ಅವರ ಸಾಧನೆ ಯುವಕರೇ ನಾಚುವಂತಹದು! ಅರವತ್ತು ದಾಟಿದರೂ ಬತ್ತಿಲ್ಲ ಉತ್ಸಾಹ! ಏನಾದರೂ ಸಾಧಸಿಲೇ ಬೇಕೆಂಬ ತುಡಿತ! ಸಾಧಿಸುವ ಛಲವಿದ್ದವನಿಗೆ ವಯಸ್ಸು ಲೆಕ್ಕಕ್ಕಿಲ್ಲ ಅನ್ನುವುದಕ್ಕೆ ತುಮಕೂರಿನ 68ರ ಯುವಕರೊಬ್ಬರು ನಿದರ್ಶನರಾಗಿದ್ದಾರೆ!
ಅವರು 68ರ ತರುಣ, ಹೆಸರು ಟಿ.ಕೆ ಆನಂದ್! ಬಾಲಾಜಿ ಎಂದೇ ಹೆಸರುವಾಸಿ ಆಗಿರುವ ಇವರು ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ 19ನೇ ಏಷ್ಯಾ ಮಾಸ್ಟರ್ಸ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 65-69 ವರ್ಷ ವಯೋಮಿತಿಯ 4*100 ಮೀಟರ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ತುಮಕೂರಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಪಂಜಾಬಿನ ಇಬ್ಬರು ಮತ್ತು ಹೊಸದಿಲ್ಲಿಯ ಒಬ್ಬ ಕ್ರೀಡಾಪಟುವಿನ ಜೊತೆಗೂಡಿ ಟಿ.ಕೆ ಆನಂದ್ ದೇಶ ಪ್ರತಿನಿಸಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ..
ಆನಂದ ಜಿಲ್ಲೆಯ ಪ್ರಥಮ 68 ವರ್ಷದ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಆನಂದ್ ದಿ. ಜಿ.ಎಸ್ ಕಣ್ಣಯ್ಯ, ಅಕ್ಕಯ್ಯ ದಂಪತಿಗಳ ಮಗನಾಗಿ ಡಿ.30, 1948ರಲ್ಲಿ ಜನಿಸಿದರು. ಚಿಕ್ಕಂದಿನಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಇವರು ಶಾಲಾ ಕಾಲೇಜು ದಿನಗಳಲ್ಲಿಯೇ ಚಾಂಪಿಯನ್ ಆಟಗಾರ!
1994ರಲ್ಲಿ ಹಿರಿಯರ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿ ಇದುವರಗೆ 15 ಬಾರಿ ರಾಜ್ಯ, ರಾಷ್ಟ್ರ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಮಿಂಚಿದ್ದಾರೆ.
ಆನಂದ ಹೆಜ್ಜೆಗಳು :
* 1995ರಲ್ಲಿ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ, ಕುರುಕ್ಷೇತ್ರದಲ್ಲಿ ಬೆಳ್ಳಿ ಪದಕ
*1996ರಲ್ಲಿ ಕಾನ್ಪುರದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಳಿ
*1997ರಲ್ಲಿ ಮಲೇಷ್ಯಾದಲ್ಲಿ ಬೆಳ್ಳಿ,
*2000ರಲ್ಲಿ ಬೆಂಗಳೂರಲ್ಲಿ ನಡೆದ ಏಷಿಯನ್ ಕ್ರೀಡಾಕೂಟದಲ್ಲಿ ಬೆಳ್ಳಿ
* 2001ರಲ್ಲಿ ವಿಶ್ವಚಾಂಪಿಯನ ಶಿಪ್ ನಲ್ಲಿ ಭಾಗಿ,
*2004ರಲ್ಲಿ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಕಂಚಿನಪದಕ,
*2013ರಲ್ಲಿ ಬೆಂಗಳೂರಲ್ಲಿ ನಡೆದ 34ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ,
* 2015ರ ಮಾರ್ಚನಲ್ಲಿ ಥೈಲ್ಯಾಂಡ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಂಸಾ ಪತ್ರ
*2015ರ ಮೇ ತಿಂಗಳಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ 100 ಮೀ, 200 ಮೀ ಓಟದಲ್ಲಿ ಕಂಚಿನ ಪದಕ
*2016 (ಇತ್ತೀಚೆಗೆ) 19ನೇ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಚಿನ್ನದ ಪದಕ ವಿಜೇತ.
ಎನಿವೇ ಹಿರಿಯ ವಯಸ್ಸಿನ ಇವರ ಸಾಧನೆ ಕಿರಿಯರಿಗೆ ಪ್ರೇರಣೆ.. ಶುಭಹಾರೈಕೆಗಳೊಂದಿಗೆ
- ರಘು ಭಟ್
POPULAR STORIES :
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..