ಸಾವಿನ ನಂತರ ಏನು ಎಂದು ಕಾಡುವ ಪ್ರಶ್ನೆಗೆ ಉತ್ತರ ..!

Date:

ಸಾವಿನ ನಂತರ ಏನು ಎಂದು ಕಾಡುವ ಪ್ರಶ್ನೆಗೆ ಉತ್ತರ ..!

ಸಾವಿನ ಬಳಿಕ ನಮ್ಮ ಮುಂದಿನ ಗತಿ ಏನು? ಅಂತ್ಯಸಂಸ್ಕಾರ ನಡೆಯುತ್ತೆ.‌ ಹತ್ತಿರದವರು ನಾಲ್ಕು ಹನಿ ಕಣ್ಣೀರು ಹಾಕಿ ಸುಮ್ನಾಗ್ತಾರೆ. ಆದ್ರೆ ಎಲ್ಲರನ್ನೂ ಕಾಡೋ ಪ್ರಶ್ನೆ ನಮ್ಮ ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತೆ? ಏನ್ ಮಾಡುತ್ತೆ ಅನ್ನೋದು….! ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೇಹವನ್ನು ಬಿಟ್ಟ ಆತ್ಮ ಬೇರೆಡೆಗೆ ಪ್ರಯಾಣ ಆರಂಭಿಸುತ್ತದೆ. ಭೂಮಿಯ ಮೇಲೆ ಎಲ್ಲಾ ಕೆಲಸವನ್ನು ಮುಗಿಸಿದ ತೃಪ್ತ ಆತ್ಮಗಳು ಅವುಗಳ ಪಾಪ-ಪುಣ್ಯದ ಆಧಾರದಲ್ಲಿ ಸ್ವರ್ಗ ಅಥವಾ ನರಕ ಸೇರುತ್ತವೆ.
ಅತೃಪ್ತ ಆತ್ಮಗಳು, ಯಾವುದಾದರು ವಸ್ತು, ವಿಷಯಗಳ ಮೇಲೆ ಮೋಹ-ಆಸೆ ಬೆಳೆಸಿಕೊಂಡ ಅತೃಪ್ತ ಆತ್ಮಗಳು ಪ್ರಯಾಣ ಮಾಡಲ್ವಂತೆ…!


ಆತ್ಮಕ್ಕೆ ಹಾನಿ ಮಾಡಲಾಗಲ್ಲ ಎಂಬ ನಂಬಿಕೆ ಇದೆ ಯಾದರೂ ಅವುಗಳ ಪಾಪ-ಪುಣ್ಯಗಳಿಗೆ ಅನುಗುಣವಾಗಿ ಸ್ವರ್ಗ-ನರಕಗಳಲ್ಲಿ ಸುಖ ಅಥವಾ ಶಿಕ್ಷೆ ‌ಅನುಭವಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.

ಮಾಡುವ ಕೆಲಸಗಳು ಬಾಕಿ ಇರುವ ಆತ್ಮಗಳು ಪುನಃ ಹುಟ್ಟುತ್ತವಂತೆ.  ಒಂದು ಜನ್ಮದಲ್ಲಿ ಯಾವುದಾದರು ನಿರ್ದಿಷ್ಟ ಸಾಧನೆ ಹಾದಿಯಲ್ಲಿ ಸಾಗಿ , ಬಹಳ ಪ್ರಯತ್ನದ ಬಳಿಕ ಆ ಸಾಧನೆ ಮಾಡಲಾಗದೆ ಸಾವನ್ನಪ್ಪಿದ ಆತ್ಮಗಳಿಗೆ ಮತ್ತೊಂದು ಅವಕಾಶ ಸಿಗುತ್ತದೆಯಂತೆ.

ಅದೇರೀತಿ ಇನ್ನು ಕೆಲವು ಆತ್ಮಗಳು ತಾನು ಇದ್ದ ದೇಹ ಮತ್ತು ಜೀವಕ್ಕೆ ತೊಂದರೆ ಕೊಟ್ಟ ವ್ಯಕ್ತಿಗಳ ಮೇಲೆ ಪ್ರತಿಕಾರ ತೀರಿಸಿಕೊಳ್ಳುವ ನಂಬಿಕೆ ಸಹ ಉಂಟು.


ಇನ್ನು ಮೋಕ್ಷದ ವಿಚಾರ ಬರುವುದಾದರೆ, ಜ್ಞಾನಿಗಳು ಹಾಗೂ ಆತ್ಮದ ಬಗ್ಗೆ ಅರಿವುಳ್ಳವರು ಮೋಕ್ಷದ ಬಗ್ಗೆ ಚಿಂತನೆ ಮಾಡ್ತಾರೆ. ಮೋಕ್ಷ ಎನ್ನುವುದು ಹುಟ್ಟು ಸಾವುಗಳಿಲ್ಲದ ಸ್ಥಿತಿ. ಅದನ್ನು ಪಡೆಯುವುದು ಅಷ್ಟು ಸುಲಭವಲ್ಲ. ಇದನ್ನು ದಯಪಾಲಿಸುವ ಶಕ್ತಿ ಇರೋದು ಮಹಾ ವಿಷ್ಣುಗೆ ಮಾತ್ರ.

ಒಳ್ಳೆಯ ಕೆಲಸ , ಒಳ್ಳೆಯ ಚಿಂತನೆಗಳನ್ನು ಮಾಡುವ ಆತ್ಮಗಳು ಸದ್ಗತಿ ಹೊಂದುತ್ತವೆ. ಇನ್ನೊಬ್ಬರಿಗೆ ತೊಂದ್ರೆ ಕೊಟ್ಟು ತಮ್ಮ‌ ಲಾಭದ ಬಗ್ಗೆಯೇ ಯೋಚಿಸೋ ಕೆಟ್ಟ ಆತ್ಮಗಳು ತಕ್ಕ ಶಿಕ್ಷೆ ಅನುಭವಿಸ್ತವಂತೆ.

ಜಾಸ್ತಿ ಅನ್ನ ತಿಂದ್ರೆ ಆರೋಗ್ಯಕ್ಕೆ ಹಾನಿಕರವಂತೆ..!

ನೀವೇನಾದರೂ ಅತಿಯಾಗಿ ಅನ್ನ ತಿಂತೀರಾ.. ಹಾಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದಿರಿ.. ಯಾಕಂದರೆ ನೂತನ ಸಂಶೋಧನೆಯ ಪ್ರಕಾರ ಅತಿ ಹೆಚ್ಚು ಅನ್ನ ತಿನ್ನುವುದು ಆರೋಗ್ಯಕ್ಕೆ ಹೆಚ್ಚಿನ ಅಪಾಯವಂತೆ.

ಹೌದು, ಅತಿಯಾಗಿ ಅನ್ನ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗ ಬಹುದು.. ಜೊತೆಗೆ ಇದೇ ಕಾಯಿಲೆಯಿಂದ ಸಾಯುವ ಸಂಭವವು ಹೆಚ್ಚು ‌ಎಂದು ನೂತನ ಸಂಶೋಧನೆಯೊಂದು ಎಚ್ಚರಿಸಿದೆ. ಬೆಳೆಯಲ್ಲಿ ನೈಸರ್ಗಿಕವಾಗಿ ಸಂಭವಿಸುವ ಆರ್ಸೆನಿಕ್ (ರಾಸಾಯನಿಕ ಅಂಶ) ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಅಕ್ಕಿ ಸೇವೆನೆಯಲ್ಲಿ ಶೇ 25ರೊಂದಿಗೆ ಬ್ರಿಟಬ್ ವಾದಿಗಳು ಅಗ್ರಸ್ಥಾನದಲ್ಲಿದ್ದಾರೆ. ಬ್ರಿಟನ್ ವಾಸಿಗಳು ಹೃದಯ ರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವೂ ಸಹ ಶೇ. 6 ರಷ್ಟು ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಇನ್ನೂ ಬೆಳೆಯಲ್ಲಿ ಸ್ವಾಭಾವಿಕವಾಗಿ ಒಟ್ಟುಗೂಡುವ ಕೆಮಿಕಲ್​ನಿಂದ ಅನಾರೋಗ್ಯ, ಆಹಾರ ಸಂಬಂಧಿತ ಕ್ಯಾನ್ಸರ್​ ಮತ್ತು ಲಿವರ್​ ಕ್ಯಾನ್ಸರ್​ ಸಂಭವಿಸುವ
ಸಾಧ್ಯತೆ ಹೆಚ್ಚಿದೆ. ಇನ್ನು ಗಂಭೀರ ಪ್ರಕರಣಗಳಲ್ಲಿ ಇದು ಸಾವನ್ನೂ ಉಂಟುಮಾಡಬಹುದು ಎಂದು ಹೇಳಲಾಗಿದೆ.‌

ಅಂದಹಾಗೆ ಅಕ್ಕಿ ಜಗತ್ತಿನಾದ್ಯಂತ ಪ್ರಧಾನ ಆಹಾರವಾಗಿದೆ, ಅಮೂಲ್ಯವಾದ ಕ್ಯಾಲೊರಿ ಮತ್ತು ಪೋಷಕಾಂಶಗಳನ್ನು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಅಕ್ಕಿಯನ್ನೇ ಅವಲಂಬಿಸಿದ್ದಾರೆ.

ಆದರೆ ಅಕ್ಕಿಯಲ್ಲಿರುವ ಆರ್ಸೆನಿಕ್​ನಿಂದಾಗಿ ಜಾಗತಿಕವಾಗಿ ವರ್ಷಕ್ಕೆ 50 ಸಾವಿರ ತಪ್ಪಿಸಬಹುದಾದಂತಹ ಅಕಾಲಿಕ ಮರಣಗಳು ಸಂಭವಿಸುತ್ತಿವೆ ಎಂದು ನೂತನ ಸಂಶೋಧನೆ ಎಚ್ಚರಿಸಿದೆ.

ಅಂದಹಾಗೆ ಆರ್ಸೆನಿಕ್​ ಸ್ವಾಭಾವಿಕವಾಗಿ ಮಣ್ಣಿನಲ್ಲಿ ಉತ್ಪತ್ತಿಯಾಗುತ್ತದೆ. ಆರ್ಸೆನಿಕ್ ಆಧಾರಿತ ಸಸ್ಯನಾಶಕಗಳು ಅಥವಾ ನೀರಾವರಿ ಉದ್ದೇಶಕ್ಕೆ ಬಳಸುವ ಟಾಕ್ಸಿನ್​ಯುಕ್ತ ನೀರಿನಲ್ಲಿ ಅರ್ಸೆನಿಕ್​ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ‌. ಜೊತೆಗೆ ಆಹಾರದೊಳಗೆ ಇದರ‌‌ ಅಂಶವು ಹೆಚ್ಚಾಗಿರುತ್ತದೆ.

ಭತ್ತ ಬೆಳೆಯಲು ನೀರಿನ ಪ್ರಮಾಣ ಅಧಿಕವಾಗಿ ಬೇಕಾಗಿರುವುದರಿಂದ ಬೆಳೆಯು ಮಣ್ಣಿನಲ್ಲಿರುವ ಆರ್ಸೆನಿಕ್​ ಅನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ. ವಿಶೇಷವಾಗಿ ಅಕ್ಕಿ ದುರ್ಬಲವಾಗಿರುತ್ತದೆ.

ಏಕೆಂದರೆ ಭತ್ತದ ಸಸ್ಯವು ಅದರ ಬೇರಿನ ಮೂಲಕ ಹೀರಿಕೊಳ್ಳುವ ಇತರ ರಾಸಾಯನಿಕಗಳನ್ನು ಆರ್ಸೆನಿಕ್​ ಸುಲಭವಾಗಿ ಅನುಕರಿಸುತ್ತದೆ. ಇದರಿಂದಾಗಿಯೇ ಟಾಕ್ಸಿನ್​ ಸಸ್ಯದ ರಕ್ಷಣೆಯನ್ನು ಕಡೆಗಣಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮ್ಯಾಂಚೆಸ್ಟರ್​ ಮತ್ತು ಸಾಲ್ಫೋರ್ಡ್​ ಯೂನಿವರ್ಸಿಟಿಯ ಸಂಶೋಧಕರು ಇಂಗ್ಲೆಂಡ್​ ಮತ್ತು ವೇಲ್ಸ್​ ವಾಸಿಗಳ ಅಕ್ಕಿ ಸೇವನೆಯ ಮೇಲೆ ಅಧ್ಯಯನ ಮಾಡಿದ್ದರು‌. ಈ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಇದರಿಂದ ಆರ್ಸೆನಿಕ್​ನಿಂದ ಉಂಟಾಗುವ ಹೃದಯರಕ್ತನಾಳದ ಕಾಯಿಲೆಗಳ ಹರಡುವಿಕೆ ಪತ್ತೆಯಾಗಿದೆ. ತಮ್ಮ ಅಧ್ಯಯನವು ಸೀಮಿತವಾಗಿದ್ದು, ಇದರಲ್ಲಿನ ಯಾವುದೇ ಲಿಂಕ್ ಅನ್ನು ಧೃಢೀಕರಿಸಲು ಹೆಚ್ಚಿನ ವಿಶೇಷ ತನಿಖೆಯ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೂ ಜನರು ಹೆಚ್ಚಿನ ಅಕ್ಕಿ ಸೇವನೆ ಮಾಡಬೇಡಿ ಎಂದು ಸಲಹೆ ನೀಡಿದೆ.

ಇದರ ಬದಲಾಗಿ ಧಾನ್ಯಕ್ಕಿಂತ ಹೆಚ್ಚಾಗಿ ಬಾಸ್ಮ ತಿಯಂತಹ ಆರ್ಸೆನಿಕ್ ಮಟ್ಟ ಕಡಿಮೆ ಇರುವ ಅಕ್ಕಿ ಪ್ರಭೇದಗಳನ್ನು ಆರಿಸಿಕೊಳ್ಳಿ ಎಂದು ಜನರಿಗೆ ಸಂಶೋಧಕರು ಶಿಫಾರಸು ಮಾಡಿದ್ದಾರೆ.

 

 

 

 

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...