ಟೆಂಪೋ ಟ್ರಾವೆಲರ್ಗೆ ಟಿಪ್ಪರ್ ಡಿಕ್ಕಿ ಹೊಡೆದು 11 ಜನ ಮೃತಪಟ್ಟಿರುವ ಭೀಕರ ಅಪಘಾತವೊಂದು ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.ಲೇಡಿಸ್ ಕ್ಲಬ್‍ನ ಒಟ್ಟು 17 ಮಂದಿ ಮಹಿಳೆಯರು ಸಂಕ್ರಮಣ ಹಿನ್ನೆಲೆ ಟೆಂಫೋ ಟ್ರಾವೆಲರ್‍ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಧಾರವಾಡದ ಇಟಗಟ್ಟಿ ಬೈಪಾಸ್ ಬಳಿ ಬೆಳಗಿನ ಜಾವ 3.30ರ ಸುಮಾರಿನಲ್ಲಿ ಎದುರಿನಿಂದ ಬಂದ ಟಿಪ್ಪರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಟೆಂಫೋದಲ್ಲಿದ್ದ 10 ಮಂದಿ ಮಹಿಳೆಯರು ಮೃತಪಟ್ಟಿದ್ದು, ಟಿಪ್ಪರ್ ಚಾಲಕ ಕೂಡ ಅಸುನೀಗಿದ್ದಾನೆ.
ಗಾಯಗೊಂಡವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲು ಹಲವು ಸಮಯದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಇನ್ನು ಅಪಘಾತದಲ್ಲಿ ಹಲವರು ಸಾವನಪ್ಪಿರು ಶಂಕೆ ವ್ಯಕ್ತವಾಗಿದ್ದು, ಟೆಂಪೋ ಒಳಗೆ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ