ಸ್ನೇಹನಾ -ಪ್ರೀತಿನಾ ತಿಳಿಯುವುದು ಹೇಗೆ?
ನೀವು ಮತ್ತು ಅವಳು/ ಅವನು ಫ್ರೆಂಡ್ಸ್ ಅಂತ ಅನ್ಕೊಂಡಿರ್ತೀರಿ…! ಎಲ್ಲರತ್ರನೂ ನಾವಿಬ್ಬರು ಫ್ರೆಂಡ್ಸ್ ಅಂತ ಹೇಳಿಕೊಂಡಿರ್ತೀರಿ…! ನೀವು ಒಳ್ಳೆಯ ಫ್ರೆಂಡ್ಸೇ ಆಗಿರಬಹುದು..! ಆದರೆ, ನಿಮ್ಮಿಬ್ಬರ ನಡುವೆ ಇಂಥಾ ಭಾವನೆಗಳು ಮೂಡುತ್ತಿದ್ದರೆ, ನಿಮ್ಮಿಬ್ಬರ ಯೋಚನೆಗಳು ಹೀಗಿದ್ದರೆ ನೀವು ಖಂಡಿತಾ ಫ್ರೆಂಡ್ಸ್ ಅಲ್ಲ…! ಪ್ರೇಮಿಗಳು.
ಅವನು/ಳು ನನ್ನ ಫ್ರೆಂಡ್ ಅಂತ ನೀವು ಹೇಳ್ತಿರ್ತೀರಿ, ಅವ್ರೂ ಕೂಡ ಅದೇರೀತಿ ಹೇಳ್ತಿರ್ತಾರೆ..! ಆದ್ರೆ ಈ ಮಾತಿಂದ ಏನನ್ನೂ ನಂಬಕ್ಕಾಗಲ್ಲ..! ನಿಮ್ಮ ವರ್ತನೆ ನೋಡಿ ಬೇರೆಯವರು ನಿಮ್ಮ ನಡುವೆ ಏನೋ ನಡೀತಾ ಇದೆ ಅಂತ ಮಾತಾಡ್ಕೊಳ್ತಾ ಇದ್ರೆ? ನೀವಿಬ್ರು ಬರೀ ಫ್ರೆಂಡ್ಸ್ ಅಲ್ಲ, ಪ್ರೇಮಿಗಳು ಅನ್ನೋದು ಕನ್ಫರ್ಮ್..! ಆದಷ್ಟು ಬೇಗ ಪ್ರೀತಿ ನಿವೇಧಿಸಿಕೊಳ್ಳಿ..! ನೀವು ಕೇವಲ ಫ್ರೆಂಡ್ಸ್ ರೀತಿ ಇದ್ರೆ ನಿಮ್ಮ ಬಗ್ಗೆ ಯಾರಿಗೂ ಅಂಥಾ ಅನುಮಾನ ಬರೋಕೆ ಸಾಧ್ಯವೇ ಇಲ್ಲ…!
ನಿಮಗೆ ನಿಮ್ಮ ಆ ಫ್ರೆಂಡ್ ಮನೆಗೆ ಹೋಗ್ಬೇಕು..! ಅವರ ಮನೆಯವರ ಪರಿಚಯ ಮಾಡಿಕೊಳ್ಬೇಕು ಅಂತ ಅನಿಸ್ತಿದ್ರೆ ನಿಮ್ಮಲ್ಲಿ ಅವರ ಬಗ್ಗೆ ಸ್ನೇಹ ಮರೆಯಾಗಿ ಪ್ರೀತಿ ಮೊಳಕೆಯೊಡೆದಿದೆ ಎಂದೇ ಅರ್ಥ…!
ನಿಮ್ಮ ಫ್ರೆಂಡ್ಸ್ ಎನಿಸಿಕೊಂಡ ಅವನು ಅಥವಾ ಅವಳು ಏನೇ ಕೆಲಸ ಮಾಡಿದ್ರೂ ಅದರಲ್ಲಿ ಅವರಿಗೆ ಯಶಸ್ಸು ಸಿಗಬೇಕು ಅಂತ ನೀವು ಕಾಯ್ತಾ ಇದ್ದೀರ..? ಸದಾ ನಿಮ್ಮ ಯೋಚನೆ ಬಿಟ್ಟು ಅವರ ಯೋಚನೆ ನಿಮ್ಮದಾಗಿದೆಯೇ..? ಅವರು ಎಲ್ಲರಿಂದಲೂ ಹೊಗಳಿಸಿಕೊಳ್ತಿರಬೇಕು, ಯಾವತ್ತೂ ಅವರಿಗೆ ಕಷ್ಟ ಬರಬಾರದು ಎಂದು ವಿಶೇಷ ಕಾಳಜಿ ನಿಮಗಿದೆಯೇ? ಹಾಗಾದ್ರೆ ಡೌಟೇ ಬೇಡ ಕಣ್ರೀ ನಿಮ್ಮಲ್ಲಿರುವುದು ಸ್ನೇಹವಲ್ಲ ಪ್ರೀತಿ.
ಅವರಿಗಾಗಿ ನೀವು ನಿಮ್ಮನ್ನು ಬದಲಾಯಿಸಿಕೊಳ್ಳೋಕೆ ಸಿದ್ಧರಿದ್ದೀರ..? ಅವರ ಗಮನ ಬೇರೆಯವರ ಕಡೆ ಹೋಗ್ತಿದೆ ಅಂತ ಅನಿಸಿದಾಗ ನಿಮಗೆ ಕೋಪ ಬರುತ್ತಾ..? ನಿಮ್ಮ ಜೀವನದ ಎಲ್ಲಾ ವಿಷಯಗಳನ್ನು ಅವರ ಜೊತೆ ಹಂಚಿಕೊಳ್ತಾ ಇದ್ದೀರಾ? ಹಾಗಾದ್ರೆ ಲವ್ ಆಗಿರೋದು ಕನ್ಫರ್ಮ್…!
ಹೀಗೆಲ್ಲಾ ಆಗ್ತಿದೆಯಾ…? ಒಮ್ಮೆ ಆ ನಿಮ್ಮ ಫ್ರೆಂಡ್‍ಗೂ ಇದನ್ನು ಶೇರ್ ಮಾಡಿ..ಯಾವುದಕ್ಕೂ ಆದಷ್ಟು ಬೇಗ ಪ್ರಪೋಸ್ ಮಾಡಿ… ಒಳ್ಳೇದಾಗ್ಲಿ.
ಬಾಕ್ಸಿಂಡ್ ಡೇ ಸೋಲಿಗೆ ಆಸೀಸ್ ನಾಯಕ ಕೊಟ್ಟ ಕಾರಣ ಏನ್ ಗೊತ್ತಾ?
: ಬ್ಯಾಟಿಂಗ್‌ನಲ್ಲಿ ರನ್ ಗಳಿಸದೇ ಹೋದದ್ದು ಮತ್ತು ಕಳಪೆ ಕ್ಷೇತ್ರರಕ್ಷಣೆಯೊಂದಿಗೆ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇ ಟೀಮ್ ಇಂಡಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ)ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಆಸೀಸ್ ನಾಯಕ ಟಿಮ್ ಪೇಯ್ನ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ಭಾರತ ತಂಡದ ಬೌಲಿಂಗ್ ವಿಭಾಗದ ಶಿಸ್ತಿನ ದಾಳಿಯನ್ನು ಕೊಂಡಾಡಿದ ಆಸ್ಟ್ರೇಲಿಯಾ ತಂಡದ ನಾಯಕ, ಟೀಮ್ ಇಂಡಿಯಾ ತನ್ನ ಯೋಜನೆ ತಕ್ಕಂತೆ ಬೌಲಿಂಗ್ ಮಾಡಿ ಯಶಸ್ಸು ಕಂಡಿತು ಎಂದಿದ್ದಾರೆ.
“ಭಾರತ ತಂಡ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದೆ. ತಂಡದ ಶಿಸ್ತನ್ನು ಮೆಚ್ಚಲೇ ಬೇಕು. ನಮ್ಮ ಬ್ಯಾಟ್ಸ್‌ಮನ್‌ಗಳು ಜೊತೆಯಾಟಗಳನ್ನು ಕಟ್ಟುವಲ್ಲಿ ವಿಫಲರಾದರು. ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಅವರ ಸ್ಟಂಪ್‌ಗೆ ಗುರಿಯಿಟ್ಟು ಬೌಲಿಂಗ್ ಮಾಡಿದರು. ಈ ಮೊದಲೇ ಹೇಳಿದಂತೆ ಭಾರತ ತಂಡ ತನ್ನ ಯೋಜನೆಗಳಿಗೆ ತಕ್ಕಂತೆ ಬೌಲಿಂಗ್ ಮಾಡುತ್ತಿದೆ. ಹೀಗಾಗಿ ಸ್ಟೀವ್ ಕೂಡ ಹೆಚ್ಚು ಹೊತ್ತು ಬ್ಯಾಟ್ ಮಾಡಲು ಸಾಧ್ಯವಾಗಿಲ್ಲ. ಅವರು ಶೀಘ್ರವೇ ಲಯಕ್ಕೆ ಮರಳುವ ಅಗತ್ಯ ತಂಡಕ್ಕಿದೆ,” ಎಂದು ಪಂದ್ಯದ ಬಳಿಕ ಮಾತನಾಡಿದ ಟಿಮ್ ಪೇಯ್ನ್ ವಿವರಿಸಿದ್ದಾರೆ.

“ಆಪತ್ತನ್ನು ಎದುರಿಸದೇ ಇದ್ದರೆ ಫಲ ಸಿಗುವುದಿಲ್ಲ. ಆಟದ ಸ್ವಭಾವ ಇರುವುದೇ ಹಾಗೆ. ಪ್ರತಿಯೊಬ್ಬರು ಕೂಡ ಇದನ್ನು ವಿಭಿನ್ನ ರೀತಿಯಲ್ಲಿ ಮಾಡಿದ್ದಾರೆ. ಮ್ಯಾಥ್ಯೂ ವೇಡ್ ಸ್ವೀಪ್ ಹೊಡೆತಗಳನ್ನು ಆಡಿದರು. ಉಳಿದವರು ಕಾಲುಗಳನ್ನು ಹೆಚ್ಚು ಬಳಕೆ ಮಾಡಿದರು. ಕ್ಯಾಮರೂನ್ ಗ್ರೀನ್ ಆಫ್ ಸ್ಪಿನ್ನರ್ ಅಶ್ವಿನ್ ಎದುರು ಅಟ್ಯಾಕಿಂಗ್ ಆಟವಾಡಲಿಲ್ಲ. ಒಟ್ಟಾರೆ ಅಶ್ವಿನ್ ಎದುರು ಉತ್ತಮವಾಗಿಯೇ ಆಡಿದೆವು. ಪ್ರತಿಯೊಬ್ಬರಲ್ಲೂ ಯೋಜನೆಗಳಿವೆ. ಅದರ ಬಗ್ಗೆ ಆತ್ಮವಿಶ್ವಾಸವೂ ಇದೆ,” ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜನವರಿ 7ರಂದು ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಬೇಕಿದೆ. ಆದರೆ, ಅಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಲ್ಬೋರ್ನ್‌ನಲ್ಲೇ 3ನೇ ಟೆಸ್ಟ್ ಪಂದ್ಯ ಆಯೋಜನೆಯಾಗುವ ಸಾಧ್ಯತೆಯೂ ದಟ್ಟವಾಗಿದೆ.