ಗುಡ್ ನೈಟ್ : ಕನಸುಗಳ ಮತ್ತು ಭವಿಷ್ಯ..!

Date:

ಕನಸುಗಳು ಭವಿಷ್ಯ ಹೇಳುತ್ತವೆ ಅಂತ ನಿಮಗೆ ಈಗಾಗಲೇ ಗೊತ್ತಿದೆ…! ಬೆಳಗ್ಗಿನ ಜಾವ ಬಿದ್ದ ಕನಸುಗಳು ಅಂದೇ ನಿಜವಾಗುತ್ತವೆ, ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸುಗಳು 10 ದಿನದಲ್ಲಿ ನನಸಾಗುತ್ತವೆ, ಮಧ್ಯರಾತ್ರಿ ಬ್ರಹ್ಮ ಮುಹೂರ್ತದ ಮೊದಲು ಬಿದ್ದ ಕನಸುಗಳು ನನಸಾಗೋ ಸೂಚನೆ ನಿಮಗೆ 1 ತಿಂಗಳಲ್ಲಿ ಗೊತ್ತಾಗುತ್ತೆ ಎಂಬ ನಂಬಿಕೆ ಉಂಟು…!

ನಿಮಗೆ ಗೊತ್ತಾ ಯಾವ ಕನಸುಗಳು ಬಿದ್ದರೆ ಅದು ಶ್ರೀಮಂತರಾಗೋ ಸೂಚನೆ ಅಂತ…?


ಕನಸಲ್ಲಿ ದೇವರು, ದೇವಾಲಯ ಕಂಡರೆ ನಿಮ್ಮ ಅದೃಷ್ಟ ಬದಲಾಯಿತು ಅಂತಾನೇ ಅರ್ಥ..! ನೀವು ಶ್ರೀಮಂತರಾಗುವ ಕಾಲ ಹತ್ತಿರ ಬಂದಿರೋದು ಕನ್ಫರ್ಮ್.

ಸಣ್ಣ ಮಗು ನಡೆಯುತ್ತಿರುವಂತೆ ಕನಸು ಬಿದ್ದರೆ, ಕನಸಿನಲ್ಲಿ ಇರುವೆ ಸಾಲು ಕಂಡರೆ ನೀವು ಶ್ರೀಮಂತರಾಗುವ ಸೂಚನೆಯದು.

ಹೆಂಡ್ತಿ ಸುಳ್ಳು ಹೇಳಿದ ಕನಸು ಬಿದ್ದರೆ ನೀವು ಅವರನ್ನು ಇನ್ನಷ್ಟು ಪ್ರೀತಿಸಿ..! ಯಾಕಂದ್ರೆ ನೀವು ಶ್ರೀಮಂತರಾಗುವ ಸಮಯ ಹತ್ತಿರ ಬಂದಿದೆ…!

ಹಸು, ಹಸುವಿನ ಕರು, ಕರು ಹಾಲು ಕುಡಿಯುವ ಕನಸು ಬಿದ್ದರೆ ಅದು ನೀವು ಸಿರಿವಂತರಾಗೋ ಸೂಚನೆ.

ಹುಡುಗಿಯೊಬ್ಬಳು ತನ್ನ ಬಾಯ್‍ಫ್ರೆಂಡ್ ಭೇಟಿ ಆಗಲು ಹೋದಂತೆ ಕನಸು ಬಿದ್ದರೆ ನೀವು ಹೆಚ್ಚು ಹೆಚ್ಚು ದುಡ್ಡು ಎಣಿಸಲು ರೆಡಿಯಾಗಿ…! ನೀವು ಶ್ರೀಮಂತರಾಗೋದು ಗ್ಯಾರೆಂಟಿ.


ನಿಮಗೆ ಇಂಥಾ ಕನಸುಗಳು ಬಿದ್ದಿವೆಯಾ..? ಬಿದ್ದಿದ್ದರೂ, ಬಿದ್ದರೂ ನೀವಿನ್ನು ಹೇಳಲ್ಲ ಬಿಡಿ…!

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬೆಂಬಲವಾಗಿ ನಿಂತ ಉದ್ಯಮಿ..!

ಭಾರತೀಯ ಯಶಸ್ವಿ ಉದ್ಯಮಿಗಳ ಪೈಕಿ ಸುಮನ್ ಸೊಂತಾಲಿಯಾ ಅವರಿಗೆ ಅವರದ್ದೇ ಆದ ಸ್ಥಾನವಿದೆ. ಉದ್ಯಮದಲ್ಲಿ ಸುಮನ್ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದ್ರೆ ಯಶಸ್ಸಿನ ಹಾದಿಯ ಕಡೆಗಿನ ಪಯಣವನ್ನು ಮಾತ್ರ ಯಾವತ್ತೂ ಬಿಟ್ಟಿಲ್ಲ. ಪ್ರತಿಭೆ ಇದ್ದರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಠಿಣ ಪರಿಶ್ರಮ ಮಾಡಬೇಕು. ಇದೇ ನೀತಿಯಿಂದ ಸುಮನ್ ಸೊಂಥಾಲಿಯಾ ಅವರು ಯಶಸ್ಸು ಸಾಧಿಸಿದ್ದಾರೆ.
ಸಾಹಿಬಾಬಾದ್ ಮೂಲದ ಆಕೃತಿ ಕ್ರೀಯೇಷನ್ಸ್ ಸಂಸ್ಥಾಪಕಿಯಾಗಿರುವ ಸುಮನ್ ಅವರು, ತನ್ನ ಸಂಸ್ಥೆ ಮೂಲಕ ಮಹಿಳೆಯರ ಸಹಾಯಕ್ಕೆ ನಿಂತಿದ್ದಾರೆ. ಈ ಮೂಲಕ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸುಮನ್ ಸಹಕರಿಸುತ್ತಿದ್ದಾರೆ. ಸುಮನ್ ಆಕೃತಿ ಆರ್ಟ್ ಕ್ರಿಯೇಷನ್ ಅನ್ನು ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದಲೇ ಆರಂಭಿಸಿದ್ದರು.
ಶೋಷಿತ ಮತ್ತು ಕಷ್ಟದಲ್ಲಿರುವ ಮಹಿಳೆಯರನ್ನು ಹುಡುಕಲು ಸುಮನ್ ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಮನೆಗೆಲಸ ಮಾಡುತ್ತಿದ್ದ ಮಹಿಳೆಯರು, ಶುಶ್ರೂಷಕಿಯಾಗಿ ಕೆಲಸ ಮಾಡ್ತಿದ್ದವರನ್ನು ಸುಮನ್ ಆರಂಭದಲ್ಲಿ ಆಯ್ಕೆ ಮಾಡಿಕೊಂಡು ಅವರಿಗೆ ಕೆಲಸ ಮಾಡಿದ್ದರು. ಈ ಮೂಲಕ ಸುಮನ್ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲವಾಗಿ ನಿಂತ್ರು.

ಸುಮನ್ ಅವರು ಹುಟ್ಟಿದ್ದು, ಕೊಲ್ಕತ್ತಾದ ಅಪ್ಪಟ ಮಾರ್ವಾಡಿ ಕುಟುಂಬದಲ್ಲಿ.ಸಾಮಾನ್ಯವಾಗಿ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ಅನಿವಾರ್ಯವಾಗಿ ಕೈಬಿಡಬೇಕಾಗುತ್ತದೆ. ಸುಮನ್ ಅವರು ಇದರಿಂದ ದೂರವಾಗಿದ್ದರು. ಆದರೆ ಅವಕಾಶಗಳು ಬರುವ ತನಕ ತನ್ನ ಶ್ರಮವನ್ನು ಕೈಬಿಡಲಿಲ್ಲ. ಕಲಾಕೃತಿಗಳ ಮೂಲಕ ತನ್ನ ಶ್ರಮವನ್ನು ಸಾಯಲು ಬಿಡಲಿಲ್ಲ. ಬಿ.ಬಿ. ಸೊಂಥಾಲಿಯಾ ಅನ್ನುವ ಕಬ್ಬಿಣದ ವ್ಯಾಪಾರಿಯನ್ನು ಮದುವೆ ಆಗಿದ್ದೇ ತಡ, ಸುಮನ್ ಅದೃಷ್ಟ ಖುಲಾಯಿಸಿತು. ತನ್ನಲ್ಲಿದ್ದ ಕಲೆ ಹೊರಬರಲು ಪ್ರೇರಣೆ ಸಿಕ್ಕಿತ್ತು.
ಸುಮನ್ ಸ್ಕಿಲ್ ಇಂಡಿಯಾ ಟ್ರೈನಿಂಗ್ ಸೆಂಟರ್ ಅನ್ನು ಸಾಹಿಬಾಬಾದ್ನಲ್ಲಿ ಆರಂಭಿಸಿದ್ದಾರೆ. ಇಲ್ಲಿ ತಯಾರಾಗುವ ವಿಭಿನ್ನ ಕಲಾಕೃತಿಗಳಿಗೆ ವಿಶ್ವಾದಾದ್ಯಂತ ಬೇಡಿಕೆ ಇದೆ. ಇಲ್ಲಿರುವ ಡಿಸೈನರ್ಗಳ ಪೈಕಿ ಹೆಚ್ಚಿನವರು ಮಹಿಳೆಯರಾಗಿದ್ದು,ದೃಷ್ಟಿ ವಿಕಲಚೇತನರು ಕೂಡ ಇಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಸುಮನ್ ಅವರ ಕರಕುಶಲ ಉದ್ಯಮ ಆರಂಭಿಸುವ ಮೊದಲು ತನ್ನ ತಂಡದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯರನ್ನೇ ಆಯ್ಕೆ ಮಾಡಿಕೊಂಡಿದ್ದು, ಸುಮನ್ ಅವರ ದೂರದೃಷ್ಟಿಗೆ ಉದಾಹರಣೆಯಷ್ಟೆ.
ಸುಮನ್ ಅವರು ತನ್ನ ತಂಡವನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಂಡಿದ್ದರು. ತನ್ನಂತೆಯೇ ಮನೆಯಿಂದ ಹೊರಗಡೆ ಬಂದು, ವಿಶಾಲ ಪ್ರಪಂಚದಲ್ಲಿ ಯಶಸ್ಸು ಸಾಧಿಸುವ ಕನಸಿನಲ್ಲಿರುವ ಹಲವು ಮಹಿಳೆಯರಿಗೆ ನೆರವು ನೀಡಬೇಕು ಅನ್ನುವುದು ಸುಮನ್ ಅವರ ಆಶಯವಾಗಿತ್ತು. ಒಂದು ಬಾರಿ ಈ ನಿರ್ಧಾರ ಮಾಡಿದ ಮೇಲೆ ಸುಮನ್, ತನ್ನ ಆಯ್ಕೆಯಲ್ಲಿ ತುಂಬಾ ಜಾಗೃತೆವಹಿಸಿದ್ದರು. ಇದು ಅವರ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.

ಸದ್ಯ ಸುಮನ್ ಅವರು ಆರಂಭಿಸಿರುವ ಆಕೃತಿ ಕ್ರಿಯೇಷನ್ಸ್ ನಲ್ಲಿ ಸುಮಾರು 250 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 10 ಮಹಿಳೆಯರು ದೃಷ್ಟಿ ವಿಕಲಚೇತನರಾಗಿದ್ದಾರೆ. ಇವತ್ತು ಸುಮನ್ ಸಂಸ್ಥೆಯಲ್ಲಿ ತಯಾರಾದ ಕಲಾಕೃತಿಗಳು ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿವೆ. ರಾಷ್ಟ್ರಪತಿ ಭವನದಲ್ಲೂ ಆಕೃತಿ ಕ್ರಿಯೇಷನ್ಸ್ನ ಮೋಡಿ ಇದೆ.
ಸುಮನ್ ಸೊಂಥಾಲಿಯಾ ಇವತ್ತು ಯಶಸ್ವಿ ಉದ್ಯಮಿಯಾಗಿದ್ದಾರೆ ಅಂದರೆ ಅದರ ಹಿಂದೆ ಪರಿಶ್ರಮ ಮತ್ತು ದೃಢ ಸಂಕಲ್ಪವಿದೆ. ಸುಮನ್ ಯಶಸ್ಸಿನ ಕಥೆ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.

 

 

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...