ಕರ್ನಾಟಕದಲ್ಲಿ ಕೊರೊನಾ ವೈರಸ್‌ನ ಆತಂಕ ಭಾಗಶಃ ಕಡಿಮೆಯಾಗಿದ್ದು, ಜನಜೀವನ ಮೊದಲಿನ ರೀತಿಗೆ ಮರಳುತ್ತಿದೆ. ಹೌದು, ಸೋಮವಾರ 435 ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 973 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 9 ಜನ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ.
ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,32,432ಕ್ಕೆ ಏರಿದೆ. ಇದರಲ್ಲಿ 9,12,205 ಜನ ಚೇತರಿಸಿಕೊಂಡಿದ್ದಾರೆ. 8,033 ಪ್ರಕರಣಗಳು ಸಕ್ರಿಯವಾಗಿದ್ದು, 12,175 ಜನ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. 177 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದ ಪಾಸಿಟಿವಿಟಿ ಪ್ರಮಾಣ ಶೇ.0.62ರಷ್ಟಿದ್ದರೆ, ಮರಣ ಪ್ರಮಾಣ ಶೇ.2.06ರಷ್ಟಿದೆ.
ಇನ್ನು, ಬೆಂಗಳೂರಿನಲ್ಲಿ ಸೋಮವಾರ 193 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,95,152ಕ್ಕೆ ಏರಿದೆ. ಇದುವರೆಗೂ 3,85,512 ಜನ ಗುಣಮುಖರಾಗಿದ್ದಾರೆ. 5,273 ಪ್ರಕರಣಗಳು ಸಕ್ರಿಯವಾಗಿದ್ದು, 4,366 ಜನ ಕೊರೊನಾ ಕಾರಣದಿಂದ ಸಿಲಿಕಾನ್ ಸಿಟಿಯಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ 03, ಬಳ್ಳಾರಿ 07, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 04, ಬೀದರ್ 04, ಚಾಮರಾಜನಗರ 01, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 07, ಚಿತ್ರದುರ್ಗ 17, ದಕ್ಷಿಣ ಕನ್ನಡ 13, ದಾವಣಗೆರೆ 08, ಧಾರವಾಡ 06, ಗದಗ 01 ಹಾಗೂ ಹಾಸನದಲ್ಲಿ 07 ಕೇಸ್‌ಗಳು ಕಂಡುಬಂದಿವೆ.
ಇನ್ನು, ಕಲಬುರಗಿಯಲ್ಲಿ 11, ಕೊಡಗು 14, ಕೋಲಾರ 16, ಕೊಪ್ಪಳ 01, ಮಂಡ್ಯ 05, ಮೈಸೂರು 35, ರಾಯಚೂರು 05, ರಾಮನಗರ 01, ಶಿವಮೊಗ್ಗ 15, ತುಮಕೂರು 26, ಉಡುಪಿ 01, ಉತ್ತರ ಕನ್ನಡ 07, ವಿಜಯಪುರ 02 ಹಾಗೂ ಯಾದಗಿರಿಯಲ್ಲಿ 04 ಹೊಸ ಕೇಸ್‌ಗಳು ಪತ್ತೆಯಾಗಿವೆ. ಹಾವೇರಿಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿವೆ.