ಹಿಂದೂ ದೇವರಾದ ಹನುಮಂತನ ಫೋಟೋವನ್ನು ಹಾಕಿ ಬ್ರೆಜಿಲ್ ದೇಶದ ಅಧ್ಯಕ್ಷರು ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು ನರೇಂದ್ರ ಮೋದಿ ಅವರಿಗೆ ಧನ್ಯವಾದವನ್ನು ತಿಳಿಸಲು ಬ್ರೆಜಿಲ್ ದೇಶದ ಅಧ್ಯಕ್ಷರು ಹನುಮಂತನ ಫೋಟೋವನ್ನ ಟ್ವಿಟ್ಟರ್ ನಲ್ಲಿ ಬಳಸಿದ್ದಾರೆ.
ಬ್ರೆಜಿಲ್ ದೇಶದ ಅಧ್ಯಕ್ಷರು ಈ ರೀತಿ ಹನುಮಂತನ ಫೋಟೋವನ್ನು ಬಳಸಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಲು ಕಾರಣ ಭಾರತ ದೇಶ ಬ್ರೆಜಿಲ್ ದೇಶಕ್ಕೆ ಕೋವಿಡ್ ವ್ಯಾಕ್ಸಿನ್ ಗಳನ್ನು ಸರಬರಾಜು ಮಾಡಿರುವುದು. ಹೌದು ಭಾರತದಲ್ಲಿ ತಯಾರಾಗಿರುವ ಕೋವಿಡ್ ಲಸಿಕೆಗಳನ್ನು ಬ್ರೆಜಿಲ್ ದೇಶಕ್ಕೆ ಸರಬರಾಜು ಮಾಡಲಾಗಿದೆ. ಭಾರತ ದೇಶ ಮಾಡಿದ ಈ ಒಂದು ಸಹಾಯವನ್ನು ಬ್ರೆಜಿಲ್ ದೇಶದ ಅಧ್ಯಕ್ಷರು ಹಾಡಿ ಹೊಗಳಿದ್ದು ಟ್ವಿಟರ್ನಲ್ಲಿ ಹನುಮಂತನು ಭಾರತದಿಂದ ಬ್ರೆಜಿಲ್ ದೇಶಕ್ಕೆ ಕೊವಿಡ್ ಲಸಿಕೆ ಹೊತ್ತು ಹೋಗುವ ಚಿತ್ರವನ್ನು ಶೇರ್ ಮಾಡಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.