ರಾಮ್ ಗೋಪಾಲ್ ವರ್ಮಾ.. ಈ ನಿರ್ದೇಶಕನ ಹೆಸರು ಕೇಳಿದರೆ ಸಾಕು ಮೊದಲು ತಲೆಗೆ ಬರುವುದೇ ಕಾಂಟ್ರಾವರ್ಸಿ! ಹೌದು ಒಂದಲ್ಲ ಒಂದು ಹೇಳಿಕೆ ನೀಡುವ ಮುಖಾಂತರ ವಿವಾದ ಎಬ್ಬಿಸುವುದೇ ಈತನ ಕೆಲಸ. ಇತ್ತೀಚಿನ ದಿನಗಳಲ್ಲಿ ಕಂಟೆಂಟ್ ಇರುವ ಸಿನಿಮಾ ಮಾಡಲಾಗದ ಈತ ಟ್ವಿಟರ್ನಲ್ಲಿ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡ್ತಾ ಇರ್ತಾನೆ.
ಇನ್ನು ರಾಮ್ ಗೋಪಾಲ್ ವರ್ಮಾ ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗ ಮತ್ತು ಕೆಜಿಎಫ್ ಚಿತ್ರವನ್ನು ಹೊಗಳಿ ಟ್ವೀಟ್ ಮಾಡಿದ್ದಾನೆ. ಇದು ಖುಷಿಪಡುವ ವಿಚಾರವೇ ಸರಿ, ಆದರೆ ಕೆಜಿಎಫ್ ಚಿತ್ರವನ್ನು ಹೊಗಳುವ ನಿಟ್ಟಿನಲ್ಲಿ ರಾಮ್ ಗೋಪಾಲ್ ವರ್ಮಾ ಕನ್ನಡ ಚಿತ್ರರಂಗದ ಇತಿಹಾಸವನ್ನು ಮರೆತಿದ್ದಾನೆ ಎನಿಸುತ್ತದೆ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಅನಂತನಾಗ್ ಮತ್ತು ಅಂಬರೀಶ ರಂತಹ ಕನ್ನಡದ ಮೇರು ನಟರು ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು.
ಇದನ್ನೆಲ್ಲಾ ಅರಿಯದ ರಾಮ್ ಗೋಪಾಲ್ ವರ್ಮಾ ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರರಂಗವನ್ನು ಯಾರು ಸಹ ಗಣನೆಗೆ ತೆಗೆದು ಕೊಳ್ಳುತ್ತಿರಲಿಲ್ಲ, ಕೆಜಿಎಫ್ ಬಂದಮೇಲೆ ಕನ್ನಡ ಚಿತ್ರರಂಗ ನೆಕ್ಸ್ಟ್ ಲೆವೆಲ್ ಗೆ ಹೋಯಿತು ಎಂದು ಟ್ವೀಟ್ ಮಾಡಿದ್ದಾನೆ. ಹೀಗೆ ಟ್ವೀಟ್ ಮಾಡುವ ಮುಖಾಂತರ ರಾಜಣ್ಣ, ವಿಷ್ಣು, ಶಂಕರನಾಗ್, ಅನಂತನಾಗ್ ಮತ್ತು ಅಂಬರೀಶ್ ಅವರು ಕಟ್ಟಿ ಬೆಳೆಸಿದ್ದ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅವಮಾನ ಮಾಡಿದ್ದಾನೆ..
ಆತನ ಹೇಳಿಕೆ ಪ್ರಕಾರ ಎರಡು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಯಾರು ಸಹ ಗೌರವ ಕೊಡ್ತಾ ಇರ್ಲಿಲ್ವಂತೆ.. ಕೆಜಿಎಫ್ ಗಿಂತ ಮುಂಚೆ ಕನ್ನಡ ಚಿತ್ರರಂಗಕ್ಕೆ ಬೆಲೆ ಇರಲಿಲ್ಲವಂತೆ..! ರಾಜಣ್ಣನ ಕಾಲದ ಸಿನಿಮಾಗಳನ್ನು ಬಿಡಿ.. ಶಿವಣ್ಣ ಅವರ ಜೋಗಿ, ದರ್ಶನ್ ಅವರ ಕರಿಯ, ಯಶ್ ಅವರ ರಾಮಾಚಾರಿ, ಪುನೀತ್ ಅವರ ರಾಜಕುಮಾರ & ಇತ್ತೀಚೆಗೆ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳು ಮಾಡಿದ ರೆಕಾರ್ಡ್, ಪಡೆದುಕೊಂಡ ಪ್ರಶಂಸೆಗಳು, ಅಂತರಾಷ್ಟ್ರೀಯ ಮಟ್ಟಕ್ಕೆ ಮಾಡಿದ್ದ ಸದ್ದು ಇದ್ಯಾವುದೂ ಸಹ ರಾಮ್ ಗೋಪಾಲ್ ವರ್ಮಾನಿಗೆ ತಿಳಿದಿಲ್ಲ ಎನಿಸುತ್ತದೆ..
ಮೇಲ್ಕಂಡ ಚಿತ್ರಗಳಷ್ಟೇ ಅಲ್ಲದೆ ಇನ್ನು ಹಲವಾರು ಚಿತ್ರಗಳು ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವೆ. ಕನ್ನಡ ಚಿತ್ರರಂಗದ ಗತ್ತು ಗಮ್ಮತ್ತು ಏನು ಎಂಬುದು ಕಳೆದ ಎರಡು ವರ್ಷಗಳಿಂದ ಬದಲಾಗಿಲ್ಲ.. ಹಿಂದಿನಿಂದಲೂ ಸಹ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಗತ್ತು ಗಮ್ಮತ್ತು ಗಾಂಭೀರ್ಯ ಇದೆ. ವರ್ಮಾ ಕೆಲಸಮಾಡುತ್ತಿರುವ ತೆಲುಗು ಭಾಷೆಯ ಮೇರು ನಟರು ರಾಜಣ್ಣ ವಿಷ್ಣು ಅವರಿಗೆ ಎಷ್ಟು ಗೌರವ ಕೊಡುತ್ತಿದ್ದರು, ಅಣ್ಣಾವ್ರು ಮತ್ತು ವಿಷ್ಣು ಅವರ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದರು ಎಂಬುದು ವರ್ಮಾನಿಗೆ ತಿಳಿದಿಲ್ಲ ಎನಿಸುತ್ತದೆ. ಇತರ ಭಾಷೆಯ ಕಲಾವಿದರು ಸಹ ಕನ್ನಡ ಚಿತ್ರರಂಗವನ್ನು ಗೌರವಿಸುತ್ತಾರೆ. ಕನ್ನಡ ಚಿತ್ರರಂಗದ ಗತವೈಭವದ ಬಗ್ಗೆ ವಯಸ್ಕರ ಚಿತ್ರ ಮಾಡಿ ದುಡ್ಡು ಮಾಡಿ, ಕಂಠಪೂರ್ತಿ ಕುಡಿದು ತೇಲಾಡುವ ರಾಮ್ ಗೋಪಾಲ್ ವರ್ಮಾ ನಂತಹ ತಲೆಕೆಟ್ಟ ನಿರ್ದೇಶಕರಿಗೆ ಏನು ಗೊತ್ತು??
