ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಕೆಲ ಡ್ರಗ್ಸ್ ಪೆಡ್ಲರ್‍ಗಳು ಹಾಗೂ ಪಾರ್ಟಿ ಆಯೋಜಕರು ಆದಿತ್ಯ ಆಳ್ವ ಅವರ ಬಗ್ಗೆ ಕೆಲವು ಮಾಹಿತಿಗಳನ್ನು ವಿಚಾರಣೆ ಸಂದರ್ಭದಲ್ಲಿ ನೀಡಿದ್ದಾರೆ. ಆದಿತ್ಯ ಆಳ್ವ ಅವರ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್‍ನಲ್ಲಿ ಪಾರ್ಟಿಗಳು ನಡೆಯುತ್ತಿದ್ದವು ಎಂಬುದನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಈ ನಿಟ್ಟಿನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪಾರ್ಟಿ ಆಯೋಜಕರಾದ ವೀರೇನ್ ಖನ್ನಾ, ಶ್ರೀನಿವಾಸ್ ಹಾಗೂ ವಿದೇಶಿ ಡ್ರಗ್ಸ್ ಪೆಡ್ಲರ್ ಲೂಯಿ ಪೆಪ್ಪರ್ ಹಾಗೂ ಇನ್ನಿತರ ಡ್ರಗ್ಸ್ ಪೆಡ್ಲರ್‍ಗಳು ನಿಮಗೆ ಗೊತ್ತೇ? ಪಾರ್ಟಿಗೆ ಯಾವ ಯಾವ ನಟ-ನಟಿಯರು, ರಾಜಕಾರಣಿಗಳು ಹಾಗೂ ಗಣ್ಯವ್ಯಕ್ತಿಗಳ ಮಕ್ಕಳು ಬರುತ್ತಿದ್ದರು ಎಂಬುದರ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಆದರೆ ಈ ಎಲ್ಲಾ ವಿಚಾರಣೆ ಇಂದ ಕೆಲ ರಾಜಕಾರಣಿ ಮಕ್ಕಳು ಹಾಗೂ ಚಿತ್ರ ತಾರೆ ಗಳ ಮಕ್ಕಳಿಗೆ ನಡುಕ ಹುಟ್ಟಲಿದ್ಯಾ ಎಂಬ ಪ್ರಶ್ನೆ ಮುಡುತ್ತಿದೆ, ಸಿಸಿಬಿ ಬಲೆಗೆ ಈಗಾಗಲೆ ಬಹಳಷ್ಟು ಜನ ಸಿಕ್ಕಿದ್ದು ಇನ್ನಷ್ಟು ಆರೋಪಿಗಳನ್ನ ಹುಡುಕಾಟದಲ್ಲಿ ಸಿಸಿಬಿ ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.