ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಇತ್ತೀಚೆಗೆ ಧಾರ್ಮಿಕ ಕ್ಷೇತ್ರವಾದ ವಾರಣಾಸಿ ತೆರಳಿ ಖ್ಯಾತ ಕಾಶಿ ವಿಶ್ವನಾಥ ಹಾಗೂ ಕಾಲ ಭೈರವ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈ ವೇಳೆ ದೋಣಿಯಲ್ಲಿ ಪ್ರಯಾಣಿಸಿದ ಸಂದರ್ಭದಲ್ಲಿ ಧವನ್ ಪಕ್ಷಿಗಳಿಗೆ ಆಹಾರವನ್ನು ತಿನ್ನಿಸಿದ್ದರು. ಶಿಖರ್ ಧವನ್ ಹಂಚಿಕೊಂಡ ಈ ಫೋಟೋದಿಂದಾಗಿ ಬೇರೊಬ್ಬರನ್ನು ಸಂಕಷ್ಟಕ್ಕೆ ಒಡ್ಡಿದೆ.
ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಧವನ್ ಹಂಚಿಕೊಂಡು “ಸಂತೋಷವೇನೆಂದರೆ ಪಕ್ಷಿಗಳಿಗೆ ಆಹಾರವನ್ನು ತಿನ್ನಿಸುವುದು” ಎಂದು ಬರೆದುಕೊಂಡಿದ್ದರು. ಈ ಫೋಟೋ ಈಗ ಧವನ್ ಪ್ರಯಾಣಿಸಿದ್ದ ಬೋಟ್‌ನ ಚಾಲಕನಿಗೆ ಸಂಕಷ್ಟವನ್ನು ಉಂಟುಮಾಡಿದೆ.
ಹಕ್ಕಿ ಜ್ವರ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಹಕ್ಕಿಗಳಿಗೆ ಆಹಾರ ನೀಡುವುದಕ್ಕೆ ಸ್ಥಳೀಯಾಡಳಿತ ನಿಷೇಧವನ್ನು ಹೇರಿತ್ತು. ಹೀಗಾಗಿ ಶಿಖರ್ ಧವನ್ ಹಕ್ಕಿಗಳಿಗೆ ಆಹಾರವನ್ನು ನೀಡುವ ಫೋಟೋ ಹಂಚಿಕೊಂಡಿರುವುದನ್ನು ಆಧರಿಸಿ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಧವನ್ ಪ್ರಯಾಣಿಸಿದ್ದ ಬೋಟ್‌ಮ್ಯಾನ್‌ಗೆ ನೋಟಿಸ್ ಕಳುಹಿಸಿದ್ದಾರೆ.
ಈ ಬಗ್ಗೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದು “ಕೆಲವು ಬೋಟ್‌ಮ್ಯಾನ್‌ಗಳು ಆಡಳಿತದ ಸೂಚನೆಯನ್ನು ಪಾಲಿಸುತ್ತಿಲ್ಲ. ಅವರ ದೋಣಿಗಳಲ್ಲಿ ಪ್ರವಾಸಿಗರು ಪಕ್ಷಿಗಳಿಗೆ ಆಹಾರವನ್ನು ನಿಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಹಾಗಾಗಿ ಅಂತಾ ಬೋಟ್‌ಮ್ಯಾನ್‌ಗಳನ್ನು ಗುರುತಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರವಾಸಿಗರಿಗೆ ಈ ಬಗ್ಗೆ ಮಾಹಿತಿಗಳು ಇರುವುದಿಲ್ಲ” ಎಂದಿ ವಾರಾಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.