ಸಫಾರಿಗೆ ಬ್ರೇಕ್ ಹಾಕಿ ಅಂದ ರಮ್ಯಾ!

Date:

ತಮಿಳುನಾಡಿನಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಆನೆಯೊಂದರ ಮೇಲೆ ಬೆಂಕಿಹಚ್ಚಿದ ಟೈರ್ ಎಸೆದಿದ್ದರು. ನೋವು ತಾಳಲಾರದೆ ಆನೆ ಪ್ರಾಣ ಬಿಟ್ಟಿತ್ತು. ಈ ಹೃದಯವಿದ್ರಾವಕ ಘಟನೆ ನಡೆದ ಬೆನ್ನಲೇ ನಟಿ ರಮ್ಯಾ / ದಿವ್ಯಸ್ಪಂದನಾ ಅವರು ಪ್ರಾಣಿಗಳ ಕುರಿತಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಹಾಗೂ ರಾಜಕಾರಣದಿಂದ ದೂರವಿರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಆಗಾಗ ಅವರ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ.
“ಯಾಕೆ ನಾವು ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ? ಯಾಕೆ ನಾವು ಕರುಣೆಯಿಂದ ಇರೋದಿಲ್ಲ? ಎಲ್ಲ ಜೀವಿಗಳು ಭೂಮಿಯನ್ನು ಆಧರಿಸಿವೆ? ಎಲ್ಲರೂ ಶಾಂತಿಯುತವಾಗಿ ಬದುಕಬೇಕು ಎಂದು ನಾವು ಯಾವಾಗ ಕಲಿಯುತ್ತೇವೆ? ಮಾನವರು ಜಗತ್ತಿನಲ್ಲಿ ಬದುಕಲು ಕೆಟ್ಟ ಜೀವಿಗಳು. ನನ್ನ ಹೃದಯ ಅಳುತ್ತಿದೆ. ಎಲ್ಲವೂ ಸರಿ ಇದೆ ಅಂತ ನಾವು ಸುಮ್ಮನಿರಲಾಗೋದಿಲ್ಲ. ನಾವು ಮಾತನಾಡದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಜಗತ್ತು ಹಾಳಾಗುವುದು. ದಯವಿಟ್ಟು ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ. ಈಗಾಗಲೇ ನಾವು ಅವರ ಜಾಗ, ಆಹಾರ, ನೀರನ್ನು ಪಡೆದಿದ್ದೇವೆ” ಎಂದು ನಟಿ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
“ಈಗಾಗಲೇ ಪ್ರಾಣಿಗಳ ಬದುಕನ್ನು ಚಿಂತಾಜನಕವಾಗಿ ಮಾಡಿದ್ದೇವೆ. ಪ್ರಾಣಿಗಳು ನಮ್ಮನ್ನು ನೋಡಲು ಇಷ್ಟಪಡೋದಿಲ್ಲ. (ಬನ್ನೇರುಘಟ್ಟದಲ್ಲಿ ಇತ್ತೀಚೆಗೆ ಹುಲಿಯೊಂದು ಅಸಮಾಧಾನ ಹೊರಹಾಕಿತ್ತು) ನೀವು ಎಷ್ಟು ಹೋಗುತ್ತೀರೋ ಅಷ್ಟು ಕಾಡಿನಲ್ಲಿ ರೆಸಾರ್ಟ್ಸ್‌ಗಳು ಆಗುತ್ತವೆ. ದುರಾಸೆ, ಸ್ವಾರ್ಥದಿಂದ ಕೂಡಿರಬೇಡಿ. ಪ್ರಾಣಿಗಳಿಗೂ ಪ್ರೀತಿ, ಗೌರವ ಪಡೆಯುವ, ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವ ಅರ್ಹತೆಯಿದೆ. ನೀವು ಪ್ರಾಣಿಗಳನ್ನು ಇಷ್ಟಪಟ್ಟರೆ ಅವರನ್ನು ಅವರ ಪಾಡಿಗೆ ಬಿಡಿ. ಜೂಗಳಿಗೆ ಹೋಗಬೇಕು ಅಂತೇನಿಲ್ಲ. ಅವುಗಳ ಫೋಟೋ ತೆಗೆಯಬೇಕು ಅಂತೇನಿಲ್ಲ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಬೇಕು ಅಂತೇನಿಲ್ಲ. ನೀವು ಯೋಚಿಸಿದಂತೆ ಪ್ರಾಣಿಗಳು ರಾಯಲ್, ಸುಂದರ ಅಂತಲ್ಲದೆ ನೀವು ನಿಮಗಾಗಿ ಇದನ್ನೆಲ್ಲ ಮಾಡುತ್ತೀರಿ” ಎಂದು ರಮ್ಯಾ ಹೇಳಿದ್ದಾರೆ.
“ಏಕಾಗ್ರತೆ ಪಡೆಯಬೇಕು ಅಂತ ಬಯಸಿದರೆ ನಿಮ್ಮನ್ನು ನೀವೆ ಯಾಕೆ ಅಂತ ಆತ್ಮಾವಲೋಕನ ಮಾಡಿಕೊಳ್ಳಿ. ಪರ್ವತ, ಕಾಡಿನಲ್ಲಿ, ಸಮುದ್ರದಲ್ಲಿ ಏಕಾಗ್ರತೆ ಸಿಗೋದಿಲ್ಲ. ಏಕಾಗ್ರತೆ ನಿಮ್ಮಲ್ಲಿಯೇ ಇದೆ. ಜಗತ್ತನ್ನು ಹಾಳು ಮಾಡುವುದರ ಬದಲು ನಿಮ್ಮನ್ನು ನೀವೇ ಏನು ಅಂತ ಕಂಡುಕೊಳ್ಳಿ, ರಂಜಿಸಿಕೊಳ್ಳಿ. ನಿಮ್ಮ ಸ್ವಾತಂತ್ರ್ಯವು ಬೇರೆ ಜೀವಿಗಳನ್ನು ಹಾಳು ಮಾಡೋದರಿಂದ ಬರೋದಿಲ್ಲ” ಎಂದು ನಟಿ ರಮ್ಯಾ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...