ಜಲಕೃಷಿಯಲ್ಲಿ ತೊಡಗಿದ ಇಂಜಿನಿಯರ್ ಸಾಧನೆ..!

Date:

ಜಲಕೃಷಿಯಲ್ಲಿ ತೊಡಗಿದ ಇಂಜಿನಿಯರ್ ಸಾಧನೆ..!

ನೀವು ಈ ತೋಟಕ್ಕೆ ಎಂಟ್ರಿ ನೀಡಿದ್ರೆ ಸಾಕು ಹಸಿರು ನಿಮ್ಮನ್ನ ಸ್ವಾಗತಿಸುತ್ತದೆ. ಇಲ್ಲಿನ ಪರಿಸರ ನಿಮ್ಮನ್ನ ಮೂಕವಿಸ್ಮಿತರನ್ನಾಗಿಸುತ್ತದೆ. ಮಣ್ಣಿಲ್ಲದೆ, ನೀರಿನ ಸಹಾಯದಿಂದ ಪೈನಾಪಲ್ ಗಿಡಗಳು ಬೆಳೆದಿರುವ ರೀತಿ ನೋಡಿದರೆ ಮೂಗಿನ ಮೇಲೆ ಬೆರಳು ಇಡುವಂತೆ ಮಾಡುತ್ತದೆ. ಇದನ್ನೇ ಜಲಕೃಷಿ- ಅಂದರೆ hydroponics ಅಂತಾ ಕರೀತಾರೆ. ಅಲ್ಲದೆ ಇಲ್ಲಿ ಬೆಳೆದ ಸಸಿಗಳು ಬೇರೆ ಬೇರೆ ರಾಜ್ಯಗಳಿಗೂ ಸರಬರಾಜು ಆಗುತ್ತಿವೆ.

ಇಲ್ಲಿ ಬೆಳೆಯುವ ಬೆಳೆಗೆ ಧೂಳು ತಗಲಬಾರದು ಎಂದು, ಇದರ ಮಾಲೀಕ ಸುತ್ತಲೂ ಪ್ಲಾಸ್ಟಿಕ್ ರೀತಿಯ ಪರದೆ ನಿರ್ಮಿಸಿದ್ದಾರೆ. ಇದರಿಂದ ಗಿಡಗಳಿಗೆ ಬೇಕಾಗುವಷ್ಟು ಸೂರ್ಯನ ಬೆಳಕು ಸಿಗುತ್ತದೆ. ಈ ತೋಟದಲ್ಲಿ ಅಜ್ವಾನ್, ಸೇರಿದಂತೆ ಇನ್ನು ಹಲವು ಮಸಾಲೆ ಪದಾರ್ಥಗಳನ್ನು ಇವರು ಬೆಳೆಸಿದ್ದಾರೆ. ಅಂದಹಾಗೆ ಈ ತೋಟದ ರೂವಾರಿ ಇವರೇ, ಹೆಸರು ಶ್ರೀರಾಮ್ ಗೋಪಾಲ್.
ಶ್ರೀರಾಮ್ ಗೋಪಾಲ್ ಅವರು ಮೂಲತಃ ತಮಿಳುನಾಡಿನವರು. ಚೆನ್ನೈನಲ್ಲಿ ವಾಸ. ಇಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡಿದ್ದು, ಕೈ ತುಂಬಾ ಸಂಬಳದ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಹೊಸದನ್ನ ಮಾಡುವ ಆಶಯನ್ನು ಹೊಂದಿದ್ದರಿಂದ ಜಲಕೃಷಿ ಬಗ್ಗೆ ಅಧ್ಯಯನ ಮಾಡಲು ತೊಡಗಿದರು. ಹೆಚ್ಚಾಗಿ ವಿದೇಶದಲ್ಲಿ ಜಲಕೃಷಿ ಪ್ರಸಿದ್ಧಿ. ಅದನ್ನು ಭಾರತದಲ್ಲಿ ಕಾರ್ಯರೂಪಕ್ಕೆ ತಂದರೆ ಹೇಗೆ ಎಂದು ಇಂದು ಭಾರತದಲ್ಲಿ ಜಲಕೃಷಿಗೆ ಸಂಬಂಧಿಸಿದ ದೊಡ್ಡ ಸಮೂಹವನ್ನೇ ಹುಟ್ಟುಹಾಕಿದ್ದಾರೆ.
ಚೆನ್ನೈನಲ್ಲಿ ಶ್ರಿರಾಮ್ ಗೋಪಾಲ್ ಒಂದು ಕಂಪನಿಯನ್ನ ಹುಟ್ಟುಹಾಕಿದ್ದಾರೆ. ಈ ಕಂಪನಿ ಮೂಲಕ ಜಲಕೃಷಿಯನ್ನು ಅಭಿವೃದ್ಧಿಗೊಳಿಸುವುದು. ಅದರಲ್ಲೂ ರಾಸಾಯಿನಿಕ ಮುಕ್ತ ಸಸಿಗಳನ್ನು ಬೆಳೆಸಲು ಉತ್ತೇಜಿಸುವುದು. ಅಂದರೆ, 2016-17ರಲ್ಲಿ ಈ ಕಂಪನಿ ಸುಮಾರು 2 ಕೋಟಿ ವೆಚ್ಚದಲ್ಲಿ ಆರಂಭವಾಯಿತು. ಸದ್ಯ ಇದರ ಮಾರುಕಟ್ಟೆ ಮೌಲ್ಯ ತ್ರಿಬಲ್ ಆಗಿದೆ.


ಶ್ರೀರಾಮ್ ಗೋಪಾಲ್ ಅವರು ಹೇಳುವಂತೆ ಕಳೆದ ವರ್ಷ ಮೂರು ನೂರು ಪ್ರತಿ ಶತದಷ್ಟು ವ್ಯಾಪಾರ ವೃದ್ಧಿಯಾಗಿದೆ. 2015ರಲ್ಲಿ 38 ಲಕ್ಷ ವ್ಯವಹಾರ ಮಾಡಿದ್ರೆ, ಕಳೆದ ವರ್ಷ ಸುಮಾರು 2 ಕೋಟಿವಹಿವಾಟು ನಡೆಸಿದ್ದಾಗಿ ತಿಳಿಸಿದ್ದಾರೆ. ಇನ್ನು ಈ ವರ್ಷ ಇಲ್ಲಿಯವರೆಗೆ ಸುಮಾರು 6 ಕೋಟಿ ರೂ. ವಹಿವಾಟು ನಡೆಸಿದ್ದಾರಂತೆ.
ಇನ್ನು, ನನ್ನದೆ ಮನಸ್ಥಿತಿಯನ್ನು ಹೊಂದಿದ ಯುವಕರನ್ನು ಕೂಡಿಸಿಕೊಂಡು ಕೊನೆಗೂ ಕಂಪನಿಯನ್ನು ಆರಂಭಿಸಿದೆವು. ಇದರ ಪರಿಣಾಮ ಎಲ್ಲರೂ ಸುಮಾರು 5 ಲಕ್ಷ ರೂ. ತೊಡಗಿಸಿದೆವು. ಕಂಪನಿಯ ಬೆಳವಣಿಗೆ ಕಂಡು ನಮ್ಮ ಸಹೋದ್ಯೋಗಿಗಳು ಸಹ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ತಯಾರಾದ್ರು. ಇದರ ಪರಿಣಾಮವೇ ಇಂದು ನಾವು ನಂಬರ್ 1 ಸ್ಥಾನಕ್ಕೇರಲು ಸಾಧ್ಯವಾಗಿದೆ.
ಒಟ್ಟಾರೆ, ಜಲಕೃಷಿಯನ್ನು ಮನೆಯಲ್ಲಿ ಇದ್ದ ಪೈಪುಗಳ ಸಹಾಯದಿಂದ ಮನೆಯ ಶೃಂಗಾರ ಹಾಗೂ ಅಪ್ಪನ ಕಾರ್ಖಾನೆಯ ಹೊರಗೆ ಇದರ ಪ್ರಯೋಗ ಮಾಡಿದ ಶ್ರೀರಾಮ್ ಯಶಸ್ಸು ಕಂಡು ಇದರಲ್ಲಿ ಜೀವನ ಕಂಡುಕೊಂಡಿದ್ದಾರೆ. ಇವರು ಇತರರಿಗೂ ಮಾರ್ಗದರ್ಶಕರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...