ಕಿರುತೆರೆಯ ಬಾದ್ ಷಾ ರಾಕ್ ಸ್ಟಾರ್ ರಕ್ಷ್ ಗೆ ಹುಟ್ಟು ಹಬ್ಬದ ಸಂಭ್ರಮ

Date:

ಡಿ ಬಾಸ್ ಎಂದರೆ ಬಾಕ್ಸಾಫೀಸ್ ರೆಕಾರ್ಡ್.. ಕಿರುತೆರೆಯ ಡಿ ಬಾಸ್ ಎಂದರೆ ಟಿ ಆರ್ ಪಿ ರೆಕಾರ್ಡ್.. ದೊಡ್ಡ ಪರದೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವ ರೀತಿ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡಿ ಮಿಂಚುತ್ತಿದ್ದಾರೆಯೋ ಅದೇ ರೀತಿ ಕಿರುತೆರೆಯಲ್ಲಿ ವೀಕ್ಷಕರ ಪಾಲಿನ ರಾಕ್ ಸ್ಟಾರ್, ಕಿರುತೆರೆಯ ಬಾದ್ ಷಾ ರಕ್ಷ್ ಅವರು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಭರ್ಜರಿ ಟಿಆರ್ಪಿ ಬೇಟೆಯಾಡುತ್ತಾ ಕಿರುತೆರೆಯಲ್ಲಿ ರಾರಾಜಿಸುತ್ತಿದ್ದಾರೆ.

 

 

 

ಒಬ್ಬ ವ್ಯಕ್ತಿಯನ್ನು ಮನೆಯಿಂದ ಸಿನಿಮಾಗೆ ಕರೆ ತರುವುದು ಸುಲಭದ ಮಾತಲ್ಲ. ಆತನಿಗೆ ನನಗೆ ಮನರಂಜನೆ ಸಿಗುತ್ತದೆ ಎಂಬ ನಂಬಿಕೆ ಬಂದರೆ ಮಾತ್ರ ಆತ ಚಿತ್ರಮಂದಿರಕ್ಕೆ ಕಾಲಿಡಬಲ್ಲ. ಅದೇ ರೀತಿ ಫೇಸ್ಬುಕ್, ಇನ್ಸ್ಟಾಗ್ರಾಂ ನ ಈ ಯುಗದಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಅಂಟಿಕೊಂಡಿರುವ ಜನರನ್ನು ಟಿವಿಯತ್ತ ಮುಖ ಮಾಡಿಸುವುದು ಸುಲಭದ ಮಾತಲ್ಲ. ಒಬ್ಬ ವೀಕ್ಷಕ ತನಗೆ ಮನರಂಜನೆ ಸಿಕ್ಕರೆ ಮಾತ್ರ, ತಾನು ನೀಡುವ ಸಮಯಕ್ಕೆ ತಕ್ಕ ನಾದ ತೃಪ್ತಿ ಸಿಕ್ಕರೆ ಮಾತ್ರ ಈಗಿನ ಕಾಲದಲ್ಲಿ ಟಿವಿ ಮುಂದೆ ಅರ್ಧಗಂಟೆ ಕೂರಬಲ್ಲ..! ಇಂತಹ ಜನರೇಶನ್ ನಲ್ಲಿಯೂ ಲಕ್ಷಾಂತರ ಜನರನ್ನು ಸೆಳೆದು ಅರ್ಧಗಂಟೆ ಆಕಡೆ ಈಕಡೆ ಹೋಗದಂತೆ ಟಿವಿ ಮುಂದೆ ಕೂರಿಸುವ ತಾಕತ್ತು ಇರುವುದು ಕಿರುತೆರೆಯ ನಟ ರಕ್ಷ್ ಗೆ ಮಾತ್ರ.. ಅದಕ್ಕೆ ಅಲ್ಲವೇ ಜನ ಇವರನ್ನು ಕಿರುತೆರೆಯ ಡಿ ಬಾಸ್ ಎನ್ನುವುದು..

 

 

ರಕ್ಷ್ ನಟನೆಯ ಗಟ್ಟಿಮೇಳ ಟಿ ಆರ್ ಪಿ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಕಿರುತೆರೆ ಇತಿಹಾಸದಲ್ಲಿ ಯಾವ ಧಾರವಾಹಿಯೂ ಮಾಡಿರದ ಟಿಆರ್ಪಿ ದಾಖಲೆಯನ್ನ ಈ ಸೀರಿಯಲ್ ಮಾಡಿ ಮುಗಿಸಿದೆ. ಇನ್ನು ರಕ್ಷ್ ಪಾಲಿಗೆ ದಾಖಲೆಯ ಟಿಆರ್ಪಿ ಇದು ಹೊಸತೇನಲ್ಲ, ಮಹೇಶನಾಗಿ ಎಲ್ಲರ ಮನವನ್ನು ವರ್ಷಗಳ ಹಿಂದೆಯೇ ಗೆದ್ದು ಬಿಟ್ಟಿದ್ದರು. ಹೌದು ಪುಟ್ಟಗೌರಿ ಮದುವೆ ಧಾರಾವಾಹಿ ಸಹ ಟಿಆರ್ಪಿ ಯಲ್ಲಿ ದಾಖಲೆಯನ್ನು ಬರೆದಿತ್ತು. ಒಟ್ಟಿನಲ್ಲಿ ಕಿರುತೆರೆಯಲ್ಲಿ ದೊಡ್ಡಮಟ್ಟದ ರೆಕಾರ್ಡ್ ಸೃಷ್ಟಿಸಿರುವ ಎರಡೂ ಧಾರಾವಾಹಿಗಳಲ್ಲಿ ಕಾಮನ್ ಫ್ಯಾಕ್ಟರ್ ಮಾತ್ರ “ರಕ್ಷ್”

 

 

ಇನ್ನು ಇದು ಕಿರುತೆರೆಯ ವಿಷಯ, ಹಿರಿತೆರೆಗೆ ಬಂದರೂ ಸಹ ರಕ್ಷ್ ಅವರು ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಕಮರ್ಷಿಯಲ್ ಚಿತ್ರ ಮಾಡಿ, ಒಳ್ಳೆ ಬಿಸಿನೆಸ್ ಮಾಡಿಕೊಂಡು, ಒಂದಷ್ಟು ಹೆಸರಿನೊಂದಿಗೆ ಸೇಫ್ ಆಗಿ ಬಿಡೋಣ ಎನ್ನುವ ಯುವ ನಾಯಕರ ನಡುವೆ ರಕ್ಷ್ ವಿಭಿನ್ನವಾಗಿ ನಿಲ್ಲುತ್ತಾರೆ. ಹೌದು ರಕ್ಷ್ ಕಮರ್ಷಿಯಲ್ ಚಿತ್ರಕ್ಕೆ ಕೈಹಾಕದೇ ‘ನರಗುಂದ ಬಂಡಾಯ’ದಂತಹ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಕನ್ನಡದ ನೆಲ ಮತ್ತು ಜಲದ ಬಗ್ಗೆ ಯುವ ನಟನೊಬ್ಬ ಕಮರ್ಷಿಯಲ್ ಎಲಿಮೆಂಟ್ಸ್ ಗಳನ್ನು ಪಕ್ಕಕ್ಕಿಟ್ಟು ನಟಿಸುತ್ತಾನೆ ಎಂದರೆ ಅದು ಸಾಮಾನ್ಯದ ಮಾತಲ್ಲ.

 

 

ಇನ್ನು ಇಷ್ಟೆಲ್ಲಾ ಕಲೆ, ಚತುರತೆ ಹೊಂದಿರುವ ರಕ್ಷ್ ಜನರಿಗೆ ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆ ನೀಡಬೇಕು ಎಂಬ ತುಡಿತವನ್ನು ಹೊಂದಿದ್ದಾರೆ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ, ಕಿರುತೆರೆ ಹೊರತುಪಡಿಸಿ ನಿಜ ಜೀವನದಲ್ಲಿ ಯಾವುದೇ ಅಹಂ ಇಲ್ಲದೆ ಸರಳವಾಗಿ ಜೀವನ ನಡೆಸುತ್ತಿರುವ ರಕ್ಷ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಿಗೂ ಶುಭವಾಗಲಿ ಎಂದು ಆಶಿಸೋಣ..

 

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...