ಇಂದು ದೇಶದ ಅತ್ಯಂತ 72ನೇ ಗಣ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬಹುಮುಖ್ಯವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಕನ್ನಡದ ವರನಟ ಡಾ. ರಾಜಕುಮಾರ್ ಅವರು ರಾರಾಜಿಸಿದರು. ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೆರವಣಿಗೆ ಮಾಡಲಾಯಿತು. ಹೀಗೆ ಮೆರವಣಿಗೆ ಮಾಡಲಾದ ಸ್ತಬ್ಧ ಚಿತ್ರಗಳಲ್ಲಿ ಕರ್ನಾಟಕದ ಪರವಾಗಿ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ ಇತ್ತು.
ವಿಜಯನಗರ ಸಾಮ್ರಾಜ್ಯವನ್ನು ಸ್ತಬ್ಧ ಚಿತ್ರದ ಮೂಲಕ ಮರುಸೃಷ್ಟಿ ಮಾಡಲಾಗಿತ್ತು. ಈ ಸ್ತಬ್ಧಚಿತ್ರದಲ್ಲಿ ಅಣ್ಣಾವ್ರು ಅಭಿನಯಿಸಿದ ಕೃಷ್ಣದೇವರಾಯ ಪಾತ್ರದ ಮೂರ್ತಿಯನ್ನು ಇರಿಸಲಾಗಿತ್ತು. ಹೌದು ಅಣ್ಣಾವ್ರ ಮೂರ್ತಿಯನ್ನು ಈ ಸ್ತಬ್ಧಚಿತ್ರದಲ್ಲಿ ಇರಿಸಲಾಗಿತ್ತು. ಈ ಒಂದು ಸ್ತಬ್ಧಚಿತ್ರ ಕನ್ನಡಿಗರ ಮನಸ್ಸನ್ನು ಗೆದ್ದಿದೆ.