ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಕಳೆದ ಪಂದ್ಯಗಳಿಗೆ ಅಲಭ್ಯರಾಗಿದ್ದ ರೋಹಿತ್ ಶರ್ಮ ಅವರು ಇದೀಗ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾವನ್ನು ಸೇರಿಕೊಂಡ ಮೊದಲ ಪಂದ್ಯದಲ್ಲಿ ಇದೀಗ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.
ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ರೋಹಿತ್ ಶರ್ಮಾ ಅವರು ಸಿಕ್ಸರ್ ಸಿಡಿಸಿದರು. ಇನ್ನು ರೋಹಿತ್ ಶರ್ಮಾ ಸಿಡಿಸಿದ ಸಿಕ್ಸರ್ ನಿಂದಾಗಿ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಹೌದು ಆಸ್ಟ್ರೇಲಿಯ ತಂಡದ ವಿರುದ್ಧ ರೋಹಿತ್ ಶರ್ಮಾ ಅವರು ಸಿಡಿಸಿದ 100 ನೇ ಸಿಕ್ಸರ್ ಇದಾಗಿದ್ದು, ಆಸ್ಟ್ರೇಲಿಯಾ ವಿರುದ್ಧ 100 ಸಿಕ್ಸರ್ ಗಳನ್ನು ಬಾರಿಸಿದ ಮೊದಲನೆಯ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಅವರು ಭಾಜನರಾದರು.
ಈ ಮೂಲಕ ರೋಹಿತ್ ಶರ್ಮಾ ಅವರು ಭಾಷೆಯಾಗಿದ್ದ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.