ದಿನೇಶ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ನಿನ್ನೆ ( ಜ 5 ) ರಾತ್ರಿ ನಿಧನರಾಗಿದ್ದಾರೆ. ಕೊರೊನ ಸಂಬಂಧಿತ ಸಮಸ್ಯೆಗಳಿಂದ ವರಲಕ್ಷ್ಮಿ ಗುಂಡೂರಾವ್ ಅವರು ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಗುಂಡೂ ರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್ ಅವರು 1996 ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಇನ್ನು ವರಲಕ್ಷ್ಮಿ ಗುಂಡೂರಾವ್ ಅವರು ಮಕ್ಕಳಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತ್ತು ರಾಜೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ.
ವರಲಕ್ಷ್ಮಿ ಗುಂಡೂರಾವ್ ಅವರ ಅಂತ್ಯಕ್ರಿಯೆ ಇಂದು (ಜ.6) ದೇವನಹಳ್ಳಿಯ ತೋಟದಲ್ಲಿ ನಡೆಯಲಿದೆ. ರಾಜಕೀಯದ ಹಲವಾರು ನಾಯಕರು ವರಲಕ್ಷ್ಮಿ ಗುಂಡೂರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.