ಲಾಲ್ ಪ್ರಸಾದ್ ಪರಿಸ್ಥಿತಿ ಗಂಭೀರ

Date:

ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್‌ ಯಾದವ್‌ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ಕ್ಷಣ ಕ್ಷಣಕ್ಕೂ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ರಾಂಚಿಯಿಂದ ದಿಲ್ಲಿಗೆ ವರ್ಗಾಯಿಸಿ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವರ ಪುತ್ರ ತೇಜಸ್ವಿ ಯಾದವ್‌ ಮತ್ತು ಕುಟುಂಬಸ್ಥರು ರಾಂಚಿಯಲ್ಲಿ ಬೀಡು ಬಿಟ್ಟಿದ್ದು, ರಾಂಚಿಯಿಂದ ದಿಲ್ಲಿಗೆ ಕರೆದುಕೊಂಡು ಹೋಗುವ ವೇಳೆ ಜತೆಯಾಗುವ ಸಾಧ್ಯತೆ ಇದೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಲಾಲು ಪ್ರಸಾದ್‌ ಯಾದವ್‌ ಅವರಿಗೆ ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯೇ ಅವರು ಮೇವು ಹಗರಣದ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ.
ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದಕ್ಕೆ ಜೈಲಿನ ವೈದ್ಯಕೀಯ ಮಂಡಳಿ ಒಪ್ಪಿಗೆ ನೀಡಿದೆ. ಅವರನ್ನು ದಿಲ್ಲಿಗೆ ಕರೆದೊಯ್ಯಲು ಜೈಲಿನ ಆಡಳಿತ ಕೆಳ ಹಂತದ ನ್ಯಾಯಾಲಯದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗಿದೆ.
ತಾವು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಜತೆ ಮಾತುಕತೆ ನಡೆಸಿ ತಂದೆಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೇಳುತ್ತೇನೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.
“ನಾವು ಅವರಿಗೆ ಉತ್ತಮ ಚಿಕಿತ್ಸೆಯನ್ನು ಬಯಸುತ್ತಿದ್ದೇವೆ. ಆದರೆ ಯಾವ ಸ್ವರೂಪದ ಚಿಕಿತ್ಸೆ ಬೇಕು ಎಂಬುದನ್ನು ವಿವಿಧ ಪರೀಕ್ಷೆಗಳ ವರದಿ ಬಂದ ಬಳಿಕ ವೈದ್ಯರು ನಿರ್ಧರಿಸುತ್ತಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ,” ಎಂದು ತೇಜಸ್ವಿ ಯಾದವ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಈಗಾಗಲೇ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಕಿಡ್ನಿ ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಅವರಿಗೆ ನ್ಯುಮೋನಿಯಾ ಕೂಡ ಇದೆ. ಅವರು ಉಸಿರಾಡುವಾಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದೂ ತೇಜಸ್ವಿ ಯಾದವ್‌ ವಿವರಿಸಿದ್ದಾರೆ.
ಮೇವು ಹಗಣರದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್‌ ಯಾದವ್‌ 2017ರಿಂದ ಜೈಲಿನಲ್ಲಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಜೇಂದ್ರ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಅವರು ತಮ್ಮ ಜೈಲು ಶಿಕ್ಷೆಯ ಹೆಚ್ಚಿನ ಅವಧಿಯನ್ನು ಕಳೆದಿದ್ದಾರೆ.

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...