಲ್ಗುಣಿಯ ದೋಷಿಯೇ ಉತ್ತಮ ನಿದರ್ಶನ.
ಒಟ್ಟಾರೆ ಮಹಿಳೆ ಏನು ತಾನೇ ಮಾಡಲು ಸಾಧ್ಯ ಎಂದು ಹೀಯಾಳಿಸುವವರ ಬಾಯಿಗೆ ಬೀಗ ಹಾಕಿ ಸಾವಿರಕ್ಕೂ ಅಧಿಕ ವಿಕಲಚೇತನರಿಗೆ ಆಸರೆಯಾಗಿದ್ದಾರೆ ಫಲ್ಗುಣಿ. ಸಾಮಾನ್ಯ ಗೃಹಿಣಿಯೂ ಸಾಧನೆಯ ಹಾದಿಯಲ್ಲಿ ಸಾಗಲು ಸ್ಫೂರ್ತಿಯ ಶಕ್ತಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...