ಸಿಡ್ನಿ: 2020ಕ್ಕೆ ಗುಡ್‌ಬೈ ಹೇಳಿರುವ ಜಗತ್ತು, 2021ನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಅತ್ಯಂತ ವಿಜೃಂಭಣೆಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ.
ಹೊಸ ವರ್ಷಕ್ಕೆ ಆಸ್ಟ್ರೇಲಿಯಾ ತನ್ನ ರಾಷ್ಟ್ರಗೀತೆಯಲ್ಲಿ ಒಂದು ಪದವನ್ನು ಬದಲಿಸಿದ್ದು, ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಸರ್ಕಾರದ ನಿರ್ಧಾರ ಜಾಗತಿಕ ಗಮನ ಸೆಳೆದಿದೆ.
ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಎರಡನೇ ಸಾಲಿನಲ್‌ಲಿ ಒಂದು ಪದವನ್ನು ತೆಗೆದು ಮತ್ತೊಂದು ಪಪದವನ್ನು ಸೇರಿಸಲಾಗಿದ್ದು, ಹೊಸ ವರ್ಷದಲ್ಲಿ ಈ ನಿರ್ಧಾರ ಕುತೂಹಲ ಕೆರಳಿಸಿದೆ.
ಮಾರಕ ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಮತ್ತು ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಸಂದರ್ಭದಲ್ಲಿ ದೇಶದ ಜನತೆ ತೋರಿರುವ ಅಭೂತಪೂರ್ವ ಏಕತೆಯನ್ನು ಗೌರವಿಸಲು ಕೈಗೊಂಡಿರುವ ಇರ್ಣಯ ಸರಿಯಾಗಿದೆಎ ಎಂದು ಹರ್ಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಧಾನಿ ಸ್ಕಾಟ್ ಮಾರಿಸನ್, ಪದ ಬದಲಾವಣೆ ದೇಶದ ಏಕತೆಯ ಪ್ರತಿರೂಪವಾಗಿದೆ ಎಂದು ಹೇಳಿದ್ದಾರೆ. ಮಾರಿಸನ್ ಸರ್ಕಾರದ ಪದ ಬದಲಾವಣೆ ನಿರ್ಧಾರಕ್ಕೆ ಗವರ್ನರ್ ಜನರಲ್ ಡೇವಿಡ್ ಹರ್ಲಿ ಸಮ್ಮಿತಿ ಸೂಚಿಸಿದ್ದಾರೆ.
ಮಾರಕ ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಮತ್ತು ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಸಂದರ್ಭದಲ್ಲಿ ದೇಶದ ಜನತೆ ತೋರಿರುವ ಅಭೂತಪೂರ್ವ ಏಕತೆಯನ್ನು ಗೌರವಿಸಲು ಕೈಗೊಂಡಿರುವ ಇರ್ಣಯ ಸರಿಯಾಗಿದೆಎ ಎಂದು ಹರ್ಲಿ ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 19, 1984ರಲ್ಲಿ ‘ಗಾಡ್ ಸೇವ್ ದಿ’ ಕ್ವೀನ್’ ಗೀತೆಯ ಬದಲಾಗಿ ಪೀಟರ್ ಡಾಡ್ಸ್ ಮೆಕ್‌ಕಾರ್ಮಿಕ್ ಅವರು 1878 ರಲ್ಲಿ ರಚಿಸಿದ ಗೀತೆಯನ್ನು ಆಸ್ಟ್ರೇಲಿಯಾದ ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಲಾಯಿತು.